Bhagya Lakshmi: ಮಹಾಸಂಚಿಕೆ ಅಂತ ಜಸ್ಟ್ ಕಾರ್ಡ್ ಹುಡುಕೋದೇ ಆಯ್ತು; ಭಾಗ್ಯಲಕ್ಷ್ಮೀ ಸೀರಿಯಲ್ ಬಗ್ಗೆ ಪ್ರೇಕ್ಷಕರ ಸಿಟ್ಟು

Written by Soma Shekar

Published on:

---Join Our Channel---

Bhagya Lakshmi Serial : ಕಿರುತೆರೆಯ ಸೀರಿಯಲ್ ಗಳ ಕಥೆಯಲ್ಲಿ ಏನಾದರೂ ಹೊಸ ತಿರುವು ಅಥವಾ ಮಹತ್ವದ ಬದಲಾವಣೆ ಆಗುವುದಿದ್ದರೆ ಆಗ ಮಹಾಸಂಚಿಕೆಗಳನ್ನು ಪ್ರಸಾರ ಮಾಡಲಾಗುತ್ತೆ. ಬಹುತೇಕ ಎಲ್ಲಾ ಖಾಸಗಿ ವಾಹಿನಿಗಳಲ್ಲಿ ಮಹಾ ಸಂಚಿಕೆಗಳು ಅನ್ನೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅದರಂತೆ ಜನಪ್ರಿಯ ಸೀರಿಯಲ್ ಭಾಗ್ಯಲಕ್ಷ್ಮೀ ಯಲ್ಲಿಯೂ (Bhagya Lakshmi Serial) ಮಹಾ ಸಂಚಿಕೆ ಪ್ರಸಾರ ಆಗ್ತಿದ್ದು, ಇದನ್ನು ನೋಡಿದ ಪ್ರೇಕ್ಷಕರು ಬೇಸರವನ್ನು, ಅಸಮಾಧಾನವನ್ನು ಹೊರ ಹಾಕಿದ್ದಾರೆ ಅಂದ್ರೆ ಸುಳ್ಳಲ್ಲ.

ಭಾಗ್ಯ ದೇವಸ್ಥಾನಕ್ಕೆ ಬಂದ ವೇಳೆಯಲ್ಲಿ ತಾಂಡವ್ (Tandav) ಮತ್ತು ಶ್ರೇಷ್ಠಾ (Shreshtha) ಮದುವೆಯ ಕಾರ್ಡ್ ಭಾಗ್ಯಾಳ ಬ್ಯಾಗ್ ಅನ್ನ ಸೇರಿದೆ. ಆ ಕಾರ್ಡ್ ಅನ್ನು ಯಾರಾದ್ರು ನೋಡೋ ಮೊದ್ಲು ತಗೋಬೇಕು ಅಂತ ತಾಂಡವ್ ಪ್ರಯತ್ನವನ್ನು ಪಡ್ತಾ ಇದ್ದಾನೆ. ಭಾಗ್ಯ ತನ್ನ ಬ್ಯಾಗ್ ನಲ್ಲಿ ಇರೋ ತನ್ನ ಕೆಲಸಕ್ಕೆ ಸಂಬಂಧಿಸಿದ ಲೆಟರ್ ಇರೋದ್ರಿಂದ ಅದನ್ನು ಜಾಗರೂಕವಾಗಿ ಇಡೋಕೆ ಗಮನವನ್ನು ನೀಡ್ತಾ ಇದ್ದಾಳೆ.‌ ತಾಂಡವ್ ಸುನಂದ ಅವರಿಂದ ಬ್ಯಾಗ್ ಗಾಗಿ ಟ್ರೈ ಮಾಡಿದ್ರು ಅದು ಕೈಗೂಡಿಲ್ಲ.

ಅದಕ್ಕೆ ತಾಂಡವ್ ತಾನೇ ಬ್ಯಾಗ್ ತರಬೇಕು ಅಂತ ಮುಂದಾಗಿದ್ದು,ಭಾಗ್ಯ ರೂಮ್ ನಲ್ಲಿ ಎಲ್ರೂ ಮಲಗಿರೋದನ್ನ ಖಚಿತಪಡಿಸಿಕೊಂಡ ತಾಂಡವ್ ಕೋಣೆಗೆ ಬಂದಿದ್ದಾನೆ. ಆದ್ರೆ ಕಾಲುಗಳನ್ನ ಗಮನಿಸಿದ ಗುಂಡಣ್ಣ ಕಳ್ಳ ಕಳ್ಳ ಅಂತ ಅರಚಿದ್ದು, ಇದ್ರಿಂದ ಭಯಗೊಂಡ ತಾಂಡವ್ ಹೊರಗೆ ಹೋಗೋಕೆ ಆಗ್ದೆ ವಾರ್ಡ್ ರೋಬ್ ಒಳಗೆ ಸೇರಿಕೊಂಡಿದ್ದಾನೆ. ಗುಂಡಣ್ಣನ ಅರಚಾಟಕ್ಕೆ ಅಲ್ಲಿಗೆ ಬರುವ ಎಲ್ಲರೂ ಏನಾಯ್ತು ಅಂತ ಕೇಳಿ ಏನಿಲ್ಲ ಅಂತ ಗುಂಡಣ್ಣನಿಗೆ ಯಾವಾಗ್ಲೂ ವೀಡಿಯೋ ಗೇಮ್ ಆಡಿದ್ರೆ ಹೀಗೆ ಆಗೋದು ಅಂತ ಹೇಳಿ ಹೋಗ್ತಾರೆ.

ಎಲ್ಲರೂ ಹೋದ ಮೇಲೆ ಭಾಗ್ಯಾಗೆ ಗಂಡ ವಾರ್ಡ್ ರೋಬ್ ನಲ್ಲಿರೋದು ಗೊತ್ತಾಗಿ, ಬಾಗಿಲು ತೆಗೀತಾಳೆ. ಆಗ ಕೆಮ್ತಾ ತಾಂಡವ್ ನೀರು ತರೋಕೆ ಹೇಳ್ತಾನೆ. ಭಾಗ್ಯ ನೀರು ತರೋಕೆ ಹೊರಗೆ ಹೋದ ಕೂಡಲೇ ತಾಂಡವ್ ಭಾಗ್ಯ ಬ್ಯಾಗ್ ನಿಂದ ಕಾರ್ಡ್ ತಗೊಳ್ತಾನೆ. ಆದ್ರೆ ಆಗಲೇ ಅಲ್ಲಿಗೆ ಬಂದ ಭಾಗ್ಯ ನನ್ನ ಬ್ಯಾಗ್ ನಲ್ಲಿ ಏನು ನೋಡ್ತಾ ಇದ್ದೀರಾ ಅಂದಾಗ ಕಾರ್ಡ್ ನ ಸೀರೆಗಳ ಮಧ್ಯೆ ಇಟ್ಟು ಬಿಡ್ತಾನೆ. ಭಾಗ್ಯಾಗೆ ತಾಂಡವ್ ನಡವಳಿಕೆ ಮೇಲೆ ಅನುಮಾನ ಮೂಡಿದೆ.

ತಾಂಡವ್ ಮತ್ತೆ ಇವತ್ತಿನ ಎಪಿಸೋಡ್ ನಲ್ಲೂ ಕಾರ್ಡ್ ಹುಡುಕೋ ಪ್ರಯತ್ನಕ್ಕೆ ಮುಂದಾಗಿದ್ದಾನೆ. ಮಹಾ ಸಂಚಿಕೆ ನೋಡಿದ ಮೇಲೆ ಪ್ರೇಕ್ಷಕರು ಇದೇನಿದು ಮಹಾಸಂಚಿಕೆ ಏನೋ ಟ್ವಿಸ್ಟ್ ಇರುತ್ತೆ ಅನ್ಕೊಂಡ್ರೆ ಬರೀ ಕಾರ್ಡ್ ಹುಡುಕೋದೇ ಆಯ್ತಲ್ವಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮತ್ತೊಬ್ಬರು ತಾಂಡವ್ ತನ್ನ ಆಟ ಆಡ್ತಾ ಇದ್ರೆ ಮನೆ ಮಂದಿ ದಡ್ಡರ ತರ ಆಗಿದ್ದಾರೆ ಅಂತಾನೂ ಹೇಳಿದ್ದಾರೆ. ಏನ್ ಕರ್ಮಾ ಗುರು ಕೇಳಿರೋ ಡೈಲಾಗ್ ಗಳು ರಿಪೀಟ್ ರಿಪೀಟ್ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

Leave a Comment