Sonu Srinivas Gowda: ಮದ್ವೆ ಬೇಡ, ಪಾಲಿಟಿಕ್ಸ್ ಬೇಕು; ಸೋನು ಹೇಳಿದ ಮಾತಿಗೆ ಫ್ಯಾನ್ಸ್ ಶಾಕ್

Written by Soma Shekar

Published on:

---Join Our Channel---

Sonu Srinivas Gowda : ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಒಂದರಲ್ಲಿ (Bigg Boss Kannada OTT) ಸ್ಪರ್ಧಿಯಾಗಿ ಭಾಗವಹಿಸಿ ಜನಪ್ರಿಯತೆ ಪಡೆದುಕೊಂಡ ಸೋನು ಶ್ರೀನಿವಾಸ್ ಗೌಡ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿರೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಈಗ ಸೋನು ಹೇಳಿರುವ ಮಾತುಗಳು ಸುದ್ದಿಯಾಗಿದೆ. ಸೋನು ತಾನು ಜೈಲಿಗೆ ಹೋಗಿ ಬಂದ ಮೇಲೆ ಫ್ಯಾನ್ಸ್ ಹೆಚ್ಚಾಗಿದ್ದಾರೆ ಅಂತ ಹೇಳಿದ್ದಾರೆ. ಬಹಳಷ್ಟು ಪರ್ಸನಲ್ ಮೆಸೆಜ್ ಗಳು ಬರುತ್ತೆ ಎನ್ನುವ ವಿಚಾರಗಳನ್ನು ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ‌.

ಇದೇ ವೇಳೆ ಸೋನು (Sonu Srinivas Gowda) ಅವರು ತಮ್ಮ ಮದುವೆ ಮತ್ತು ರಾಜಕೀಯದ (Politics) ಕುರಿತಾಗಿಯೂ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರೋ ಸೋನು, ತಮ್ಮ ಅಭಿಮಾನಿಗಳ ಜೊತೆಗೆ ಪ್ರಶ್ನಾವಳಿಯನ್ನು ನಡೆಸಿದ್ದಾರೆ. ಈ ವೇಳೆ ನೆಟ್ಟಿಗರೊಬ್ಬರು ನೀವು ಮದುವೆ ಯಾವಾಗ ಆಗ್ತೀರಾ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ.

ನೆಟ್ಟಿಗರ ಪ್ರಶ್ನೆಗೆ ಉತ್ತರಿಸಿದ ಸೋನು, ನನಗೆ ಮದುವೆ ಆಗೋ ಆಸೆ ಇಲ್ಲ ಹಾಗಾಗಿ ಮದುವೆ ಆಗಬಾರದು ಅಂತ ಅನ್ಕೊಂಡಿದ್ದೇನೆ ಎನ್ನುವ ಮಾತನ್ನು ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಹೆಸರನ್ನು ಮಾಡಬೇಕು ಅನ್ನೋ ಆಸೆ ಇತ್ತು. ಆದರೆ ಈಗ ಅದು ಇಲ್ಲ. ಹೀಗಾಗಿ ರಾಜಕೀಯಕ್ಕೆ ಹೋಗಬೇಕು, ಅಲ್ಲಿ ಕಾಣಿಸಿಕೊಳ್ಳಬೇಕೆಂಬ ಪ್ಲ್ಯಾನ್ ಇದೆ, ಮುಂದಿನ ದಿನಗಳಲ್ಲಿ ನೋಡೋಣ ಎನ್ನುವ ಮಾತನ್ನು ಸೋನು ಹೇಳಿದ್ದಾರೆ.

ಕ್ಯಾಡ್ಬರೀಸ್ ಸಿನಿಮಾದಲ್ಲಿ ಸೋನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಮಗುವೊಂದನ್ನು ದತ್ತು ಪಡೆದಿರುವ ವಿಚಾರದಲ್ಲಿ ಕಾನೂನಿನ ನಿಯಮಗಳನ್ನು ಪಾಲಿಸಿಲ್ಲ ಎನ್ನುವ ಕಾರಣಕ್ಕೆ ಸೋನು ಅವರನ್ನು ಬಂಧಿಸಿ, ಪ್ರಕರಣ ದಾಖಲಾಗಿತ್ತು. ಅನಂತರ ಸೋನು ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ.‌

Leave a Comment