Sameer Rizvi: ನಮಾಜ್ ಮಾಡುವಾಗ ಸಿಗೋ ನೆಮ್ಮದಿ ಶತಕ ಹೊಡೆದಾಗಲೂ ಸಿಗೋದಿಲ್ಲ; ಭಾರತದ ಯುವ ಆಟಗಾರನ ಮಾತು

Written by Soma Shekar

Published on:

---Join Our Channel---

Sameer Rizvi: ಐಪಿಎಲ್​ (IPL) ಮೂಲಕ ಬಹಳಷ್ಟು ಜನ ಯುವ ಪ್ರತಿಭೆಗಳು ಕ್ರಿಕೆಟ್ ಮೂಲಕವೇ ತಮ್ಮ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ. ಈ ಟೂರ್ನಿ ಮೂಲಕ ನ್ಯಾಷನಲ್‌ ಟೀಮ್ ನಲ್ಲಿ ಸಹಾ ಅವಕಾಶಗಳನ್ನು ಪಡೆದುಕೊಂಡು ಸ್ಟಾರ್ ಆಟಗಾರರರಾಗುವತ್ತ ಅನೇಕರು ಹೆಜ್ಜೆ ಹಾಕುತ್ತಿದ್ದಾರೆ. ಹೀಗೆ ಐಪಿಎಲ್ ಮೂಲಕ ಜನಪ್ರಿಯತೆ ಪಡೆದವರಲ್ಲಿ ಸಮೀರ್​ ರಿಜ್ವಿ (Sameer Rizvi) ಒಬ್ಬರು.

ಐಪಿಎಲ್ ನ 17ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದಲ್ಲಿ ಆಡಿದ್ದ ಇವರನ್ನು ಹರಾಜಿನ ವೇಳೆ 8.4 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿತ್ತು. ಈಗ ಈ ಆಟಗಾರ ಕ್ರಿಕೆಟ್ ಅಲ್ಲ ಬದಲಾಗಿ ತಮ್ಮ ಮಾತಿನಿಂದ ಸುದ್ದಿಯಾಗಿದ್ದಾರೆ. ಅವರ ಹೇಳಿಕೆ ಎಲ್ಲೆಡೆ ವೈರಲ್ ಆಗುವ ಮೂಲಕ ಸಾಕಷ್ಟು ಸದ್ದು ಮಾಡಿದೆ.

ಖಾಸಗಿ ಸುದ್ದಿ ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಸಮೀರ್ ರಿಜ್ವಿ, ನಾನೊಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದೇನೆ. ಪ್ರತಿದಿನ ತಪ್ಪದೇ ನಮಾಜ್ ಅನ್ನು ಮಾಡುತ್ತೇನೆ. ನಮಾಜ್​ ಪಠಣೆ ಮಾಡುವುದರಿಂದ ಸಿಗುವಂತಹ ಶಾಂತಿ ಮತ್ತು ನೆಮ್ಮದಿಯು ಶತಕ ಸಿಡಿಸಿದಾಗಲೂ ಸಿಗುವುದಿಲ್ಲ ಎಂದಿದ್ದಾರೆ.

ಎಂತಹುದೇ ಒತ್ತಡದ ಪರಿಸ್ಥಿತಿ ಇದ್ದರೂ ಸಹಾ  ಶಾಂತವಾಗಿರಬೇಕು ಎನ್ನುವುದನ್ನು ನನಗೆ ಧೋನಿಕಲಿಸಿಕೊಟ್ಟಿದ್ದಾರೆ. ನನಗೆ ಕ್ರಿಕೆಟ್ ಲೆಜೆಂಡ್‌ ಗಳಾದ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಇನ್ಬರೂ ಸಹಾ ಅಚ್ಚುಮೆಚ್ಚು. ಅವರೇ ನನಗೆ ಕ್ರಿಕೆಟ್ ಆಡುವುದಕ್ಕೆ ಸ್ಪೂರ್ತಿ ಎನ್ನುವ ಮಾತುಗಳನ್ನು ಹೇಳಿದ್ದಾರೆ.

Leave a Comment