Pavithra Jayaram: ಚಂದು ಪವಿತ್ರಾ ಬಗ್ಗೆ ಹೊರ ಬಂದ ಸುದ್ದಿಗಳು, ಚಂದು ಸಾವಿನ ಬೆನ್ನಲ್ಲೇ ಪವಿತ್ರಾ ಅವರ ಪುತ್ರನ ಸ್ಪಷ್ಟನೆ

Written by Soma Shekar

Published on:

---Join Our Channel---

Pavithra Jayaram: ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಹೆಸರನ್ನು ಮಾಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram) ಅವರು ಕೆಲವೇ ದಿನಗಳ ಹಿಂದೆಯಷ್ಟೇ ರಸ್ತೆ ಅಪಘಾತದಲ್ಲಿ ನಿಧನರಾದ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು. ಇದಾದ ನಂತರ ಪವಿತ್ರ ಅವರ ಸ್ನೇಹಿತ ತೆಲುಗು ನಟ ಚಂದು ಅಲಿಯಾಸ್ ಚಂದ್ರಕಾಂತ್ (Actor Chandrakanth) ಅವರು ಪವಿತ್ರ ಸಾವಿನ ದುಃಖದಿಂದ ಹೊರ ಬರಲು ಸಾಧ್ಯವಾಗದೇ ಆ ತ್ಮ ಹ ತ್ಯೆ ಗೆ ಶರಣಾದ ವಿಚಾರವು ಸಹಾ ಮಾದ್ಯಮಗಳಲ್ಲಿ ಸುದ್ದಿಯಾಗಿದೆ.

ಆದರೆ ಈ ಘಟನೆಗಳ ಬೆನ್ನಲ್ಲೇ ಪವಿತ್ರ ಮತ್ತು ಚಂದು ನಡುವಿನ ಸ್ನೇಹ ಸಂಬಂಧ ಮತ್ತು ಅವರು ಮದುವೆ ಆಗಬೇಕೆಂದಿದ್ದರು ಎನ್ನುವ ವಿಚಾರಗಳು ಮುನ್ನೆಲೆಗೆ ಬಂದಿದ್ದು, ಅತ್ತ ತೆಲುಗು ರಾಜ್ಯಗಳಲ್ಲಿ ಚಂದ್ರಕಾಂತ್ ಮತ್ತು ಪವಿತ್ರ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ, ಮಾದ್ಯಮಗಳಲ್ಲಿ ಚರ್ಚೆಗಳು ನಡೆಯುತ್ತಿದೆ. ಈಗ ಈ ವಿಚಾರವಾಗಿ ಪವಿತ್ರ ಅವರ ಪುತ್ರ (Son) ಪ್ರಜ್ವಲ್ (Prajwal) ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಚಂದು ಸಾವಿನ ನಂತರ ಅವರ ಪತ್ನಿ ಶಿಲ್ಪ ಮತ್ತು ಚಂದು ಅವರ ತಾಯಿ ಮಾದ್ಯಮಗಳ ಮುಂದೆ ಪವಿತ್ರ ಬಂದ ಮೇಲೆ ಎಲ್ಲವೂ ಬದಲಾಗಿತ್ತ ಎಂದು ಹೇಳಿದ್ದರು. ಚಂದು ಅವರ ಪತ್ನಿ, ಪ್ರೀತಿಸಿ ಮದುವೆಯಾದ ನನ್ನ ಗಂಡ ನನ್ನನ್ನ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಪವಿತ್ರ ಜೊತೆಯಲ್ಲೇ ಇದ್ರು ಎಂದು ಕಣ್ಣೀರನ್ನು ಹಾಕಿದ್ದರು. ಈ ಬೆಳವಣಿಗೆಗಳ ನಂತರ ಪವಿತ್ರ ಅವರ ಮಗ ಪ್ರಜ್ವಲ್ ಇದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಅಮ್ಮ ಮತ್ತು ಚಂದ್ರಕಾಂತ್ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಇದು ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಗೊತ್ತಿದೆ. ಅವರ ಒಡನಾಡ ಹೇಗಿತ್ತು ಎಂದು ನಾವು ನೋಡಿದ್ದೇವೆ. ಮದುವೆ (wedding) ಆಗೋ ಪ್ಲಾನ್ ಇತ್ತು ಎಂಬುದೆಲ್ಲಾ ಸಂದರ್ಶನಗಳಲ್ಲಿ ನಾನು ನೋಡಿದೆ. ಆದರೆ ಮಾತುಕತೆ ಅನ್ನೋದು ಅಷ್ಟೊಂದು ಆಗಿರಲಿಲ್ಲ ಮತ್ತು ನಮಗೂ ಗೊತ್ತಿರಲಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ. ಚಂದು ಕುಟುಂಬದವರು ಮಾತನಾಡಿರೋದನ್ನ ನಾನು ನೋಡಿದ್ದೇನೆ.

ಅದಕ್ಕೆ ಏನು ಸಾಕ್ಷಿ ಬೇಕು ಅದು ನನ್ನ ಬಳಿ ಇದೆ. ಅದರ ಬಗ್ಗೆ ನಾವೂ ಮಾತನಾಡೋಕೆ ಶುರು ಮಾಡಿದರೆ ಮನಸ್ತಾಪಗಳು ಹೆಚ್ಚಾಗುತ್ತೆ. ಈಗ ನನ್ನ ಮತ್ತು ನನ್ನ ತಂಗಿಯ ಭವಿಷ್ಯತ್ತು ಮುಖ್ಯ. ಆದರೆ ಸತ್ಯ ಏನಿದೆ ಅದನ್ನು ಮಾತನಾಡಲಿ ಎಂದು ಪ್ರಜ್ವಲ್ ಮಾದ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಅವರಿಬ್ಬರು ಉತ್ತಮ ಸ್ನೇಹಿತರು.

ಚಂದ್ರಕಾಂತ್ ಆ ತ್ಮ ಹ ತ್ಯೆ ಬಗ್ಗೆ ನ್ಯೂಸ್ ನೋಡಿದಾಗಲೇ ಗೊತ್ತಾಗಿದ್ದು. ನಾವು ಇಲ್ಲಿ ನಮ್ಮ ತಾಯಿಯ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದೆವು. ಈ ವೇಳೆ ಅವರ ಸಾವಿನ ವಿಚಾರ ತಿಳಿದು ಬೇಸರವಾಯಿತು. ಹೈದರಬಾದ್ ನಲ್ಲಿ ನಮಗೆ ತುಂಬಾ ಹತ್ತಿರ ಇದ್ದವರು ಎಂದರೆ ಅದು ಚಂದ್ರಕಾಂತ್ ಮಾತ್ರ. ಅವರು ಹೀಗೆ ಮಾಡಿಕೊಂಡಿದ್ದು ನಮಗೂ ಸಹಾ ಬೇಸರವನ್ನು ಉಂಟು ಮಾಡಿದೆ, ಇಲ್ಲಿ ಕಾರ್ಯಗಳು ಇದ್ದಿದ್ದರಿಂದ ಅಲ್ಲಿಗೆ ಹೋಗೋದಕ್ಕೆ ಆಗಲಿಲ್ಲ ಎಂದು ಪ್ರಜ್ವಲ್ ಅವರು ಹೇಳಿದ್ದಾರೆ.

Leave a Comment