Sangeetha Sringeri: ಮಾರಿ ಗೋಲ್ಡ್ ಸೆಲೆಬ್ರಿಟಿ ಶೋ, ಸಂಗೀತಾ ಸಿನಿಮಾ ನೋಡೋಕೆ ಬಂದ ಬಿಗ್ ಬಾಸ್ ಮಂದಿ

Written by Soma Shekar

Published on:

---Join Our Channel---

Sangeetha Sringeri: ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ (Bigg Boss Kannada 10) ಟಾಪ್ ತ್ರಿ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡವರು ನಟಿ ಸಂಗೀತಾ ಶೃಂಗೇರಿ ಅವರು. ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮತ್ತು ಸುದ್ದಿಯನ್ನು ಮಾಡಿದ ಸಂಗೀತಾ ಶೃಂಗೇರಿ (Sangeetha Sringeri) ಅವರು ಈ ಬಾರಿ ಬಿಗ್ ಬಾಸ್ ಗೆಲ್ತಾರೆ ಅನ್ನೋ ಮಟ್ಟಕ್ಕೆ ಸುದ್ದಿಗಳಾಗಿದ್ದು ಸಹಾ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.

ಬಿಗ್ ಬಾಸ್ ಮನೆಗೆ ಹೋದ ಮೇಲೆ ಸಂಗೀತಾ ಅವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಹಿಂಬಾಲಕರ ಸಂಖ್ಯೆ ಹೆಚ್ಚಾಗಿದೆ. ಅವರ ಜನಪ್ರಿಯತೆ ಕೂಡಾ ಹೆಚ್ಚಿದೆ ಅನ್ನೋದ್ರಲ್ಲಿ ಖಂಡಿತಾ ಎರಡು ಮಾತಿಲ್ಲ.

ಬಿಗ್ ಬಾಸ್ ಶೋ ಮುಗಿದ ನಂತರ ಸಂಗೀತಾ ವರ್ತರೂ ಸಂತೋಷ್ ಅವರ ಮನೆಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿಲ್ಲ.

ನಟಿ ತಮ್ಮ ಸಿನಿಮಾಗಳು ಹಾಗೂ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿಯಿರುವ ಕಾರಣದಿಂದ ಎಲ್ಲಿಗೂ ಬಂದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದೀಗ ನಟಿ ತಮ್ಮ ಹೊಸ ಸಿನಿಮಾ ಮಾರಿಗೋಲ್ಡ್ ನ ಬಿಡುಗಡೆ ವಿಚಾರದಲ್ಲಿ ಖುಷಿಯಿಂದ ಇದ್ದಾರೆ.

ಮಾರಿಗೋಲ್ಡ್ ಸಿನಿಮಾದ ಸೆಲೆಬ್ರಿಟಿ ಶೋ ನಡೆದಿದ್ದು, ಈ ವೇಳೆ ಸಂಗೀತಾ ಅವರ ಸಿನಿಮಾವನ್ನು ನೋಡಲು ಬಿಗ್ ಬಾಸ್ ಮನೆಯ ಒಂದಷ್ಟು ಜನ ಸ್ಪರ್ಧಿಗಳು ಆಗಮಿಸಿದ್ದು, ಈ ಫೋಟೋಗಳು ವೈರಲ್ ಆಗಿದೆ.

ಮಾರಿಗೋಲ್ಡ್ ಸೆಲೆಬ್ರಿಟಿ ಶೋ ಗೆ ಡ್ರೋಣ್ ಪ್ರತಾಪ್, ನೀತು ವನಜಾಕ್ಷಿ , ಇಶಾನಿ ಮತ್ತು ಸಿರಿ ಅವರು ಆಗಮಿಸಿದ್ದು, ಫೋಟೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಬೇರೆ ಬಿಗ್ ಬಾಸ್ ಸ್ಪರ್ಧಿಗಳಾರು ಕಾಣಿಸಿಕೊಂಡಿಲ್ಲ.

ಬಿಗ್ ಬಾಸ್ ನಂತರ ಸಂಗೀತಾ ಅವರ ಮೊದಲ ಸಿನಿಮಾ ಮಾರಿಗೋಲ್ಡ್ ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರನ್ನು ರಂಜಿಸುತ್ತಿದ್ದು, ಈ ಸಿನಿಮಾದಿಂದ ನಟಿಗೆ ಇನ್ನಷ್ಟು ಬೇಡಿಕೆ ಹೆಚ್ಚಾಗಲಿದೆಯಾ ಅನ್ನೋದನ್ನ ಕಾದು ನೋಡಬೇಕಾಗಿದೆ.

ಇತ್ತೀಚಿಗೆ ತನೀಷಾ ಕುಪ್ಪಂಡ ಅವರ ಆಭರಣ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಭಾಗವಹಿಸಿದ್ದು ಈ ವೇಳೆ ಸಂಗೀತಾ ಅವರ ಅನುಪಸ್ಥಿತಿ ಎಲ್ಲರ ಗಮನವನ್ನು ಸೆಳೆದಿತ್ತು ಮತ್ತು ಸಂಗೀತಾ ಏಕೆ ಬಂದಿಲ್ಲ ಎನ್ನುವ ಪ್ರಶ್ನೆ ಗಳು ಕೂಡಾ ಹರಿದಾಡಿತ್ತು.

ಬಿಗ್ ಬಾಸ್ ನಂತರ ಸಂಗೀತಾ ಅವರು ಬಿಗ್ ಬಾಸ್ ನ ಸ್ಪರ್ಧಿಗಳ ಜೊತೆಗೆ ಅಷ್ಟಾಗಿ ಕಾಣಿಸಿಕೊಂಡಿಲ್ಲ. ತನೀಷಾ ಕೂಡಾ ಸಂಗೀತಾ ಬ್ಯುಸಿಯಿರುವುದಾಗಿ ಸಮಯ ಸಿಕ್ರೆ ಬರುವುದಾಗಿ ಹೇಳಿದ್ರು ಅನ್ನೋ ಮಾತು ಹೇಳಿದ್ದರು.

Leave a Comment