Actor Dhanush: 40 ರ ಹರೆಯದಲ್ಲಿ ಎರಡನೇ ಮದುವೆ, ನಟ ಧನುಷ್ ಕೈ ಹಿಡಿಯಲಿರುವ ಅದೃಷ್ಟವಂತೆ ಯಾರು?

Written by Soma Shekar

Published on:

---Join Our Channel---

Actor Dhanush: ರಜನೀಕಾಂತ್ ಅಳಿಯ ತಮಿಳು ನಟ ಧನುಷ್ (Actor Dhanush) ಮತ್ತು ಮಗಳು ಐಶ್ವರ್ಯ (Aishwarya) ಅವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದಾರೆ. ಕಳೆದ 2022 ರಲ್ಲಿ ಇವರ ವಿಚ್ಚೇದನದ ಸುದ್ದಿಯಾದಾಗ ಇದು ಕೇವಲ ಸುದ್ದಿ ಎಂದೇ ಕೆಲವರು ಅಂದುಕೊಂಡಿದ್ದರು. ಆದರೆ ಇತ್ತೀಚಿಗೆ ವಿಚ್ಚೇದನ ಪಡೆಯಲು ಕೋರ್ಟ್ ಮೆಟ್ಟಿಲೇರಿರುವುದು ಖಚಿತ ಎನ್ನುವ ಸುದ್ದಿ ಹೊರಗೆ ಬಂದ ಮೇಲೆ ಅಭಿಮಾನಿಗಳಿಗೆ ಇದು ಬೇಸರವನ್ನು ಉಂಟು ಮಾಡಿದೆ.

2004 ರಲ್ಲಿ ತನ್ನ 21 ನೇ ವಯಸ್ಸಿನಲ್ಲೇ ಧನುಷ್ ತನಗಿಂದ ಒಂದು ವರ್ಷ ಹಿರಿಯರಾದ ಐಶ್ವರ್ಯ ಜೊತೆಗೆ ಸಪ್ತಪದಿಯನ್ನು ತುಳಿದಿದ್ದರು. ಇವರು ಇಬ್ಬರು ಮಕ್ಕಳ ತಂದೆ ತಾಯಿ ಸಹಾ ಹೌದು. ಆದರೆ ಹದಿನೆಂಟ ವರ್ಷಗಳ ನಂತರ ಅಂದರೆ 2022 ರಲ್ಲಿ ಇವರು ತಮ್ಮ ದಾಂಪತ್ಯ ಜೀವನಕ್ಕೆ ಈ ಜೋಡಿ ವಿಚ್ಚೇದನದ ಮೂಲಕ ವಿದಾಯ ವನ್ನು ಹೇಳೊದಕ್ಕೆ ಸಜ್ಜಾದರು.

ಅಧಿಕೃತವಾಗಿ ವಿಚ್ಚೇದನಕ್ಕೆ (Dhanush Aishwarya Divorce) ಈ ವರ್ಷ ಅವರು ಅರ್ಜಿ ಸಲ್ಲಿಸಿದ್ದರೂ ಪತಿ ಪತ್ನಿ ಕಳೆದ ಎರಡು ವರ್ಷಗಳಿಂದಲೂ ಬೇರೆ ಬೇರೆ ವಾಸ ಮಾಡುತ್ತಿದ್ದಾರೆ. ಅಲ್ಲದೇ ಇಬ್ಬರೂ ಸಹಾ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಧನುಷ್ ಅವರ ಕುಟುಂಬ ನಟನ ಎರಡನೇ ಮದುವೆಯ ಆಲೋಚನೆ ಮಾಡಿದ್ದಾರೆ ಎನ್ನಲಾಗಿದೆ.

ಖ್ಯಾತ ಪತ್ರಕರ್ತರೊಬ್ಬರು ಸಂದರ್ಶನವೊಂದರಲ್ಲಿ ಈ ವಿಚಾರವನ್ನ ಮಾತನಾಡಿದ್ದು, ನಟನ ಎರಡನೇ ಮದುವೆಯ ವಿಚಾರವಾಗಿ ಅವರ ಕುಟುಂಬದವರು ನಟನ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈಗ ನೋಡಿರುವ ಹುಡುಗಿ ಸಿನಿಮಾ ರಂಗದವರಲ್ಲ ