Kangana Ranaut: ಎಮೆರ್ಜೆನ್ಸಿ ಸಿನಿಮಾಕ್ಕಾಗಿ ಕಾಯ್ತಿದ್ದ ಫ್ಯಾನ್ಸ್ ಗೆ ದೊಡ್ಡ ಶಾಕ್ ಕೊಟ್ಟ ಕಂಗನಾ ರಣಾವತ್

Written by Soma Shekar

Published on:

---Join Our Channel---

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸದ್ಯಕ್ಕೆ ರಾಜಕೀಯದ ವಿಚಾರವಾಗಿ ಭರ್ಜರಿ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟಿ ಲೋಕಸಭಾ ಚುನಾವಣೆಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಸಾರ್ವಜನಿಕ ಭಾಷಣಗಳನ್ನು ಮಾಡುತ್ತಾ ಒಂದಷ್ಟು ವಿಚಾರಗಳನ್ನು ಮಾತನಾಡಿ ಸುದ್ದುಯಾಗಿದ್ದಾರೆ. ಇದೇ ವೇಳೆ ನಟಿಯ ಬಹುನಿರೀಕ್ಷಿತ ಸಿನಿಮಾ ಎಮರ್ಜೆನ್ಸಿ ಕುರಿತಾಗಿ ಹೊಸದೊಂದು ಅಪ್ಡೇಟ್ ಹೊರಗೆ ಬಂದಿದೆ.

ನಟಿಯ ಎಮರ್ಜೆನ್ಸಿ (Emergency) ಸಿನಿಮಾ ಆರಂಭದಿಂದಲೂ ಸಹಾ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ. ನಟಿಯ ಅಭಿಮಾನಿಗಳು ಎಮೆರ್ಜೆನ್ಸಿ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಹೊರ ಬಿದ್ದಿದೆ. ಹೌದು, ಎಮೆರ್ಜನ್ಸಿ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎನ್ನುವುದು ಈಗ ಸುದ್ದಿಯಾಗಿದೆ. ಚಿತ್ರ ತಂಡ ಈ ವಿಚಾರವನ್ನು ಅಧಿಕೃತವಾಗಿ ತಿಳಿಸಿದೆ.

ನಟಿ ಕಂಗನಾ ಬಿಜೆಪಿ ಸೇರಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ನಟಿಯು ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಈ ಕಾರಣದಿಂದಲೇ ಈಗ ನಟಿಯ ಹೊಸ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಹೊಸ ದಿನಾಂಕ ಯಾವಾಗ ಎನ್ನುವುದನ್ನ ತಿಳಿಯಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಕಂಗನಾ ರಣಾವತ್ ನಟಿಯಾಗಿ ಮಾತ್ರವೇ ಅಲ್ಲದೇ ನಿರ್ಮಾಪಕಿ ಮತ್ತು ನಿರ್ದೇಶಕಿಯೂ ಸಹಾ ಆಗಿದ್ದಾರೆ. ಎಮರ್ಜೆನ್ಸಿ ಸಿನಿಮಾವನ್ನು ನಟಿಯೇ ನಿರ್ಮಾಣ ಮಾಡಿ, ನಿರ್ದೇಶನವನ್ನು ಸಹಾ ಮಾಡಿದ್ದಾರೆ. ದಿವಂಗತ ಇಂದಿರಾಗಾಂಧಿ (Indira Gandhi) ಅವರ ಕಾಲದಲ್ಲಿ ಹೇರಿದಂತಹ ತುರ್ತು ಪರಿಸ್ಥಿತಿಯ ಕುರಿತಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.

Leave a Comment