Samantha: ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಬೆತ್ತಲಾಗಿದ್ದೇಕೆ? ಬೇಸರ ಪಟ್ಟ ಫ್ಯಾನ್ಸ್, ಇಷ್ಟಕ್ಕೂ ನಡೆದಿದ್ದೇನು?

Written by Soma Shekar

Published on:

---Join Our Channel---

Samantha: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ (Samantha) ಖುಷಿ ಸಿನಿಮಾದ ನಂತರ ತಮ್ಮ ಅನಾರೋಗ್ಯದ ಕಾರಣದಿಂದ ಚಿತ್ರರಂಗದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಈಗ ನಟಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಶೀಘ್ರದಲ್ಲಿ ಅವರು ನಟಿಸಿರುವ ವೆಬ್ ಸೀರೀಸ್ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಅಲ್ಲದೇ ಇತ್ತೀಚಿಗಷ್ಟೇ ತಮ್ಮ ಜನ್ಮದಿನದ ಸಂಭ್ರಮದ ನಡುವೆಯೇ ನಟಿ ತಾನು ಕಮ್ ಬ್ಯಾಕ್ ಮಾಡಲಿರುವ ವಿಚಾರವನ್ನು ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಮಯೋಸೈಟಿಸ್ ಎನ್ನುವ ಒಂದು ಅಪರೂಪವಾದ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುವುದನ್ನು ಕಡಿಮೆ ಮಾಡಿಕೊಂಡು, ಆರೋಗ್ಯದ ಕಡೆಗೆ ಸಾಕಷ್ಟು ಗಮನವನ್ನು ನೀಡುತ್ತಿದ್ದಾರೆ. ಅಲ್ಲದೆ ಬಿಡುವಿನ ವೇಳೆಯಲ್ಲಿ ವಿದೇಶಗಳ ಪ್ರವಾಸವನ್ನು ಮಾಡುತ್ತಾ ಸಂತೋಷದ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ನಟಿ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದು ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ.

ಮೇ 5ನೇ ತಾರೀಕು ಸಮಂತಾ ತಮ್ಮ instagram ಸ್ಟೋರಿಯಲ್ಲಿ ಹಾಕಿದ್ದ ಪೋಸ್ಟ್ ಒಂದು ವೈರಲ್ ಆಗುವ ಜೊತೆಗೆ ಒಂದಷ್ಟು ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗಿದೆ. ಇತ್ತೀಚಿಗಷ್ಟೇ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫಾರ್ ಇನ್ಫ್ರಾ ರೆಡ್ ಸೌನಾ (For Infrared Sauna) ವಿಧಾನದ ಉಪಯೋಗದ ಕುರಿತಾಗಿ ಒಂದು ಫೋಟೋವನ್ನು ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದರ ಅರ್ಥ ದೀರ್ಘಕಾಲದ ಕಾಯಿಲೆಗಳು, ಚರ್ಮದ ಸೌಂದರ್ಯ ಮತ್ತು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯವಾಗುವ ವಿಧಾನವಾಗಿದೆ.

ಈ ವಿಧಾನ ಅನುಸರಣೆ ಮಾಡುವವರು ಒಂದಷ್ಟು ಸಮಯ ಕಾಲ ಬಾತ್ ಟಬ್ ನಲ್ಲಿ (Bath Tub) ಇರಬೇಕಾಗುತ್ತದೆ. ನಟಿ ಸಮಂತಾ ಟವೆಲ್ ಒಂದನ್ನು ಸುತ್ತಿಕೊಂಡು ಬಾತ್ ಟಬ್ ನಲ್ಲಿ ಕೂತ್ಕೊಂಡು ಈ ವಿಧಾನವನ್ನು ಅನುಸರಿಸಿದ್ದರು. ಅಲ್ಲದೇ ಅವರು ಆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೆ ಅದಕ್ಕೂ ಮೊದಲು ನಟಿ ತಮ್ಮ ಬೆತ್ತಲಾಗಿರುವ ದೇಹದ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಆದರೆ ಕೂಡಲೇ ನಟಿ ಅದನ್ನು ಡಿಲೀಟ್ ಮಾಡಿದ್ದಾರೆ ಎನ್ನುವ ಒಂದು ಮಾತು ಸೋಶಿಯಲ್ ಮೀಡಿಯಾದಲ್ಲಿ ಈಗ ಬಾರಿ ಸದ್ದನ್ನು ಮಾಡಿದೆ.‌

ಸಮಂತಾ ಈ ಫೋಟೋವನ್ನು ಪೋಸ್ಟ್ ಮಾಡಿದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ನಟಿಯು ತಮ್ಮ ಬೆತ್ತಲೆ ಫೋಟೋವನ್ನು ಶೇರ್ ಮಾಡಿ ಕೂಡಲೇ ಡಿಲೀಟ್ ಮಾಡಿದ್ದಾರೆ ಎಂದು ಅನೇಕರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ವಿಚಾರವಾಗಿ ನಟಿಯ ಅಭಿಮಾನಿಗಳು ಮತ್ತು ನೆಟ್ಟಿಗರ ನಡುವೆ ಕಾಮೆಂಟ್ ಗಳ ಸಮರ ನಡೆಯುತ್ತಿದೆ. ಅಭಿಮಾನಿಗಳು ವೈಲ್ ಆಗುತ್ತಿರುವುದು ಒಂದು ಫೇಕ್ ಫೋಟೋ ಎಂದು ತಮ್ಮ ವಾದವನ್ನು ಇಡುತ್ತಿದ್ದಾರೆ.

ಮತ್ತೊಂದು ಕಡೆ ನೆಟ್ಟಿಗರು ಮಾತ್ರ ಸಮಂತಾ ಕೊರಳಿನಲ್ಲಿರುವ ಸರ ಮಾತ್ರ ಯಾಕೆ ಒಂದೇ ರೀತಿ ಇದೆ ಅಂತ ಸಮಂತಾ ಅಭಿಮಾನಿಗಳನ್ನು ಪ್ರಶ್ನೆಯನ್ನ ಮಾಡಿದ್ದಾರೆ. ಬಾತ್ ಟಬ್ ನಲ್ಲಿ ಬೆತ್ತಲಾಗಿ ಕೂತಿರುವ ಯುವತಿಯ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಇದರಲ್ಲಿ ಮುಖ ಸರಿಯಾಗಿ ಕಾಣುತ್ತಿಲ್ಲ. ಒಟ್ಟಿನಲ್ಲಿ ಸಮಂತಾ ಶೇರ್ ಮಾಡಿದ ಹೊಸ ಫೋಟೋ ಭರ್ಜರಿ ಸುದ್ದಿಗೆ ಕಾರಣವಾಗಿದೆ.

Leave a Comment