Kangana Ranaut Assets: ನಾಮಪತ್ರ ಸಲ್ಲಿಸಿ ಆಸ್ತಿ ವಿವರ ನೀಡಿದ ಕಂಗನಾ, ಬಾಲಿವುಡ್ ಮಂದಿ ಶಾಕ್!

Written by Soma Shekar

Published on:

---Join Our Channel---

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ ಗೆ (Kangana Ranaut) ಪರಿಚಯದ ಅಗತ್ಯ ಖಂಡಿತ ಇಲ್ಲ‌. ಪ್ರಸ್ತುತ ಕಂಗನಾ ಬಿಜೆಪಿ (BJP) ಅಭ್ಯರ್ಥಿಯಾಗಿ ಹಿಮಾಚಲ ಪ್ರದೇಶದ ಮಂಡಿ (Mandi Constituency) ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ನಿನ್ನೆ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ವೇಳೆ ನಟಿ ಕಂಗನಾ ರಣಾವತ್ ಅವರು ತಮ್ಮ ಆಸ್ತಿಯ ವಿವರಗಳನ್ನು ಘೋಷಣೆಯನ್ನು ಮಾಡಿದ್ದಾರೆ.

ಹಾಗಾದರೆ ನಟಿಯ ಆಸ್ತಿಯ ವಿವರಗಳೇನು? ಇಲ್ಲಿದೆ ಉತ್ತರ. ಚುನಾವಣಾ ಅಫಿಡಿವಿಟ್ ಪ್ರಕಾರ 28.7 ಚಿರಾಸ್ತಿ, 62.9 ಕೋಟಿ ಸ್ಥಿರಾಸ್ತಿ ಸೇರಿದಂತೆ ಒಟ್ಟು 90 ಕೋಟಿ ರೂಪಾಯಿಗಳಿಗೂ ಹೆಚ್ಚು ಆಸ್ತಿಯನ್ನು ನಟಿ ಹೊಂದಿದ್ದಾರೆ. ನಟಿ ಕಂಗನಾ ಮನಾಲಿ, ಪಂಜಾಬ್ ಮತ್ತು ಮುಂಬೈನಲ್ಲಿ ಆಸ್ತಿಯನ್ನು ಹೊಂದಿದ್ದಾರೆ. BMW, ಮರ್ಸಿಡಿಸ್ ಬೆನ್ಜ್ ಮತ್ತು 3.91 ಕೋಟಿ ಬೆಲೆಯ ಮರ್ಸಿಡೀಸ್ ಮೇಬ್ಯಾಚ್ ಸೇರಿ ಮೂರು ಐಶಾರಾಮೀ ಕಾರುಗಳನ್ನು ಹೊಂದಿದ್ದಾರೆ.

ಇದಲ್ಲದೇ ಸುಮಾರು 5 ಕೋಟಿ ರೂಪಾಯಿ ಬೆಲೆ ಬಾಳುವ 6.7 ಕೆಜಿ ಚಿನ್ನ, 50 ಲಕ್ಷ ರೂಪಾಯಿ ಬೆಲೆ ಬಾಳುವ 60 ಕೆಜಿ ಬೆಳ್ಳಿ ಇದೆ. ವಜ್ರದ ವಿಚಾರಕ್ಕೆ ಬಂದರೆ ಸುಮಾರು 3 ಕೋಟಿ ರೂಪಾಯಿ ಮೌಲ್ಯದ 14 ಕ್ಯಾರೆಟ್ ವಜ್ರದ ಆಭರಣಗಳನ್ನು ಕಂಗನಾ ಹೊಂದಿದ್ದಾರೆ. ನಟಿಯ ಹೆಸರಿನಲ್ಲಿ 50 ಜೀವನ ವಿಮಾ ನಿಗಮದ (LIC) ಪಾಲಿಸಿಗಳನ್ನು ಹೊಂದಿದ್ದಾರೆ.

ಇದಲ್ಲದೇ ನಟಿಯು 7.3 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾರೆ. ಕಂಗನಾ ತಮ್ಮ ಶಾಲೆಯ ವಿದ್ಯಾಭ್ಯಾಸವನ್ನು ಅಂದರೆ 12ನೇ ತರಗತಿ ವರೆಗೆ ಚಂಡೀಗಢದ ಖಾಸಗಿ ಶಾಲೆಯೊಂದರಲ್ಲಿ ಮಾಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡುವ ವಿಚಾರವಾಗಿ ಎಂಟು ಕ್ರಿಮಿನಲ್ ಕೇಸುಗಳು ಸಹಾ ನಟಿಯ ಮೇಲೆ ದಾಖಲಾಗಿದೆ.

Leave a Comment