Cinema : ಸಿನಿಮಾವೊಂದಕ್ಕೆ 200 ಕೋಟಿ, ಅತಿ ಹೆಚ್ಚು ಸಂಭಾವನೆ ಪಡೆಯೋ ವಿಲನ್, ಸ್ಟಾರ್ ಹೀರೋಗಳಿಗೆ ಸವಾಲ್

Written by Soma Shekar

Published on:

---Join Our Channel---

Cinema : ಸಿನಿಮಾಗಳಲ್ಲಿ (Cinema) ಸಾಮಾನ್ಯವಾಗಿ ಖಳನಾಯಕ ಅಥವಾ ವಿಲನ್ (Villain) ಪಾತ್ರಗಳು ನಾಯಕನ ಪಾತ್ರದಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತವೆ ಎನ್ನುವುದು ಅಕ್ಷರಶಃ ಸತ್ಯವಾದ ವಿಚಾರವಾಗಿದೆ. ಸಿನಿಮಾಗಳಲ್ಲಿ ನಾಯಕನ ಪಾತ್ರವು ಹೆಚ್ಚು ಹೈಲೈಟ್ ಆಗೋದೇ ಅವನ ಎದುರು ಒಬ್ಬ ಪ್ರಬಲ ಖಳನಾಯಕ ಇದ್ದಾಗ ಮಾತ್ರವೇ ಅನ್ನೋದನ್ನ ಪ್ರತ್ಯೇಕವಾಗಿ ಹೇಳುವಂತಹ ಅವಶ್ಯಕತೆ ಇಲ್ಲ. ಹಿಂದೆ ಸಿನಿಮಾಗಳಲ್ಲಿ ನಾಯಕರಾಗಿ ಜನಪ್ರಿಯತೆ ಪಡೆದಿದ್ದ ಹಲವು ನಟರು ತಮ್ಮ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ವಿಲನ್ ಪಾತ್ರಗಳ ಮೂಲಕ ಸಿನಿ ಪ್ರೇಮಿಗಳಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದ್ದಾರೆ.

ಸಿನಿಮಾಗಳಲ್ಲಿ ನಾಯಕನ ಪಾತ್ರದಷ್ಟೇ ಅನಿವಾರ್ಯ ಆಗಿರೋ ವಿಲನ್ ಪಾತ್ರಗಳಲ್ಲಿ ಮಿಂಚೋದಕ್ಕೆಕ್ಕೆ ಬಹಳಷ್ಟು ಜನ ನಾಯಕ ನಟರು ಯಾವುದೇ ರೀತಿಯ ಹಿಂಜರಿಕೆಯನ್ನು ತೋರಿಸದೆ ನಟನೆ ಮಾಡ್ತಿದ್ದಾರೆ. ವಿಜಯ್ ಸೇತುಪತಿ, ಕಮಲಹಾಸನ್, ಸಂಜಯ್ ದತ್, ಸೈಫ್ ಅಲಿ ಖಾನ್, ಜಗಪತಿ ಬಾಬು, ಶ್ರೀಕಾಂತ್ ಹೀಗೆ ನಾಯಕ ನಟರಾಗಿದ್ದವರು ಈಗ ವಿಲನ್ ಗಳಾಗಿ ಅಬ್ಬರಿಸುತ್ತಿದ್ದಾರೆ.

ವಿಲನ್ ಗಳ ಸಾಲಿಗೆ ಇತ್ತೀಚಿಗೆ ಸೇರ್ಪಡೆಯಾದವರು ಬಾಲಿವುಡ್ ನ ಒಂದು ಕಾಲದ ಸ್ಟಾರ್ ನಾಯಕ ನಟ ಬಾಬಿ ಡಿಯೋಲ್ ಕೂಡಾ ಖಡಕ್ ವಿಲನ್ ಆಗಿ ಅನಿಮಲ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೀಗೆ ವಿಲನ್ ಪಾತ್ರಗಳಲ್ಲಿ ನಟಿಸೋ ನಟರ ಸಂಭಾವನೆ ಕೂಡಾ ಕಡಿಮೆ ಏನಿಲ್ಲ. ಸಿನಿಮಾ ರಂಗದಲ್ಲಿ ದೊಡ್ಡ ಸ್ಟಾರ್ ಗಳಾಗಿರುವ ಶಾರುಖ್ ಖಾನ್ (Shahrukh Khan) ಮತ್ತು ಸಲ್ಮಾನ್ ಖಾನ್ (Salman Khan) ಅಂತಹ ನಟರು ಪಡೆಯುವ ಸಂಭಾವನೆಗಿಂತ ಹೆಚ್ಚು ಸಂಭಾವನೆಯನ್ನು ವಿಲನ್ ಪಾತ್ರಕ್ಕೆ ಪಡೆಯುವ ನಟರು ಇದ್ದಾರೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು.

ಹಾಗಾದರೆ ಪ್ರಸ್ತುತ ಸಿನಿಮಾ ರಂಗದಲ್ಲಿ ವಿಲನ್ ಪಾತ್ರಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ಯಾರು ಅನ್ನೋದನ್ನ ತಿಳಿಯೋಣ ಬನ್ನಿ. ಈಗ ಹೊರಬಂದಿರುವ ಸುದ್ದಿಗಳ ಪ್ರಕಾರ ನೆಗೆಟಿವ್ ರೋಲ್ ಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ (Actor Yash) ಎಂದು ಹೇಳಲಾಗುತ್ತಿದೆ. ಹೌದು, ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ (Ramayana) ಸಿನಿಮಾದಲ್ಲಿ ರಾವಣನ ಪಾತ್ರವನ್ನು ಮಾಡಲಿರುವ ವಿಷಯ ಈಗಾಗಲೇ ಗೊತ್ತಿದೆ.

ಯಶ್ ಅವರು ಈ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ಈ ಸಿನಿಮಾದ ಲಾಭದಲ್ಲಿ 20 ರಿಂದ 30& ಸಂಭಾವನೆಯಾಗಿ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದ್ದು, ಕಲೆಕ್ಷನ್ ಅಂದಾಜಿನಲ್ಲಿ ಈ ಸಿನಿಮಾದಿಂದ ಸುಮಾರು 200 ಕೋಟಿಗೂ ಹೆಚ್ಚು ಗಳಿಕೆಯನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ವರದಿಗಳ ಪ್ರಕಾರ ಭಾರತೀಯ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಯಶ್ ಆಗಲಿದ್ದಾರೆ ಅಂತ ಹೇಳಲಾಗ್ತಿದೆ.

Leave a Comment