Chiranjeevi: 100 ನೇ ಸಲ ರಕ್ತದಾನ ಮಾಡಿದ ನಟನನ್ನು ಮನೆಗೆ ಕರೆಸಿ ಸನ್ಮಾನ ಮಾಡಿದ ಮೆಗಾಸ್ಟಾರ್ ಚಿರಂಜೀವಿ

Written by Soma Shekar

Published on:

---Join Our Channel---

Chiranjeevi: ರಕ್ತದಾನವನ್ನ ಜೀವದಾನ ಅಂತಾನೇ ಕರೆಯಲಾಗುತ್ತೆ. ಟಾಲಿವುಡ್ ನಲ್ಲಿ (Tollywood) ಚಿರಂಜೀವಿ ಅವರ ಬ್ಲಡ್ ಬ್ಯಾಂಕುಗಳಿಗೆ (Chiranjeevi blood bank) ವಿಶೇಷವಾದ ಗೌರವ ಮತ್ತು ಮನ್ನಣೆ ದೊರೆತಿದೆ. ಕಳೆದ 26 ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಜನರಿಗೆ ರಕ್ತ ದಾನ ಮಾಡುವ ಮೂಲಕ ಹಲವು ಜೀವಗಳನ್ನು ಉಳಿಸುವಂತಹ ಮಹತ್ವದ ಕೆಲಸವನ್ನು ತಮ್ಮ ಬ್ಲಡ್ ಬ್ಯಾಂಕುಗಳ ಮೂಲಕ ಮಾಡುತ್ತಿದ್ದಾರೆ ಇದರ ಸಂಸ್ಥಾಪಕರಾಗಿರುವ ಮೆಗಾಸ್ಟಾರ್ ಚಿರಂಜೀವಿಯವರು (Chiranjeevi). ತಮ್ಮ ಅಭಿಮಾನಿಗಳ ಅಪಾರವಾದ ಬೆಂಬಲದೊಂದಿಗೆ ಬ್ಲಡ್ ಬ್ಯಾಂಕ್ ಅನ್ನು ನಡೆಸ್ತಾ, ನಿರಂತರವಾಗಿ ಸೇವೆಯನ್ನ ಸಲ್ಲಿಸುತ್ತಾ ಬರ್ತಿದ್ದಾರೆ.

ಈ ಬ್ಲಡ್ ಬ್ಯಾಂಕುಗಳಿಗೆ ರಕ್ತವನ್ನು ನೀಡೋ ಮೂಲಕ ತಮ್ಮ ಬೆಂಬಲವನ್ನ ಒದಗಿಸುತ್ತಿರುವ ಅಸಂಖ್ಯಾತ ದಾನಿಗಳಲ್ಲಿ ತೆಲುಗಿನ ಜನಪ್ರಿಯ ನಟ ಮಹರ್ಷಿ ರಾಘವ (Maharshi Raghava) ಅವರು ಕೂಡಾ ಸೇರಿದ್ದಾರೆ. ಮೆಗಾಸ್ಟಾರ್ ಮೇಲಿನ ಅಭಿಮಾನದಿಂದ 1998 ಅಕ್ಟೋಬರ್ ನಲ್ಲಿ ಚಿರಂಜೀವಿ ಬ್ಲಡ್ ಬ್ಯಾಂಕ್ ನ ಸ್ಥಾಪನೆಯಾಯಿತು. ತೆಲುಗು ಚಿತ್ರರಂಗದ ಹಿರಿಯ ನಟ ಮುರಳಿ ಮೋಹನ್ (Murali Mohan) ಅವರು ರಕ್ತದಾನ ಮಾಡಿದ ಮೊದಲ ವ್ಯಕ್ತಿಯಾದರು.

ಈಗ ಮಹರ್ಷಿ ರಾಘವ ಅವರು 100ನೇ ಬಾರಿಗೆ ರಕ್ತದಾನವನ್ನ ಮಾಡಿರುವುದು ಒಂದು ದೊಡ್ಡ ದಾಖಲೆಯಾಗಿದೆ. ಮಹರ್ಷಿ ರಾಘವ ಅವರು ನೂರನೇ ಬಾರಿಗೆ ರಕ್ತದಾನ ಮಾಡಿದ್ದ ಸಂದರ್ಭದಲ್ಲಿ ಚಿರಂಜೀವಿಯವರು ಯಾವುದೋ ಕಾರ್ಯ ನಿಮಿತ್ತ ಚೆನ್ನೈನಲ್ಲಿ ಇದ್ದರು. ಆದರೆ ಅವರು ಹೈದರಾಬಾದಿಗೆ ಮರಳಿದ ಕೂಡಲೇ ಮಹರ್ಷಿ ರಾಘವ ಅವರಿಗೆ ತಮ್ಮ ಮನೆಗೆ ಆಹ್ವಾನವನ್ನು ನೀಡಿ ವಿಶೇಷವಾಗಿ ಸನ್ಮಾನಿಸಿದ್ದಾರೆ.

ಈ ವೇಳೆ ರಾಘವ ಅವರ ಪತ್ನಿ ಶಿಲ್ಪಾ ಚಕ್ರವರ್ತಿ ಅವರ ಜೊತೆಯಲ್ಲಿದ್ದರು. ಮಹರ್ಷಿ ರಾಘವ ಅವರ ನಿರ್ದೇಶನದಂತೆ ಚಿರಂಜೀವಿ ಬ್ಲಡ್ ಬ್ಯಾಂಕ್ ನ ಮುಖ್ಯ ಹಣಕಾಸು ಅಧಿಕಾರಿ ಶೇಖರ್, ಚಿರಂಜೀವಿ ನೇತ್ರ ಮತ್ತು ರತ್ತ ನಿಧಿ ಕೇಂದ್ರದ ಸಿಒಒ ರಮಣ ಸ್ವಾಮಿ ನಾಯ್ಡು ಹಾಗೂ ವೈದ್ಯಾಧಿಕಾರಿ ಡಾಕ್ಟರ್ ಅನುಷಾ ರಕ್ತದಾನವನ್ನು ಮಾಡಿದರು. ಮೆಗಾಸ್ಟಾರ್ ಚಿರಂಜೀವಿ ಅವರು ಮಹರ್ಷಿರಾಘವ ಅವರನ್ನ ಅಭಿನಂದಿಸಿದ್ದಾರೆ. ಮಹರ್ಷಿ ರಾಗವ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಿದ್ದರು ಎನ್ನಲಾಗಿದ್ದು, ನೂರು ಬಾರಿ ರಕ್ತದಾನ ಮಾಡಿರುವುದು ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

Leave a Comment