Jyothi Rai: ಜ್ಯೋತಿ ರೈ ಅಶ್ಲೀಲ ವೀಡಿಯೋ, ಫೋಟೋ ವೈರಲ್ : ಈ ಬಗ್ಗೆ ನಟಿ ಕೊಟ್ರು ಸ್ಪಷ್ಟನೆ ಅಸಲಿಗೆ ಏನಾಯ್ತು?

Written by Soma Shekar

Published on:

---Join Our Channel---

Jyothi Rai: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪ್ರಕರಣ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಈ ವಿಚಾರವಾಗಿ ಈಗಾಗಲೇ ಭಾರೀ ಮಟ್ಟದಲ್ಲಿ ಚರ್ಚೆಗಳು ನಡೆಯುವಾಗಲೇ ಕನ್ನಡ ಮತ್ತು ತೆಲುಗು ಕಿರುತೆರೆ ಲೋಕದಲ್ಲಿ ಖ್ಯಾತ ನಟಿಯಾಗಿ ಮಿಂಚುತ್ತಿರುವ ಜ್ಯೋತಿ ರೈ (Jyothi Rai) ಅವರದ್ದು ಎನ್ನಲಾದ ಅಶ್ಲೀ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುವ ಮೂಲಕ ದೊಡ್ಡ ಶಾಕ್ ಅನ್ನು ನೀಡಿದೆ. ಅಲ್ಲದೇ ಎಕ್ಸ್ ವೇದಿಕೆಯಲ್ಲೊಬ್ಬ ಖಾತೆದಾರರು ತಮ್ಮ ಯೂಟ್ಯೂಬ್ ಚಾನೆಲ್ ಗೆ ಸಾವಿರ ಸಬ್ಸ್ಕ್ರೈಬರ್ ಗಳಾದ ಕೂಡಲೇ ನಟಿಯ ಅಶ್ಲೀಲ ವೀಡಿಯೋವನ್ನು ಹಂಚಿಕೊಳ್ಳುವುದಾಗಿ ಹೇಳುವ ಮೂಲಕ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.

ಈ ವಿಚಾರವಾಗಿ ಸ್ವತಃ ನಟಿ ಜ್ಯೋತಿರೈ ಅವರೇ ಸ್ಪಷ್ಟನೆಯನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತಹ ಅಶ್ಲೀಲ ವೀಡಿಯೋ ಮತ್ತು ಫೋಟೋಗಳ ಕುರಿತಾಗಿ ನಟಿಯು ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಸ್ಪಷ್ಟನೆಯನ್ನು ನೀಡಿಲ್ಲವಾದರೂ ಅವರು ಈಗಾಗಲೇ ಸೈಬರ್ ಕ್ರೈಂ (Cyber Crime) ವಿಭಾಗಕ್ಕೆ ದೂರನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಸಂದೇಶಗಳನ್ನು ಸ್ವೀಕರಿಸುವ ಮೂಲಕ ನಾನು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದೇನೆ ಅಂತ ನಟಿ ಹೇಳಿದ್ದಾರೆ.

ನನ್ನ ಜನಪ್ರಿಯತೆ ಮತ್ತು ಕುಟುಂಬದ ಪ್ರತಿಷ್ಠೆ ಅಪಾಯದಲ್ಲಿರುವ ಕಾರಣ ಈ ಸಾಮಾಜಿಕ ಬಳಕೆದಾರರು/ವ್ಯಕ್ತಿಗಳ ವಿರುದ್ಧ ಸರಿಯಾದ ಮತ್ತು ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕೆಂದು ವಿನಂತಿಯನ್ನು ಮಾಡಿಕೊಳ್ಳುತ್ತಿದ್ದೇನೆ. ಅಲ್ಲದೇ ಈ ಬಳಕೆದಾರರು ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಹೋದಲ್ಲಿ ನಾನು ಹಾನಿಯನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಪರಿಶೀಲನೆ ಮತ್ತು ತನಿಖೆಗಾಗಿ ನಾನು ಬಳಕೆದಾರರ ಎಲ್ಲಾ ಐಡಿಗಳ ಟಿಪ್ಪಣಿಯನ್ನು ಲಗತ್ತು ಮಾಡಿದ್ದೇನೆ.

ಇತ್ತೀಚಿ‌ನ ದಿನಗಳಲ್ಲಿ ನನ್ನ ಫೋನ್ ನಂಬರಿಗೆ ಕೆಲವೊಂದು ಮೆಸೇಜ್ ಗಳು ಬಂದಿದೆ ಅದನ್ನು ನೋಡಿ ನನಗೆ ಶಾಕ್ ಆಗಿದೆ. ಆದಷ್ಟು ಬೇಗ ಸೂಕ್ತ ಕ್ರಮವನ್ನು ತೆಗೆದುಕೊಳ್ಳಿ ಎನ್ನುವುದಾಗಿ ನಟಿಯು ಮನವಿಯನ್ನ ಮಾಡಿಕೊಂಡಿದ್ದಾರೆ. ಜ್ಯೋತಿರೈ ಅವರು ಕನ್ನಡ ಕಿರುತೆರೆಯಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಕೆಲವು ಸಿನಿಮಾಗಳಲ್ಲಿಯೂ ನಟಿಸಿರುವ ಅವರು ಪ್ರಸ್ತುತ ತೆಲುಗು ಕಿರುತೆರೆ ಮತ್ತು ವೆಬ್ ಸೀರೀಸ್ ಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಮತ್ತು ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕವೇ ದೊಡ್ಡ ಸದ್ದನ್ನು ಮಾಡುವ ನಟಿ ತೆಲುಗಿನ ನಿರ್ದೇಶಕ ಸುಕು ಪೂರ್ವಜ್ ಜೊತೆಗೆ ಎರಡನೇ ವಿವಾಹಕ್ಕೆ ಸಿದ್ಧತೆಗಳನ್ನು ನಡೆಸಿದ್ದು, ಕೆಲವೇ ದಿನಗಳ ಹಿಂದೆಯಷ್ಟೇ ನಟಿಯು ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದರು. ಇವೆಲ್ಲವುಗಳ ನಡುವೆ ನಟಿಯದ್ದು ಎನ್ನಲಾದ ಅಶ್ಲೀಲ ಫೋಟೋಗಳು ಮತ್ತು ವೀಡಿಯೋಗಳು ವೈರಲ್ ಆಗುವ ಮೂಲಕ ಸುದ್ದಿಗೆ ಗ್ರಾಸವಾಗಿದೆ.

Leave a Comment