Bhagya Lakshmi: ತನ್ನದಲ್ಲದ ತಪ್ಪಿಗೆ ಹೇಗೆ ಸಮರ್ಥನೆ ಕೊಡ್ತಾಳೆ ಭಾಗ್ಯ? ಸಿಟ್ಟಿನಲ್ಲಿ ಅರಚಾಡಿದ ಹಿತ

Written by Soma Shekar

Published on:

---Join Our Channel---

Bhagya Lakshmi Serial : ಭಾಗ್ಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿ ಆಗಿದೆ. ಮೊದಲ ದಿನದಂದೇ ಸಾಕಷ್ಟು ಸವಾಲುಗಳು ಅವಳ ಎದುರು ಬಂದಿವೆ. ಭಾಗ್ಯಾಳಿಂದ ಒಂದಷ್ಟು ತಪ್ಪುಗಳಾಗಿವೆ ಆದರೆ ಎಲ್ಲವನ್ನು ಹೇಗೋ ನಿಭಾಯಿಸಿಕೊಂಡ ಭಾಗ್ಯ (Bhagya Lakshmi Serial) ಮೊದಲ ದಿನದ ಕೆಲಸವನ್ನು ಮುಗಿಸಿ, ಯೂನಿಫಾರಂ ನಿಂದ ಸೀರೆಗೆ ಬಂದು, ಮನೆಗೆ ಹೊರಡಲು ಸಿದ್ಧವಾಗಿರುವಾಗಲೇ ಮತ್ತೊಂದು ಹೊಸ ಸಮಸ್ಯೆ ಎದುರಾಗಿದೆ. ಭಾಗ್ಯಾಗೆ ಸಹಾಯವನ್ನೇ ಮಾಡ್ತಿದ್ದ ಹಿತಾಗೆ ಭಾಗ್ಯ ಮೇಲೆ ಅನುಮಾನ ಬಂದಿದೆ, ಅವಳು ತನ್ನ ಅನುಮಾನಕ್ಕೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಮಾಡಿದ್ದಾಳೆ.

ಹೋಟೆಲ್ ಸೂಪರ್ ವೈಸರ್ (Supervisor) ಹಿತ ಬಳಿ ಬಂದು ಸ್ವಿಮ್ಮಿಂಗ್ ಪೂಲ್ ಹತ್ರ ಇದ್ದ ಜೋಡಿಯ ಬಳಿ ಆರ್ಡರ್ ತಗೊಂಡಿದ್ದು ನೀವೇನಾ ಅಂತ ಕೇಳಿದ್ದಾರೆ.. ತನ್ನ ಬದಲಿಗೆ ಭಾಗ್ಯ ಹೋಗಿದ್ದಳು ಅಂತ ಗೊತ್ತಾದ್ರೆ ಸೂಪರ್ ವೈಸರ್ ಕೋಪ ಮಾಡಿಕೊಳ್ತಾರೆ ಅಂತ ಹಿತಾ ಹೌದು ನಾನೇ ಎಂದು ಹೇಳುತ್ತಾಳೆ. ಆಗ ಸೂಪರ್ ವೈಸರ್, ಕೆಲಸ ಗೊತ್ತಿಲ್ದೆ ಇದ್ರೆ ಯಾಕ್ ಬರ್ತೀರಾ? ಕಸ್ಟಮರ್ ನ ನೀವು ಸರಿಯಾಗಿ ನೋಡಿಕೊಂಡಿಲ್ಲ ಅಂತ ದೂರು ಬಂದಿದೆ, ಅದೂ ಅಲ್ಲದೇ ಒಂದು ಡಿಶ್ ಸರ್ವ್ ಮಾಡಿಲ್ಲ ಅಂತ ಕೋಪದಿಂದ ಮಾತಾಡ್ತಾನೆ.

