Nora Fatehi: ಗಂಡಸು ನನಗೆ ಬೇಕಿಲ್ಲ, ಬಾಹುಬಲಿ ಬೆಡಗಿಯ ಸಂಚಲನ ಮಾತಿಗೆ ಶಾಕ್ ಆದ ಬಾಲಿವುಡ್ ಮತ್ತು ನೆಟ್ಟಿಗರು

Written by Soma Shekar

Published on:

---Join Our Channel---

Nora Fatehi: ಬಾಲಿವುಡ್ ನ (Bollywood) ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ವಿಶೇಷ ಹಾಡುಗಳಿಗೆ ಭರ್ಜರಿಯಾಗಿ ಹೆಜ್ಜೆಗಳನ್ನು ಹಾಕಿ, ಡ್ಯಾನ್ಸ್ ಪ್ರಿಯರು ಮತ್ತು ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚನ್ನು ಹೊತ್ತಿಸುವ ಮೂಲಕವೇ ಅಪಾರವಾದ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿರುವ ನೋರಾ ಫತೇಹಿ (Nora Fatehi) ಬಾಲಿವುಡ್ ನ ಯಾವುದೇ ಸ್ಟಾರ್ ನಟಿಯರಿಗಿಂತ ಕಡಿಮೆ ಏನಿಲ್ಲ ಎನ್ನುವಂತೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ನಟಿಯ ಡ್ಯಾನ್ಸ್ ಗಳು ಬಾಲಿವುಡ್ ಸಿನಿಮಾಗಳಿಗೆ ಮಾತ್ರವೇ ಸೀಮಿತವಾಗಿಲ್ಲ, ದಕ್ಷಿಣದ ಸಿನಿಮಾಗಳಲ್ಲೂ ಹೆಜ್ಜೆ ಹಾಕಿ ಪ್ರೇಕ್ಷಕರ ಮೇಲೆ ತಮ್ಮ ಡ್ಯಾನ್ಸ್ ಮೂಲಕ ಮೋಡಿಯನ್ನು ಮಾಡಿದ್ದಾರೆ ನೋರಾ.

ದಕ್ಷಿಣದ ಸಿನಿಮಾಗಳ ವಿಚಾರಕ್ಕೆ ಬಂದರೆ ಟೆಂಪರ್, ಬಾಹುಬಲಿ (Bahubali), ಕಿಕ್ 2 ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆಗಳನ್ನ ಹಾಕಿರುವ ನೋರಾ ಫತೇಹಿ ಕತೆ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಈ ನಟಿ ಆಗಾಗ ತಮ್ಮ ಬಹಳ ಗ್ಲಾಮರಸ್ ಆಗಿರುವಂತಹ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸದ್ದನ್ನ ಮಾಡ್ತಾರೆ. ನಟಿಯ ಫೋಟೋಗಳು ಬಹಳ ಬೇಗ ವೈರಲ್ ಆಗಿ ದೊಡ್ಡಮಟ್ಟದಲ್ಲಿ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತವೆ.

ಇತ್ತೀಚಿಗೆ ನೋರಾ ಒಂದು ಸಂದರ್ಶನದಲ್ಲಿ ಭಾಗಿಯಾಗಿ ಹಂಚಿಕೊಂಡಂತಹ ಹಲವು ವಿಚಾರಗಳು ಪ್ರಮುಖ ಸುದ್ದಿಗಳಾಗಿ ಹರಿದಾಡುತ್ತಿವೆ. ನಟಿಯು ಸಂದರ್ಶನದ ವೇಳೆಯಲ್ಲಿ ಮಹಿಳಾ ಸ್ವಾತಂತ್ರ್ಯ ಮತ್ತು ಸ್ತ್ರೀವಾದದ ಕುರಿತಾಗಿ ಉತ್ತರ ನೀಡುವಾಗ ಗಂಡಸರ ಕುರಿತಾಗಿ ಆಡಿದಂತಹ ಮಾತುಗಳು ಈಗ ಚರ್ಚೆಯ ವಿಷಯಗಳಾಗಿ ಬದಲಾಗಿದೆ. ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿರುವ ರಣವೀರ್ ಅಲಹಾಬಾದಿಯಾ (Ranveer Alahabadia) ಅವರ ಪಾಡ್ಕಾಸ್ಟ್ ಚಾನೆಲ್ ನಲ್ಲಿ ನೋರಾ ಸಂದರ್ಶನದಲ್ಲಿ ಭಾಗವಹಿಸಿದ್ದರು.

