Bhagya Lakshmi Serial: ಕನ್ನಡ ಕಿರುತೆರೆಯ ಭಾಗ್ಯಲಕ್ಷ್ಮಿ ಸೀರಿಯಲ್ (Bhagya Lakshmi Serial) ಜನಪ್ರಿಯತೆಯನ್ನು ಪಡೆದುಕೊಂಡು ಮುಂದೆ ಸಾಗುತ್ತಿದೆ ಎನ್ನುವುದು ಸತ್ಯವೇ ಆದರೂ ಮತ್ತೊಂದು ಕಡೆ ಈ ಸೀರಿಯಲ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ ಮತ್ತು ನೆಟ್ಟಿಗರು ವಾಹಿನಿ ಶೇರ್ ಮಾಡೋ ಪ್ರೊಮೊಗಳಿಗೆ ಕಾಮೆಂಟ್ ಗಳನ್ನು ಮಾಡ್ತಡ ತಮ್ಮ ಅಸಮಾಧಾನ, ಆಕ್ರೋಶ ಮತ್ತು ಅಸಹನೆ ಹೊರ ಹಾಕ್ತಾ ಇರೋದು ಮಾತ್ರವೇ ಅಲ್ಲದೇ ಸೀರಿಯಲ್ ನ ನಿರ್ದೇಶಕನಿಗೆ ಹಿಡಿ ಶಾಪ ಹಾಕ್ತಾ ಇದ್ದಾರೆ.
ಗಂಡನ ಎದುರು ಸ್ವಾಭಿಮಾನಿಯಾಗಿ ನಿಲ್ಲಬೇಕಂತ ಭಾಗ್ಯ ಎಸ್ ಎಸ್ ಎಲ್ ಸಿ ಓದಿ ಪಾಸಾಗಿದ್ದಾಗಿದೆ. ಅದರ ಬೆನ್ನಲ್ಲೇ ಮನೆಯ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಭಾಗ್ಯ ಹಾಗೂ ಅವರ ಅತ್ತೆ ಕುಸುಮಾ ಇಬ್ಬರೂ ಒಬ್ಬರಿಗೆ ಗೊತ್ತಿಲ್ಲದ ಹಾಗೆ ಮತ್ತೊಬ್ಬರು ಕೆಲಸಕ್ಕೆ ಸೇರಿದ್ದಾರೆ. ಇಲ್ಲಿಯವರೆಗೆ ಓಕೆ. ಆದರೆ ಭಾಗ್ಯಾಗೆ ಕೆಲಸ ಸಿಕ್ಕಿರೋದು ಫೈವ್ ಸ್ಟಾರ್ ಹೊಟೇಲ್ ನಲ್ಲಿ. ಎಡವಟ್ಟು ಆಗಿರೋದೇ ಅಲ್ಲಿ.

ಬೇರೆ ಯಾರದೋ ಹೆಸರಿನಲ್ಲಿ ಭಾಗ್ಯ ಸಂದರ್ಶನ ನಡೆಯಿತು. ಇಂಗ್ಲೀಷ್ ಬಾರದ ಭಾಗ್ಯ ಎಸ್, ನೋ ಹೇಳಿ ಇಂಟರ್ವ್ಯೂ ಪಾಸ್ ಆಗಿ ಕೆಲಸ ಪಡ್ಕೊಂಡ್ಲು.. ಈಗ ಕೆಲಸಕ್ಕೆ ಬಂದಾಗ ಇಂಗ್ಲೀಷ್ ಬರೆದ ಒದ್ದಾಡ್ತಾ ಇದ್ದಾಳೆ ಭಾಗ್ಯ. ಇದನ್ನೆಲ್ಲಾ ನೋಡಿ ನೆಟ್ಟಿಗರು ಸಿಟ್ಟಾಗಿದ್ದಾರೆ. ಕಾಮೆಂಟ್ ಮಾಡಿದವರೊಬ್ಬರು, ಈಗಿನ ಕಾಲದಲ್ಲಿ 10 ನೇ ಕ್ಲಾಸ್ ಓದುವವರಿಗೆ ಅದರಲ್ಲೂ ಮಗಳು ಇಂಗ್ಲೀಷ್ ಮೀಡಿಯಂ, ಅದೇ ಸ್ಕೂಲ್ ಭಾಗ್ಯ ಓದಿದ್ದು, ಕನ್ನಡನೂ ಅರ್ಥ ಆಗಲ್ಲ, ಇಂಗ್ಲೀಷ್ ಸಹಾ ಅರ್ಥ ಆಗಲ್ಲ ಅಂದ್ರೆ ಹೇಗೆ ಅಸಹ್ಯ ಎಂದಿದ್ದಾರೆ.
