Orry: ಫಾರ್ಮ್ ಹೌಸ್ ಗಳಿಗೆ ನನ್ನ ಕರೆಸಿಕೊಂಡು ಮಾಡ್ತಾರೆ, 25 ಲಕ್ಷ ಕೊಡ್ತಾರೆ; ಓರಿ ಹೇಳಿದ ಶಾಕಿಂಗ್ ಸತ್ಯ

Written by Soma Shekar

Published on:

---Join Our Channel---

Orry : ಸದ್ಯಕ್ಕಂತೂ ಬಾಲಿವುಡ್ ನಲ್ಲಿ (Bollywood) ಅಲ್ಲಿನ ಸ್ಟಾರ್ ಗಳು ಎಷ್ಟು ಸದ್ದು ಸುದ್ದಿಯನ್ನು ಮಾಡ್ತಿದ್ದಾರೋ ಅಷ್ಟೇ ಸದ್ದನ್ನು ಓರಿ ಅವತ್ರಮಣಿ (Orry) ಸಹಾ ಮಾಡ್ತಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಒರಿ ಜೊತೆಗೆ ಫೋಟೋ ತೆಗೆದುಕೊಳ್ಳೋದಕ್ಕೆ ಮತ್ತು ಪೋಸ್ ನೀಡೋದಕ್ಕೆ ಬಾಲಿವುಡ್ ನ ಸೆಲೆಬ್ರಿಟಿಗಳು ಕೂಡಾ ಹಾತೊರೆಯುತ್ತಾರೆ ಮತ್ತು ಆಸಕ್ತಿಯನ್ನು ತೋರಿಸ್ತಾರೆ ಅನ್ನೋದು ಶಾಕಿಂಗ್ ಆದ್ರು ಸತ್ಯವಾಗಿದೆ. ಇನ್ನೊಂದು ಕಡೆ ಒರಿಯನ್ನು ಟಚ್ ಮಾಡಲು ಮತ್ತು ಆತನ ಟಚ್ ಪಡೆಯಲು ಲಕ್ಷ ಲಕ್ಷ ರೂಪಾಯಿಗಳನ್ನ ಕೊಡಬೇಕು ಅಂದಾಗ ಸೆಲೆಬ್ರಿಟಿಗಳಿಗೆ ಇಂತ ಹುಚ್ಚು ಯಾಕೆ ಅಂತ ನಿಮಗೆ ಅನಿಸಿದ್ರೂ ಅನಿಸಬಹುದು.

ಸೋಶಿಯಲ್ ಮೀಡಿಯಾದಲ್ಲಿ ಒಂದು ರೀತಿಯಲ್ಲಿ ಸ್ಟಾರ್ ಆಗಿರೋ ಒರಿ ಸೆಲೆಬ್ರಿಟಿಗಳ ಖಾಸಗಿ ಈವೆಂಟ್ ಗಳಲ್ಲಿ (Bollywood Events) ಕಾಣಿಸಿಕೊಳ್ತಾನೇ ಇರ್ತಾರೆ. ಈ ರೀತಿ ಭಾಗವಹಿಸುವ ಅವರು ಈವೆಂಟ್ ಗಳ ಮೂಲಕ ಲಕ್ಷಾಂತರ ರೂಪಾಯಿಗಳ ಹಣವನ್ನು ಗಳಿಸ್ತಾರೆ ಅನ್ನೋದು ಅಚ್ಚರಿಯ ವಿಷಯವಾಗಿದೆ. ಬಾಲಿವುಡ್ ನ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಒರಿ ತಮ್ಮ ಆದಾಯದ ಕುರಿತಾಗಿ ಆಸಕ್ತಿಕರ ವಿಚಾರಗಳನ್ನ ಶೇರ್ ಮಾಡಿಕೊಂಡಿದ್ದಾರೆ.

ನನ್ನ ಜೊತೆ ಯಾರಾದರೂ ಫೋಟೋ ಬೇಕು ಅಂದ್ರೆ ಅದಕ್ಕೆ 25 ಲಕ್ಷ ರೂಪಾಯಿಗಳನ್ನು ಚಾರ್ಜ್ ಮಾಡುತ್ತೇನೆ. ನಾನೇ ಫೋಟೋ ತೆಗೆದುಕೊಂಡರೆ ಚಾರ್ಜ್ ಮಾಡೋದಿಲ್ಲ. ನನ್ನನ್ನ ಟಚ್ ಮಾಡೋದಕ್ಕೆ 20 ಲಕ್ಷ ಚಾರ್ಜ್ ಮಾಡ್ತೀನಿ. ಇನ್ನೂ ಕೆಲವರು ಅವರ ಫಾರ್ಮ್ ಹೌಸ್ ಗಳಿಗೆ (Farm House) ನನ್ನನ್ನ ಕರೆಸಿಕೊಂಡು ಟಚ್ ಮಾಡ್ತಾರೆ. ಅದಕ್ಕೆ 25 ಲಕ್ಷ ತಗೊಳ್ತೀನಿ ಅನ್ನೋ ಶಾಕಿಂಗ್ ವಿಚಾರಗಳನ್ನ ಒರಿ ಶೇರ್ ಮಾಡಿಕೊಂಡಿದ್ದಾರೆ.

ಒರಿಯ ಗಳಿಕೆಯ ವಿಚಾರವನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಅಲ್ಲದೇ ಇದೇ ವೇಳೆ ಒರಿಯನ್ನು ಫಾರ್ಮ್ ಹೌಸ್ ಗೆ ಕರೆಸಿಕೊಂಡು ಇಪ್ಪತ್ತೈದು ಲಕ್ಷ ಕೊಟ್ಟು ಟಚ್ ಮಾಡಿಕೊಳ್ಳುವ ಸೆಲೆಬ್ರಿಟಿಗಳು ಯಾರು ಎನ್ನುವ ಪ್ರಶ್ನೆ ಕೂಡಾ ಅನೇಕರನ್ನು ಕಾಡುತ್ತಿದೆ. ಒಟ್ನಲ್ಲಿ ಇಂತದ್ದೂ ಒಂದು ಗಳಿಕೆಯ ಮಾರ್ಗ ಇದ್ಯಾ ಅನ್ನೋದನ್ನು ಕೇಳಿ ಅನೇಕರು ಅಚ್ಚರಿಯನ್ನು ಪಡುವಂತಾಗಿದೆ. ‌

Leave a Comment