Bhagya Lakshmi: ಭಾಗ್ಯಾಳ ಭಾಗ್ಯ ಬದಲಾಗೋ ಸಮಯ ಬಂತು, ಬಹಳ ದಿನಗಳ ನಂತರ ಖುಷಿಯಾದ ಪ್ರೇಕ್ಷಕರು

Written by Soma Shekar

Published on:

---Join Our Channel---

Bhagya Lakshmi: ಭಾಗ್ಯಲಕ್ಷ್ಮೀ (Bhagya Lakshmi) ಸೀರಿಯಲ್ ನಲ್ಲಿ ನಾಯಕಿ ಭಾಗ್ಯಾಳ ಪೆದ್ದುತನ, ಕಣ್ಣೀರು, ಯಾವಾಗಲೂ ಸೋಲು, ಎಸ್ ಎಸ್ ಎಲ್ ಸಿ ಓದಿದ್ರು ಕಿಂಚಿತ್ತೂ ಇಂಗ್ಲಿಷ್ ಬರಲ್ಲ ಅನ್ನೋ ಧೋರಣೆ ಎಲ್ಲಾ ನೋಡಿ ರೋಸಿ ಹೋದ ಪ್ರೇಕ್ಷಕರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಸಮಾಧಾನವನ್ನು ಕಾಮೆಂಟ್ ಗಳ ಮೂಲಕ ಹೊರ ಹಾಕೋದು ತೀರಾ ಸಾಮಾನ್ಯವಾಗಿ ಬಿಟ್ಟಿದೆ. ಈಗ ಇವೆಲ್ಲವುಗಳ ನಡುವೆ ಭಾಗ್ಯಾಳ ಭಾಗ್ಯ ಬದಲಾಗೋ ಸಮಯ ಬಂದಂತೆ ಕಾಣ್ತಿದೆ.

ಭಗಾಯಾ ಹೆಸರಲ್ಲಿ ತನಗೆ ಗೊತ್ತಿಲ್ಲದೇ ಹೊಟೇಲ್ ನಲ್ಲಿ ಕೆಲಸ ಪಡೆದಿದ್ದ ಭಾಗ್ಯ ಭಗಾಯಾ ಅಲ್ಲ ಅಂತ ಗೊತ್ತಾದ ಮೇಲೆ ಅವಳನ್ನ ಸೂಪರ್ ವೈಸರ್ ಬೈದು ಕೆಲಸ ಬಿಟ್ಟು ಹೋಗಬೇಕಂತ ಹೇಳಿದ್ದಾನೆ. ಇದೇ ವೇಳೆ ಫುಡ್ ರಿವ್ಯೂ ಮಾಡೋಕೆ ಬಂದ ಪತ್ರಕರ್ತನಿಗೆ ಆ ಹೊಟೇಲ್ ನ ಒತ್ತು ಶ್ಯಾವಿಗೆ, ಮಾವಿನ ಹಣ್ಣು ರಸಾಯನ ಬೇರೆ ಸಣ್ಣ ಹೊಟೇಲ್ ನಿಂದ ಬರದ ಕಾರಣ ಎಲ್ಲಾ ಚಿಂತೆಗೆ ಒಳಗಾಗಿದ್ದಾರೆ.

ಈ ವೇಳೆ ಭಾಗ್ಯ (Bhagya) ಅದನ್ನು ಸಿದ್ಧಪಡಿಸಿ ಇಟ್ಟರೂ ಕೂಡಾ ಮ್ಯಾನೇಜರ್ ಅದನ್ನು ಪತ್ರಕರ್ತ ರುಚಿ ನೋಡಬಾರದು ಅಂತ ಹೇಳಿದ್ದಾನೆ. ಮತ್ತೊಂದು ಕಡೆ ಮ್ಯಾನೇಜರ್ ಹೇಳಿದ ಹಾಗೆ ಸೂಪರ್ ವೈಸರ್ ಭಾಗ್ಯಾನ ಕೆಲಸದಿಂದ ಮನೆಗೆ ಕಳಿಸಿದ್ದಾನೆ‌. ಆದ್ರೆ ಇಲ್ಲಿ ಪತ್ರಕರ್ತ ಭಾಗ್ಯ ಮಾಡಿರೋ ಒತ್ತು ಶ್ಯಾವಿಗೆ, ರಸಾಯನ ತಿಂದು ಖುಷಿಯಾಗಿ ಹೊಗಳಿದ್ದು, ಶೆಫ್ ನ ನೋಡಬೇಕು ಅಂದಿದ್ದಾರೆ.
.
ಪ್ರೊಮೊ ನೋಡಿದ ಮೇಲೆ ಬಹಳ ದಿನಗಳ ನಂತರ ಪ್ರೇಕ್ಷಕರು ಖುಷಿಯಾಗಿದ್ದಾರೆ. ಭಾಗ್ಯಾಗೆ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಶೆಫ್ ಕೆಲಸ ಪಕ್ಕಾ ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನಾದ್ರು ಭಾಗ್ಯ ಜೀವನ ಬದಲಾಗುತ್ತಾ? ತಾಂಡವ್ ವಿರುದ್ಧ ಭಾಗ್ಯ ಸ್ವಾವಲಂಬಿ ಆಗೋಕೆ ಸಾಧ್ಯವಾಗುತ್ತಾ. ಅನ್ನೋದನ್ನ ನೋಡೋಕೆ ಪ್ರೇಕ್ಷಕರು ಕಾಯ್ತಾ ಇದ್ದಾರೆ.

Leave a Comment