ಮತ್ತೊಬ್ಬರು ವ್ಯಂಗ್ಯ ಮಾಡುತ್ತಾ, ಸರ್ವರ್ ಭಾಗ್ಯ , ಎಂತಹ ಉತ್ತಮ ಅವಕಾಶ ಈ ಸಿರಿಯಲ್ ನವರು ಕತೆ ಮುಂದೋಡಿಸಲು ಎಂತೆಂಥಾ ಐಡಿಯಾ ಮಾಡ್ತಾರೆ ಮಾರಾಯರೇ ಎಂದಿದ್ದಾರೆ. ಇನ್ನೊಂದು ಕಾಮೆಂಟ್ ನಲ್ಲಿ ಈ ಸೀರಿಯಲ್ ಡೈರೆಕ್ಟರ್ ನ ಹಾಲಿವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್, ಪಾಲಿವುಡ್, ಗಾಲಿವುಡ್, ಓಲಿವುಡ್………… ಡೈರೆಕ್ಟರ್ಸ್, ಪ್ರೊಡ್ಯೂಸರ್ಸ್ ಎಲ್ಲರೂ ಇವರನ್ನು ಹಾಕಿಕೊಂಡು ಸಿನಿಮಾ ತೆಗೆಯಲು ಹುಡುಕುತ್ತಿದ್ದಾರೆ.

ಈ ಸೀರಿಯಲ್ ಡೈರೆಕ್ಟರ್ ಮಹಾಶಯ ಮಾತ್ರ ಯಾರ ಕೈಗೂ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಇನ್ನೂ ಹೆಚ್ಚಿನ ಡಿಮ್ಯಾಂಡ್ ಬರಲಿ ಎಂದು ಎಂದು ಕಾಲೆಳೆದಿದ್ದಾರೆ. ಅದೇ ವೇಳೆ ಮತ್ತೊಬ್ಬರು ಈ ಭಾಗ್ಯ ನ ಸ್ಥಿತಿ ನೋಡಿದರೆ ಯಾಕಪ್ಪಾ ಇಂಥ ಸೀರಿಯಲ್ ಮಾಡ್ತಾರೆ ಅಂಥ ಬರುತ್ತೆ..ಎಲ್ಲಿ ಹೋದರೂ ಅಪಮಾನ ಅವಹೇಳನ ..ನೋಡ್ಬೇಡಿ ಇಂಥ ಸೀರಿಯಲ್ ನೋಡಲು ಆಗೋಲ್ಲ ಎಂದಿದ್ದಾರೆ.
ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಭಾಗ್ಯ ಪಾಠಗಳನ್ನ ಹೇಗೆ ಅರ್ಥ ಮಾಡಿಕೊಂಡಳು, ಇಷ್ಟು ಬೇಸಿಕ್ ಇಂಗ್ಲೀಷ್ ಬರದೇ ಹೇಗೆ ಪಾಸಾದ್ಲು ಅಂತ ಕೂಡಾ ಪ್ರಶ್ನೆ ಮಾಡ್ತಾ, ಇಷ್ಟೊಂದು ಅಸಹಜ ಎಲ್ಲೂ ನೋಡಿಲ್ಲ ಅಂತ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಸೀರಿಯಲ್ ಬಗ್ಗೆ ಇಂತಹ ಅಸಮಾಧಾನದ ಕಾಮೆಂಟ್ ಗಳು ಸಾಕಷ್ಟು ಹರಿದು ಬಂದಿದೆ.