ಈ ವೇಳೆ ನೋರಾ ಸ್ತ್ರೀ ವಾದದ ಯುಗದಿಂದ ಅನೇಕ ಪುರುಷರು ಬ್ರೈನ್ ವಾಶ್ ಆಗಿದ್ದಾರೆ. ಪ್ರತಿಯೊಬ್ಬ ಮಹಿಳೆ ತನ್ನದೇ ಆದ ಆಲೋಚನೆಗಳನ್ನು ಮತ್ತು ಸ್ವಾತಂತ್ರ್ಯವನ್ನು ಹೊಂದಿರಬೇಕು. ಅಲ್ಲದೇ ನನಗೆ ಗಂಡಸರ ಅಗತ್ಯವಿಲ್ಲ. ಯಾಕಂದ್ರೆ ನನಗೆ ಸ್ತ್ರೀವಾದದಂತಹ ವಿಚಾರಗಳಲ್ಲಿ ಖಂಡಿತ ನಂಬಿಕೆ ಇಲ್ಲ. ನಿಜವಾದ ಮಹಿಳೆಯರಿಗೆ ಉದ್ಯೋಗ ಮತ್ತು ಅವರದೇ ಆದ ಜೀವನ ವಿಧಾನ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆ ಸ್ವತಂತ್ರವಾಗಿರಬೇಕು. ಆದರೆ ಆ ಸ್ವತಂತ್ರ ಅನ್ನೋದು ಒಂದು ಮಿತಿಯಲ್ಲಿ ಇರಬೇಕು.

ಅದು ಅಲ್ಲದೇ ನನಗೆ ಸ್ತ್ರೀವಾದ ಬೇಕಾಗಿಲ್ಲ. ಎಲ್ಲರಂತೆ ನಾನು ಇಂತಹ ಅಸಂಬದ್ಧತೆಯನ್ನು ನಂಬೋದಿಲ್ಲ. ಅದಕ್ಕೆ ಕಾರಣ ಸ್ತ್ರೀವಾದವು ನಮ್ಮ ಸಮಾಜವನ್ನು ಹಾಗೆ ಮಾಡಿದೆ ಅನ್ನೋದು ನನ್ನ ಭಾವನೆ. ಮಹಿಳೆಯರು ಅನ್ನದಾತರೆಂದು ನಾನು ಭಾವಿಸುತ್ತೇನೆ. ಅವರು ದುಡಿಯಲು ಹೋಗಿ ಸ್ವಂತ ಜೀವನವನ್ನು ನಡೆಸಬೇಕು ಅಂತ ಹೇಳಿದ್ದಾರೆ. ಮಹಿಳೆಯರು ತಾಯಿಯಾಗಿ ಹೆಂಡತಿಯಾಗಿ ಕುಟುಂಬ ಪೋಷಿಸಬೇಕು, ಗಂಡಸರು ಹಣ ಸಂಪಾದಿಸಿ ಕುಟುಂಬವನ್ನ ಪೋಷಿಸಬೇಕು.

ಮೇಲಾಗಿ ಪ್ರತಿಯೊಬ್ಬ ಮಹಿಳೆಯ ವಿಚಾರವನ್ನು ತಂದೆ, ಗಂಡನಂತೆ ಎಲ್ಲರೂ ಗೌರವಿಸಬೇಕು ಎಂದಿದ್ದಾರೆ. ನಾನು ಹೀಗೆಲ್ಲಾ ಅದನ್ನೆಲ್ಲ ಹಳೆಯ ಸಂಪ್ರದಾಯದ ಕಲ್ಪನೆಗಳು ಅಂತ ಕರೆಯಲಾಗುತ್ತೆ. ಆದರೆ ಅಂದಿನ ಆಲೋಚನೆಗಳು ಸರಿಯಾಗಿದ್ದವು, ಕಾರಣ ಕೆಲವು ಪುರುಷರು ಮನೆಯಲ್ಲಿ ಕೆಲಸವನ್ನು ಮಾಡೋದಕ್ಕೆ ಇಷ್ಟಪಡುವುದಿಲ್ಲ. ಆದ್ರೆ ಸ್ತ್ರೀವಾದದಿಂದ ಜಗತ್ತಿನಲ್ಲಿ ಪುರುಷರನ್ನ ಬ್ರೈನ್ ವಾಶ್ ಮಾಡಲಾಗುತ್ತಿದೆ ಎಂದಿದ್ದಾರೆ ನೋರಾ.

Leave a Comment