Kalki 2898AD: ರಾಕಿಂಗ್ ಸ್ಟಾರ್ ಮಕ್ಕಳಿಗೆ ಕಲ್ಕಿ ಕಡೆಯಿಂದು ಬಂತು ಸಖತ್ ಸ್ಪೆಷಲ್ ಗಿಫ್ಟ್, ಏನು ಆ ಗಿಫ್ಟ್?

Written by Soma Shekar

Published on:

---Join Our Channel---

Kalki 2898 AD : ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ನಟ ಪ್ರಭಾಸ್ ಅಭಿನಯದ ಕಲ್ಕಿ 2898 AD (Kalki 2898 AD) ಸಿನಿಮಾದ ಬಿಡುಗಡೆ ದಿನಗಳು ಹತ್ತಿರವಾದಂತೆ ಸಿನಿಮಾ ತಂಡ ಭರ್ಜರಿಯಾಗಿ ಪ್ರಚಾರ ಕಾರ್ಯಗಳನ್ನು ನಡೆಸಿದೆ.‌ ಸಿನಿಮಾದ ಪ್ರಚಾರದ ಭಾಗವಾಗಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆದಂತಹ ನಟ ರಾಕಿಂಗ್ ಸ್ಟಾರ್ ಯಶ್ (Actor Yash) ಅವರ ಮುದ್ದು ಮಕ್ಕಳಾದ ಐರಾ ಮತ್ತು ಯಥರ್ವ್ ಗೆ ವಿಶೇಷವಾದ ಉಡುಗೊರೆಗಳನ್ನು (Special Gifts) ನೀಡಿದ್ದು, ಈ ವಿಷಯ ಈಗ ಎಲ್ಲರ ಗಮನ ಸೆಳೆದಿದೆ. ಕಲ್ಕಿ ಸಿನಿಮಾದ ಚಿತ್ರತಂಡದ ಕ್ರಿಯೇಟಿವ್ ಐಡಿಯಾ ಮೆಚ್ಚುಗೆ ಗಳಿಸಿದೆ.

ಕಲ್ಕಿ 2898 ಎಡಿ ಚಿತ್ರ ತಂಡದವರು ಯಶ್ ಅವರ ಮಕ್ಕಳಿಗೆ ಆಟಿಕೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.‌ ಕಲ್ಕಿ ಬುಜ್ಜಿ ಬೊಂಬೆಯನ್ನು ಯಶ್ ಮಗಳು ಐರಾ ಹಾಗೂ ಮಗ ಯಥರ್ವ್ ಗೆ ಉಡುಗೊರೆಯಾಗಿ ನೀಡಿದ್ದಾರೆ. ಸಿನಿಮಾ ತಂಡ ನೀಡಿದ ಉಡುಗೊರೆಯ ಫೋಟೋವನ್ನು ನಟಿ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.‌

ಫೋಟೋ ಶೇರ್ ಮಾಡಿದ ನಟಿ ರಾಧಿಕಾ ಪಂಡಿತ್ ಅವರು ಕಲ್ಕಿ ಸಿನಿಮಾ ತಂಡಕ್ಕೆ ಶುಭವನ್ನು ಹಾರೈಸಿದ್ದಾರೆ. ಯಶ್ ರಾಧಿಕಾ ದಂಪತಿಯ ಮಕ್ಕಳಾದ ಐರಾ ಮತ್ತು ಯಥರ್ವ್ ಒಂದು ಹಾಳೆಯಲ್ಲಿ ಥ್ಯಾಂಕ್ಯೂ ಬುಜ್ಜಿ ಎಂದು ಬರೆದಿದ್ದು, ಈ ಫೋಟೋ ವನ್ನು ನಟಿ ರಾಧಿಕಾ ಪಂಡಿತ್ (Radhika Pandit) ಅವರು ಶೇರ್ ಮಾಡಿಕೊಂಡಿದ್ದಾರೆ. ಚಿತ್ರ ತಂಡ ರಾಮ್ ಚರಣ್ ಮಗಳಿಗೂ ಗಿಫ್ಟ್ ಕಳುಹಿಸಿದೆ.

ನಟ ರಾಮ್ ಚರಣ್ ಅವರ ಮಗಳು ಕ್ಲಿನ್ ಕಾರಾಗೆ ಸ್ಕೆಚ್ಚಸ್, ಸ್ಟಿಕರ್ಸ್ ಮತ್ತು ಬೊಂಬೆಗಳನ್ನು ಉಡುಗೊರೆಯಾಗಿ ನೀಡಿದ್ದು, ರಾಮ್ ಚರಣ್ ಅವರ ಪತ್ನಿ ಉಪಾಸನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಲ್ಕಿ ಸಿನಿಮಾ ತಂಡಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. ಒಟ್ನಲ್ಲಿ ಇದೆಲ್ಲಾ ಸಿನಿಮಾ ಪ್ರಚಾರದ ತಂತ್ರಗಳೇ ಅಂತಿದ್ದಾರೆ ನೆಟ್ಟಿಗರು.

Leave a Comment