Prabhas : ಬಾಹುಬಲಿ (Bahubali) ಸಿನಿಮಾ ಖ್ಯಾತಿಯ ನಟ ಪ್ರಭಾಸ್ (Prabhas) ವಿಚಾರ ಬಂದಾಗಲೆಲ್ಲಾ ಅಲ್ಲಿ ಒಂದು ವಿಷಯ ಹೆಚ್ಚು ಸದ್ದು ಮಾಡೋದು ಏನಂದ್ರೆ ಅದು ಪ್ರಭಾಸ್ ಅವರ ಮದುವೆ ಯಾವಾಗ ಅನ್ನೋದಾಗಿರುತ್ತೆ. ಟಾಲಿವುಡ್ ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಆಗಿರೋ ಪ್ರಭಾಸ್ ಮದುವೆ ಕುರಿತಾಗಿ ಆಗಾಗ ಕೆಲವೊಂದು ಸುದ್ದಿಗಳಾಗಿ ಹರಿದಾಡುತ್ತಲೇ ಇರುತ್ತೆ. ಅವರ ಮದುವೆ ಕುರಿತಾಗಿ ಜನರಲ್ಲಿ ಸಾಕಷ್ಟು ಕುತೂಹಲ ಇದ್ದೇ ಇದೆ.
ವಯಸ್ಸು ಏರುತ್ತಿದ್ದರೂ ಕೂಡಾ ಅಭಿಮಾನ ನಡ ಮದುವೆಯ ಕಡೆಗೆ ಗಮನ ನೀಡದೇ ಇರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈಗ ಇವೆಲ್ಲವುಗಳ ನಡುವೆಯೇ ನಟ ಪ್ರಭಾಸ್ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ (Instagram) ಶೇರ್ ಮಾಡಿದ ಸ್ಟೋರಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿರುವುದರ ಜೊತೆಗೆ ಎಲ್ಲರ ಗಮನವನ್ನ ಸೆಳೆದಿದೆ ಮತ್ತು ಕುತೂಹಲವನ್ನು ದುಪ್ಪಟ್ಟು ಮಾಡುತ್ತಿದೆ.
ಇಷ್ಟಕ್ಕೂ ನಟ ಶೇರ್ ಮಾಡಿದ ಸ್ಟೋರಿಯಲ್ಲಿ ಏನಿದೆ ಅನ್ನೋದನ್ನು ನೋಡೋದಾದ್ರೆ, ಡಾರ್ಲಿಂಗ್ಸ್ ಕೊನೆಗೂ ಯಾರೋ ತುಂಬಾ ವಿಶೇಷವಾದವರು ನಮ್ಮ ಜೀವನಕ್ಕೆ ಬರುತ್ತಿದ್ದಾರೆ, ವೈಟ್ ಮಾಡಿ ಎಂದು ಬರೆದುಕೊಂಡಿದ್ದಾರೆ. ಪ್ರಭಾಸ್ ಅವರ ಈ ಪೋಸ್ಟ್ ನೋಡಿದ್ದೇ ತಡ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಅನೇಕರು ಬಹುಶಃ ಪ್ರಭಾಸ್ ಅವರು ಯಾರೋ ವಿಶೇಷ ವ್ಯಕ್ತಿಯ ಬಗ್ಗೆ ಹೇಳಲಿದ್ದಾರೆ ಅಂತ ಹೇಳ್ತಾ ಇದ್ದಾರೆ. ಇನ್ನೂ ಕೆಲವರು ಯಾವುದೇ ವ್ಯಕ್ತಿಯಲ್ಲ, ಬಹುಶಃ ನಟ ತಮ್ಮ ಮುಂದಿನ ಸಿನಿಮಾ ಕಲ್ಕಿ ಕುರಿತಾಗಿ ಯಾವುದೋ ಹೊಸ ಅಪ್ಡೇಟ್ ನೀಡಬಹುದು ಮತ್ತೇನೂ ಇರಲ್ಲ ಎಂದು ಸಹಾ ಹೇಳ್ತಾ ಇದ್ದಾರೆ. ಒಟ್ಟಾರೆ ಯಾರದು ವಿಶೇಷ ವ್ಯಕ್ತಿ ಅಂತ ತಿಳಿಯೋಕೆ ಕಾಯಲೇಬೇಕಾಗಿದೆ.