Just Married: ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಫ್ಯಾನ್ ಗಳಿಗೆ ಸಿಕ್ತು ಗುಡ್ ನ್ಯೂಸ್; ಖುಷಿ ಪಟ್ಟ ಫ್ಯಾನ್ಸ್

Written by Soma Shekar

Published on:

---Join Our Channel---

Just Married : ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ (Shine Shetty) ಬಗ್ಗೆ ಪ್ರತ್ಯೇಕವಾಗಿ ಪರಿಚಯ ನೀಡೋ ಅಗತ್ಯ ಇಲ್ಲ. ಬಿಗ್ ಬಾಸ್ ನಂತರ ಶೈನ್ ಸಿನಿಮಾಗಳಲ್ಲಿ, ಕಿರುತೆರೆಯಲ್ಲಿ ನಿರೂಪಕನಾಗಿ ಕಾಣಿಸಿಕೊಂಡಿದ್ದಾರೆ. ಅದಾದ ನಂತರ ಇತ್ತೀಚಿನ ದಿನಗಳಲ್ಲಿ ಅವರು ಏನು ಮಾಡ್ತಾ ಇದ್ದಾರೆ ಅನ್ನೋದನ್ನ ತಿಳಿಯೋದಕ್ಕೆ ಅವರ ಅಭಿಮಾನಿಗಳಂತೂ ಕಾಯ್ತಿದ್ದಾರೆ ಅಂದ್ರೆ ಸುಳ್ಳಲ್ಲ. ಇದೇ ರೀತಿಯಲ್ಲಿ ನಮ್ಮನೆ ಯುವರಾಣಿ ಸೀರಿಯಲ್ ಖ್ಯಾತಿಯ ನಟಿ ಅಂಕಿತಾ ಅಮರ್ (Ankita Amar) ಸೀರಿಯಲ್ ನಂತರ ಕಾಣೆಯಾಗಿದ್ದರು.

ಈಗ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ತಮ್ಮ ಅಭಿಮಾನಿಗಳಿಗೊಂದು ಅಚ್ಚರಿಯ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಹೌದು, ಇವರು ಜೋಡಿಯಾಗಿ ‘ಜಸ್ಟ್ ಮ್ಯಾರೀಡ್’ (Just Married) ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾದ ಚಿತ್ರಿಕರಣ ಸಹಾ ಸದ್ದಿಲ್ಲದೇ ಮುಗಿದಿದೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳಂತೂ ಸಖತ್ ಥ್ರಿಲ್ ಆಗಿದ್ದಾರೆ. ಈ ಸಿನಿಮಾಕ್ಕೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ (Ajanish Loknath) ಅವರು ನಿರ್ಮಾಪಕರಾಗಿದ್ದಾರೆ.

ಕಳೆದ ಗಣೇಶ ಚತುರ್ಥಿ ಸಂದರ್ಭದಲ್ಲಿ ಸಿನಿಮಾದ ಅಧಿಕೃತ ಘೋಷಣೆಯನ್ನು ಮಾಡಲಾಗಿತ್ತು. ಈಗ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈ ಸಿನಿಮಾವನ್ನು ಸಿ ಆರ್ ಬಾಬಿ ಅವರು ನಿರ್ದೇಶನ ಮಾಡಿದ್ದಾರೆ.‌ ಇವರ ಬಳಿ ಒಟ್ಟು ಐದು ಕಥೆಗಳಿತ್ತು ಎನ್ನಲಾಗಿದ್ದು, ಅದರಲ್ಲಿ ಚರ್ಚೆ ಮಾಡಿದ ನಂತರ ಜಸ್ಟ್ ಮ್ಯಾರೀಡ್ ಕಥೆ ಓಕೆ ಆಗಿ, ಅದನ್ನು ಸಿನಿಮಾ ಮಾಡಲಾಗಿದೆ ಎನ್ನಲಾಗಿದೆ.

ಇನ್ನು ಸಿನಿಮಾದ ತಾರಾಗಣದ ವಿಚಾರಕ್ಕೆ ಬಂದರೆ ಈ ಸಿನಿಮಾದಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್ ಅವರ ಜೊತೆಗೆ ದೇವರಾಜ್, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರ್ವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ ಅನಿಲ್, ಕುಮುದಾ, ಜಯರಾಮ್, ವೇದಿಕಾ ಕಾರ್ಕಳ್ ಇನ್ನೂ ಮುಂತಾದವರು ನಟಿಸಿದ್ದಾರೆ.

Leave a Comment