Namratha Gowda: ಬರ್ತಡೇ ದಿನವೇ ದುಬಾರಿ ಕಾರಿನ ಒಡತಿಯಾದ ಬಿಗ್ ಬಾಸ್ ಬೆಡಗಿ; ನಮ್ರತಾಗೆ ಶುಭ ಹಾರೈಸಿದ ಫ್ಯಾನ್ಸ್

Written by Soma Shekar

Published on:

---Join Our Channel---

Namratha Gowda: ಕನ್ನಡ ಕಿರುತೆರೆಯಲ್ಲಿ ನಾಗಿಣಿ 2 ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಅವರು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ. ಕೆಲವೇ ತಿಂಗಳ ಹಿಂದೆ ಮುಗಿದಂತಹ ಕನ್ನಡ ಬಿಗ್ ಬಾಸ್ ನ ಸೀಸನ್ ಹತ್ತರಲ್ಲಿ (Bigg Boss Kannada 10) ಸ್ಪರ್ಧಿಯಾಗಿದ್ದ ನಮ್ರತಾ ಅವರು ಗ್ರ್ಯಾಂಡ್ ಫಿನಾಲೆ ವಾರದ ವರೆಗೂ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ಮೇಲೂ ನಟಿ ಸಾಕಷ್ಟು ಬ್ಯುಸಿಯಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರೋ ನಮ್ರತಾ ಗೌಡ ಅವರಿಗೆ ಒಂದು ಮಿಲಿಯನ್ ಗೂ ಅಧಿಕ ಫಾಲೋಯರ್ಸ್ ಇದ್ದಾರೆ ಅನ್ನೋದು ಸಹಾ ನಿಜ. ತಮ್ಮ ಬೋಲ್ಡ್ ಮತ್ತು ಹಾಟ್ ಫೋಟೋಗಳು, ಸೂಪರ್ ಡ್ಯಾನ್ಸ್ ಗಳ ಮೂಲಕವೇ ಕಿಚ್ಚು ಹೊತ್ತಿಸುತ್ತಾರೆ ನಮ್ರತಾ ಗೌಡ. ನಟಿ ಈಗ ಅಭಿಮಾನಿಗಳ ಜೊತೆಗೆ ಖುಷಿಯ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ.

ಹೌದು, ಬಿಗ್ ಬಾಸ್ ಬೆಡಗಿ, ನಾಗಿಣಿ ಖ್ಯಾತಿಯ ನಮ್ರತಾ ಗೌಡ ಅವರು ತಮ್ಮ ಜನ್ಮದಿನ ಸೆಲೆಬ್ರೇಷನ್ ನಡುವೆ ಮತ್ತೊಂದು ಸೆಲೆಬ್ರೇಷನ್ ನ ಖುಷಿಯಲ್ಲಿದ್ದಾರೆ. ನಮ್ರತಾ ಗೌಡ ಅವರು ದುಬಾರಿ ಕಾರೊಂದನ್ನು ಖರೀದಿ ಮಾಡಿದ್ದು, ಅದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾ ತಮ್ಮ ಖುಷಿಯನ್ನು ಎಲ್ಲರ ಜೊತೆಗೆ ಸಂಭ್ರಮಿಸಿದ್ದಾರೆ.

ನಟಿ ಕಾರು MG ಮೋಟಾರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದು, ಇದರ ಬೆಲೆ ಆರರಿಂದ ಒಂಬತ್ತು ಲಕ್ಷ ರೂ. ಇರಬಹುದು ಎನ್ನಲಾಗಿದೆ. ನಟಿ ತಮ್ಮ ತಂದೆ ತಾಯಿ ಜೊತೆಗೆ ಖುಷಿಯಿಂದ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು, ಈ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಬಹಳ ಖುಷಿಯಾಗಿ, ಕಾಮೆಂಟ್ ಮಾಡಿ ಅಭಿನಂದಿಸಿದ್ದಾರೆ.‌

ನಮ್ರತಾ ಅವರು ಸದ್ಯ ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಡ್ಯಾನ್ಸ್ ವೀಡಿಯೋಗಳ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಅನ್ನು ಸೃಷ್ಟಿಸಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ನಂತರ ನಟಿಯ ಫಾಲೋಯಿಂಗ್ ಸಹಾ ಬಹಳ ಹೆಚ್ಚಾಗಿದೆ.

Leave a Comment