Bollywood: ಬಾಲಿವುಡ್ ನಟಿಯರ ಮೇಲೆ ನಿರ್ಮಾಪಕರ ಆಕ್ರೋಶ; ಕಠಿಣ ಕ್ರಮದ ಆಲೋಚನೆಯಲ್ಲಿ ನಿರ್ಮಾಪಕರು

Written by Soma Shekar

Published on:

---Join Our Channel---

Bollywood: ಬೇರೆಲ್ಲಾ ಭಾಷೆಗಳ ನಟಿಯರಿಗಿಂತ ಹೆಚ್ಚು ಮನ್ನಣೆಯನ್ನ ಬಾಲಿವುಡ್ (Bollywood) ನಟಿಯರಿಗೆ ನೀಡಲಾಗುತ್ತದೆ. ದಕ್ಷಿಣ ಸಿನಿಮಾ ರಂಗದಲ್ಲಿ ಭಾರೀ ಬಜೆಟ್ ಸಿನಿಮಾಗಳು ಹಾಗೂ ಸ್ಟಾರ್ ಗಳ ಸಿನಿಮಾ ನಿರ್ಮಾಣವಾಗುತ್ತಿದೆ ಎಂದಾಗ ಮೊದಲ ಆದ್ಯತೆಯನ್ನು ಬಾಲಿವುಡ್ ನಟಿಯರಿಗೆ ನೀಡಲಾಗುತ್ತದೆ. ಆದ್ದರಿಂದಲೇ ಅಲ್ಲಿನ ನಟಿಯರ ಸಂಭಾವನೆ ಸಹಾ ಹೆಚ್ಚಾಗಿದೆ ಎಂದು ಹೇಳಬಹುದು. ಆದರೆ ಈಗ ಬಾಲಿವುಡ್ ನ ಸಿನಿಮಾ ನಿರ್ಮಾಪಕರು ಅಲ್ಲಿನ ಕೆಲವು ನಟಿಯರ (Bollywood Actresses) ಬಗ್ಗೆ ತೀವ್ರವಾದ ಅಸಮಾಧಾನವನ್ನು ಹೊರ ಹಾಕಿರುವ ವಿಚಾರ ಸುದ್ದಿಯಾಗಿ ಎಲ್ಲರಿಗೂ ಅಚ್ಚರಿಯನ್ನ ಮೂಡಿಸಿದೆ.

ಬಾಲಿವುಡ್ ನ ಕೆಲವು ನಟಿಯರು ಸಿನಿಮಾದ ನಿರ್ಮಾಣ ವೆಚ್ಚ ಏರಿಕೆ ಆಗೋದಕ್ಕೆ ಕಾರಣವಾಗಿದ್ದಾರೆ ಅನ್ನೋದು ನಿರ್ಮಾಪಕರ (Producers) ಅಸಮಾಧಾನಕ್ಕೆ ಕಾರಣವಾಗಿದೆ. ನಟಿಯರು ತಮ್ಮ ಜೊತೆಗೆ ಸುಮಾರು 10 ರಿಂದ 12 ಮಂದಿ ಸಿಬ್ಬಂದಿಯನ್ನು ಕರೆದುಕೊಂಡು ಚಿತ್ರೀಕರಣದ ಸ್ಥಳಕ್ಕೆ ಬರುತ್ತಾರೆ. ಮೇಕಪ್ ಗೆ ಪ್ರತ್ಯೇಕ ಸಿಬ್ಬಂದಿ, ಸೋಶಿಯಲ್ ಮೀಡಿಯಾ ಸಿಬ್ಬಂದಿ, ಹೇರ್ ಡ್ರೆಸ್ಸರ್ಸ್, ಮ್ಯಾನೇಜರ್, ಪುರುಷ ಮತ್ತು ಸ್ತ್ರೀ ಸಹಾಯಕರು, ಡಯಟಿಷಿಯನ್, ಟ್ಯಾಲೆಂಟ್ ಏಜೆನ್ಸಿ ಹೀಗೆ ಒಂದು ದೊಡ್ಡ ತಂಡವನ್ನು ತಮ್ಮ ಜೊತೆಗೆ ಕರೆದುಕೊಂಡು ಬರುತ್ತಾರೆ.

