Kedarnath: ಸ್ವತಃ ಶಿವನೇ ನಿರ್ಮಿಸಿದ ಕೇದಾರನಾಥಕ್ಕೂ ಪಾಂಡವರಿಗೂ ಏನು ಸಂಬಂಧ? ಪ್ರತಿಯೊಬ್ಬರೂ ತಿಳಿಯಲೇಬೇಕು ಈ ವಿಷಯ

Written by Soma Shekar

Published on:

---Join Our Channel---

Kedarnath : ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕೇದಾರನಾಥ (Kedarnath) ಧಾಮದಲ್ಲಿ ಶಿವನು (Lord Shiva) ಭಕ್ತರಿಗೆ ‘ಲಿಂಗ’ ರೂಪದಲ್ಲಿ ದರ್ಶನವನ್ನು ನೀಡುತ್ತಾನೆ. ಅಸಂಖ್ಯಾತ ಹಿಂದೂಗಳಿಗೆ ಈ ದಿವ್ಯ ಧಾಮ ದರ್ಶನವು ಒಂದು ಕನಸು ಹಾಗೂ ಗುರಿಯೂ ಹೌದು. ಕೇದಾರನಾಥ ದೇವಾಲಯದ ದ್ವಾರವು ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಭಕ್ತರಿಗಾಗಿ ತೆರೆಯಲ್ಪಡುತ್ತದೆ. ಕೇದಾರನಾಥನ ದರ್ಶನಕ್ಕಾಗಿ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ

ಇಲ್ಲಿ ಶಿವನು ಧರಿಸಿರುವ ವೃಷಭ ರೂಪದ ಹಿಂಭಾಗವನ್ನು ಪೂಜಿಸಲಾಗುತ್ತದೆ ಎಂದು ಹೇಳಲಾಗುವುದು. ಸ್ಕಂದ ಪುರಾಣದ ಕೇತಾರ ಅಧ್ಯಾಯದಲ್ಲಿ ಕೇದಾರನಾಥ ಧಾಮವನ್ನು ಕುರಿತಾಗಿ ಉಲ್ಲೇಖ ಮಾಡಲಾಗಿದೆ. ಇದರ ಪ್ರಕಾರ, ಕೇದಾರನಾಥ ಶಿವನು ತನ್ನ ಜಟೆಯಿಂದ ಪವಿತ್ರ ದೇವಗಂಗೆಯನ್ನು ಬಿಡುಗಡೆ ಮಾಡಿದ ಸ್ಥಳವಾಗಿದೆ.

ಕೇದಾರನಾಥ ದೇವಾಲಯದ ಪೌರಾಣಿಕ ಕಥೆಯ ಅನುಸಾರ, ಮಹಾಭಾರತ (Mahabharat) ಯುದ್ಧವು ಮುಕ್ತಾಯಗೊಂಡ ನಂತರ ಪಾಂಡವರು (Pandavas) ತಮ್ಮ ಕೌರವ ಸಹೋದರರನ್ನು ಮತ್ತು ಇತರ ಎಲ್ಲಾ ರಕ್ತ ಸಂಬಂಧಿಗಳನ್ನು ಸಂಹರಿಸದ ಪಾಪದಿಂದ ಮುಕ್ತರನ್ನಾಗಿ ಮಾಡಲು ಬಯಸಿದ್ದರು. ಅದಕ್ಕಾಗಿಯೇ ಅವರು ತಮ್ಮ ಪಾಪಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಶಿವನನ್ನು ಅರಸಿ ಹಿಮಾಲಯದ ಕಡೆಗೆ ಹೊರಟರು.

ಪಾಂಡವರು ತನ್ನ ಕಡೆಗೆ ಬರುತ್ತಿರುವುದನ್ನು ಗಮನಿಸಿದ ಪರಮ ಶಿವನು ಕಣ್ಮರೆಯಾಗಿ ಕೇದಾರನಾಥದಲ್ಲಿ ನೆಲೆಸಿದನು. ಇದನ್ನು ತಿಳಿದ ಪಾಂಡವರೂ ಸಹಾ ಶಿವನನ್ನು ಬೆನ್ನಟ್ಟಿ ಕೇದಾರ ಪರ್ವತವನ್ನು ತಲುಪಿದರು. ಹೀಗೆ ಪಾಂಡವರು ಕೇದಾರ ಪರ್ವತವನ್ನು ತಲುಪಿದಾಗ ಅವರನ್ನು ನೋಡಿದ ಶಿವನು ವೃಷಭ ರೂಪವನ್ನು ಧರಿಸಿ ಪ್ರಾಣಿಗಳ ನಡುವೆ ಸೇರಿಕೊಂಡನು.

ಪಾಂಡವರು ಶಿವನ ದರ್ಶನಕ್ಕಾಗಿ ಒಂದು ಉಪಾಯವನ್ನು ಮಾಡಿದರು. ಆಗ ಭೀಮನು ಬೃಹದಾಕಾರವನ್ನು ತಾಳಿ ಕೇದಾರ ಪರ್ವತದ ಎರಡೂ ಬದಿಗಳಲ್ಲಿ ತನ್ನ ಎರಡು ಕಾಲುಗಳನ್ನು ಹರಡಿದನು. ಇದರಿಂದಾಗಿ ಎಲ್ಲಾ ಪ್ರಾಣಿಗಳು ಭೀಮನ ಪಾದಗಳ ನಡುವೆ ಹೋದವು. ಆದರೆ ವೃಷಭ ರೂಪದಲ್ಲಿದ್ದ ಶಿವನು ಹೊರ ಬರಲು ಪ್ರಯತ್ನ ಮಾಡಿದಾಗ ಭೀಮ ಶಿವನನ್ನು ಗುರುತಿಸಿದನು.

ಶಿವನನ್ನು ಗುರುತಿಸಿದ ಭೀಮನು ವೃಷಭವನ್ನು ಹಿಡಿಯಲು ಪ್ರಯತ್ನ ಮಾಡಿ ಅದರ ಬೆನ್ನನ್ನು ಬಿಗಿಯಾಗಿ ಹಿಡಿದನು. ಶಿವನು ಪಾಂಡವರ ಭಕ್ತಿಗೆ ಮೆಚ್ಚಿ ಅವರಿಗೆ ತನ್ನ ದರ್ಶನವನ್ನು ನೀಡಿದ್ದು ಮಾತ್ರವೇ ಅಲ್ಲದೇ ಅವರನ್ನು ಅವರ ಪಾಪಗಳಿಂದ ಅವರನ್ನು ಮುಕ್ತಗೊಳಿಸಿದನು. ಅಂದಿನಿಂದ ಇಲ್ಲಿ ಶಿವನು ವೃಷಭ ರೂಪದಲ್ಲಿ ನೆಲೆಸಿದ್ದಾನೆಂದು ಹೇಳಲಾಗುತ್ತದೆ. ಈ ಎಮ್ಮೆಯ ಶಿರ ಭಾಗವು ನೇಪಾಳದಲ್ಲಿ ಉದ್ಭವಿಸಿತೆಂದು ನಂಬಲಾಗಿದೆ. ಅಲ್ಲಿ ಶಿವನನ್ನು ಪಶುಪತಿನಾಥನ ರೂಪದಲ್ಲಿ ಪೂಜಿಸಲಾಗುತ್ತದೆ.

Leave a Comment