Nandamuri Balakrishna: ವೇದಿಕೆ ಮೇಲೆಯೇ ನಟಿಯನ್ನು ತಳ್ಳಿದ ಹಿರಿಯ ನಟ ಬಾಲಕೃಷ್ಣ, ಬೆಚ್ಚಿ ಬಿದ್ದ ನಟಿ, ನೆಟ್ಟಿಗರ ಆಕ್ರೋಶ

Written by Soma Shekar

Published on:

---Join Our Channel---

Nandamuri Balakrishna: ಟಾಲಿವುಡ್ ನಲ್ಲಿ ಹಿರಿಯ ನಟನಾಗಿ, ಪ್ರತಿಷ್ಠಿತ ಸಿನಿಮಾ ಕುಟುಂಬದಿಂದ ಬಂದಿರುವ ನಟ ಹಾಗೂ ಎಂಎಲ್ಎ ಸಹಾ ಆಗಿದ್ದಾರೆ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು. ಇಷ್ಟೆಲ್ಲಾ ದೊಡ್ಡ ಹೆಸರು, ಜನಪ್ರಿಯತೆ ಇರುವ ಈ ನಟ ಆಗಾಗ ತಮ್ಮ ವಿಚಿತ್ರ ವರ್ತನೆ ಹಾಗೂ ಸಾರ್ವಜನಿಕವಾಗಿ ಕೋಪ ಮತ್ತು ಆವೇಶದಿಂದ ವರ್ತಿಸುವುದು ಹಾಗೂ ಕೆಲವೊಮ್ಮೆ ಅಭಿಮಾನಿಗಳ ಕಪಾಳಮೋಕ್ಷ ಮಾಡುವ ಮೂಲಕವೂ ಸುದ್ದಿಯಾಗುತ್ತಾರೆ.

ಈಗ ಮತ್ತೊಮ್ಮೆ ನಟ ತಮ್ಮ ಇಂತಹುದೊಂದು ವರ್ತನೆಯಿಂದಾಗಿ ಸುದ್ದಿಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಸಿಟ್ಟನ್ನ ಹೊರಹಾಕುತ್ತಿದ್ದಾರೆ. ತೆಲುಗಿನಲ್ಲಿ ನಟ ವಿಶ್ವಕ್ ಸೇನ್ ನಾಯಕನಾಗಿರುವ ಹೊಸ ಸಿನಿಮಾ ಗ್ಯಾಂಗ್ಸ್ ಆಫ್ ಗೋದಾವರಿ (Gangs of Godavari) ಸಿನಿಮಾ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಈ ಸಿನಿಮಾ ಪ್ರೀ ರಿಲೀಜ್ ಈವೆಂಟ್ ಅದ್ದೂರಿಯಾಗಿ ನಡೆದಿದ್ದು, ಬಾಲಕೃಷ್ಣ ಅವರು ಅತಿಥಿಯಾಗಿ ಆಗಮಿಸಿದ್ದರು.

ವೇದಿಕೆಯ ಮೇಲೆ ಸಿನಿಮಾ ತಂಡದವರು ಉಪಸ್ಥಿತರಾಗಿದ್ದರು. ಈ ವೇಳೆ ಬಾಲಕೃಷ್ಣ ಅವರು ನಟಿ ಅಂಜಲಿಗೆ ಸ್ವಲ್ಪ ಪಕ್ಕಕ್ಕೆ ಜರುಗುವಂತೆ ಕೇಳಿದ್ದಾರೆ. ಆಗ ನಟಿ ಅಂಜಲಿ (Actress Anjali) ಅವರು ಸ್ವಲ್ಪ ಪಕ್ಕಕ್ಕೆ ಜರುಗಿದ್ದಾರೆ. ಆದರೆ ಬಾಲಕೃಷ್ಣ ಅವರಿಗೆ ಇದ್ದಕ್ಕಿದ್ದ ಹಾಗೆ ಏನಾಯ್ತೋ ಗೊತ್ತಿಲ್ಲ ನಟಿಯನ್ನು ಗಟ್ಟಿಯಾಗಿ ಪಕ್ಕಕ್ಕೆ ನೂಕಿದ್ದಾರೆ. ಇಂತಹ ಆಕಸ್ಮಿಕ ಕಂಡು ಅಂಜಲಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕೋ ತಿಳಿಯದೇ ನಕ್ಕಿದ್ದಾರೆ.

ಇದೇ ವೇಳೆ ಪಕ್ಕದಲ್ಲೇ ಇದ್ದ ಮತ್ತೊಬ್ಬ ನಟಿ ನೇಹಾ ಶೆಟ್ಟಿ ಬೆಚ್ಚಿ ಬಿದ್ದಿದ್ದಾರೆ. ಅನಂತರ ಬಾಲಕೃಷ್ಣ ಅಂಜಲಿ ಜೊತೆ ನಗುತ್ತಾ ಮಾತನಾಡಿದ್ದಾರೆ. ಈ ವೀಡಿಯೋ ವೈರಲ್ ಆದ ಮೇಲೆ ನೆಟ್ಟಿಗರು ಪಾಪ ಅಂಜಲಿ, ಎದುರಿಸೋಕೆ ಆಗದೇ ನಕ್ಕು ಕವರ್ ಮಾಡ್ತಾ ಇದ್ದರೆ ಅಂದ್ರೆ ಇನ್ನೂ ಕೆಲವರು ಈ ನಟನಿಗೆ ಬೇರೆ ಅವರಿಗೆ ಗೌರವ ಕೊಡೋದು ಹೇಗೆ ಅನ್ನೋ ಕನಿಷ್ಠ ಜ್ಞಾನ ಸಹಾ ಇಲ್ಲ ಅಂತ ನಿಂದಿಸಿದ್ದಾರೆ.‌

Leave a Comment