ನಟಿಯರ ಜೊತೆಗೆ ಬರುವಂತಹ ಇಂತಹ ದೊಡ್ಡ ತಂಡದ ಖರ್ಚು ವೆಚ್ಚಗಳನ್ನು ನಿರ್ಮಾಪಕರ ಖಾತೆಗೆ ಸೇರಿಸಲಾಗುತ್ತದೆ. ಇದರಿಂದಾಗಿ ಸಿನಿಮಾದ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದೆ ಎಂಬ ಆರೋಪವನ್ನು ನಿರ್ಮಾಪಕರು ಮಾಡಿದ್ದು, ಇದೇ ವೇಳೆ ಅವರು ಕೆಲವು ಬಾಲಿವುಡ್ ನಟರೂ ಸಹಾ ತಮ್ಮೊಂದಿಗೆ ದೊಡ್ಡ ತಂಡವನ್ನೇ ಕರೆದುಕೊಂಡು ಬರುತ್ತಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ. ಈ ವಿಚಾರವಾಗಿ ಹಿಂದಿ, ತೆಲುಗು, ತಮಿಳು ನಿರ್ಮಾಪಕರ ಸಂಘಗಳು, ಬಾಲಿವುಡ್ ನ ಕೆಲವು ಪ್ರಮುಖ ಟ್ಯಾಲೆಂಟ್ ಏಜೆನ್ಸಿಗಳ ಜೊತೆಗೆ ಸಭೆಯನ್ನು ನಡೆಸಿದ್ದಾರೆ ಎನ್ನಲಾಗಿದೆ.‌

ಈ ಸಭೆಯಲ್ಲಿ ಸಿನಿಮಾ ನಿರ್ಮಾಣದ ವೆಚ್ಚ ಏರಿಕೆ ಆಗುತ್ತಿರುವ ಜೊತೆಗೆ ನಟ ನಟಿಯರ ಅನಾವಶ್ಯಕ ಖರ್ಚುಗಳ ಬಗ್ಗೆ ಚರ್ಚೆ ಮಾಡಲಾಗಿದ್ದು, ನಟ ನಟಿಯರ ಆಹಾರ ಸೇರಿದಂತೆ ಹೆಚ್ಚಾಗುತ್ತಿರುವ ಅವರ ಖರ್ಚುಗಳಿಂದ ನಿರ್ಮಾಣ ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಚರ್ಚೆಯನ್ನು ಮಾಡಲಾಗಿದ್ದು, ಇನ್ಮುಂದೆ ನಟ ನಟಿಯರ ಜೊತೆಗೆ ಸಿನಿಮಾದ ಒಪ್ಪಂದದ ವೇಳೆಯಲ್ಲೇ ಎಲ್ಲಾ ಖರ್ಚುಗಳನ್ನು ಕಡಿತಗೊಳಿಸಲು ತೀರ್ಮಾನಿಸಲಾಗುತ್ತದೆ ಎನ್ನಲಾಗಿದೆ.

ಕೆಲವೇ ದಿನಗಳ ಹಿಂದೆಯಷ್ಟೇ ಹಿಂದಿ ಸಿನಿಮಾಗಳು ನಿರ್ದೇಶಕಿ ಮತ್ತು ನಿರ್ಮಾಪಕಿ ಆಗಿರುವ ಪರ್ಹಾ ಖಾನ್ (Farah Khan) ಮಾತ್ರವಲ್ಲದೇ ನಟಿ ಮತ್ತು ನಿರ್ಮಾಪಕಿಯೂ ಆಗಿರುವಂತಹ ಕೃತಿ ಸೆನೊನ್ (Kriti Sanon) ಸಹಾ ಕೆಲವು ನಟಿಯರಿಂದ ಸಿನಿಮಾ ನಿರ್ಮಾಣದಲ್ಲಿ ಹೆಚ್ಚಾಗುತ್ತಿರುವ ಅನಗತ್ಯವಾದ ಖರ್ಚಿನ ಬಗ್ಗೆ ಬಹಿರಂಗವಾಗಿ ಮಾತನಾಡಿ ಗಮನ ಸೆಳೆದಿದ್ದರು. ಇದೇ ವಿಚಾರವಾಗಿ ಈಗ ನಿರ್ಮಾಪಕರು ಒಂದು ಗಟ್ಟಿ ನಿರ್ಧಾರವನ್ನು ಮಾಡಲು ನಿರ್ಧರಿಸಿದ ಹಾಗೆ ಕಾಣುತ್ತಿದೆ.

Leave a Comment