ಹೀಗೆ ಭಾಗ್ಯಾಗೆ ಹೆಲ್ಪ್ ಮಾಡೋಕೆ ಹೋಗಿ ಹಿತಾ ಬೈಸಿಕೊಂಡಿದ್ದಾಳೆ, ಅಲ್ಲದೇ ಅವಳಿಗೆ ಭಗಾಯ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ, ಆದರೆ ಇಲ್ಲಿ ನೋಡಿದ್ರೆ ಏನು ಗೊತ್ತಿಲ್ದೆ ಇರೋರ ತರ ಆಡ್ತಿದ್ದಾರೆ ಅನ್ನೋ ಅನುಮಾನ ಬಂದು, ರೆಕಾರ್ಡ್ ರೂಂಗೆ ಹೋಗಿ ಭಾಗಾಯ ಸಿವಿ ಚೆಕ್ ಮಾಡಿದ್ದಾಳೆ. ಆಗ ಹಿತಾಗೆ ಭಾಗಾಯಾ ಹೆಸರಿನಲ್ಲಿ ಭಾಗ್ಯ ಕೆಲಸಕ್ಕೆ ಸೇರಿದ್ದಾಳೆ ಅನ್ನೋ ಅನುಮಾನ ಉಂಟಾಗಿ, ಮನೆಗೆ ಹೋಗ್ತಿದ್ದ ಭಾಗ್ಯಾನ ರೆಕಾರ್ಡ್ ರೂಮಿಗೆ ಬರುವಂತೆ ಅಲ್ಲಿಗೆ ಕರೆಸಿಕೊಂಡಿದ್ದಾಳೆ.‌

ರೆಕಾರ್ಡ್ ರೂಮ್ ಗೆ ಬಂದಂತಹ ಭಾಗ್ಯ ಮೇಲೆ ರೇಗಾಡಿದ್ದಾಳೆ ಹಿತಾ, ನಿಮ್ಮನ್ನ ಬಹಳ ಮುಗ್ಧೆ ಅನ್ಕೊಂಡಿದ್ದೆ. ಆದರೆ ನೀವು ಮಾಡ್ತಿರೋ ನಾಟಕ ಅಂತ ಈಗ ಗೊತ್ತಾಗಿದೆ. ಬೇರೆಯವರ ಹೆಸರನ್ನು ಹೇಳ್ಕೊಂಡು ಈ ಹೋಟೆಲ್ನಲ್ಲಿ ಕೆಲಸವನ್ನು ಮಾಡುತ್ತಿದ್ದೀರಾ, ಮತ್ತೊಬ್ಬರ ಕೆಲಸವನ್ನು ಕಿತ್ತುಕೊಳ್ಳೋದಕ್ಕೆ ನಿಮಗೆ ನಾಚಿಕೆ ಆಗೋದಿಲ್ವಾ? ಅಂತ ಪ್ರಶ್ನೆ ಮಾಡಿದ್ದಾಳೆ. ಆದರೆ ಭಾಗ್ಯಾಗೆ ಮಾತ್ರ ಹಿತಾ ತನ್ನ ಮೇಲೆ ಅಷ್ಟೊಂದು ಸಿಟ್ಟು ಮಾಡಿಕೊಂಡಿರೋದಕ್ಕೆ ಕಾರಣ ಏನು ಅಂತ ಸ್ಪಷ್ಟವಾಗಿ ಅರ್ಥವಾಗಿಲ್ಲ.

ಹಿತಾಳ ಸಿಟ್ಟಿಗೆ ಭಾಗ್ಯ ಯಾವ ರೀತಿ ಉತ್ತರವನ್ನ ಕೊಡ್ತಾಳೆ, ಏನು ನಡೆದಿದೆ ಅನ್ನೋದರ ಬಗ್ಗೆ ಯಾವ ರೀತಿಯಲ್ಲಿ ಸಮರ್ಥನೆಯನ್ನು ಕೊಟ್ಟು ಹಿತಾಳನ್ನ ಸಮಾಧಾನಪಡಿಸ್ತಾಳೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಅಲ್ಲದೇ ಒಂದು ವೇಳೆ ಹಿತಾ ಭಾಗ್ಯ ಬಗ್ಗೆ ಸೂಪರ್ ವೈಸರ್ ಗೆ ಎಲ್ಲಾ ನಿಜವನ್ನು ಹೇಳಿ, ಭಾಗ್ಯ ಕೆಲಸಕ್ಕೆ ಸಮಸ್ಯೆ ಉಂಟಾಗುತ್ತಾ ಅನ್ನೋ ಅನುಮಾನಗಳು ಕೂಡಾ ಇದ್ದು ಹೀಗೆಲ್ಲ ಅನುಮಾನಗಳಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರ ಸಿಗಬೇಕಾಗಿದೆ.

Leave a Comment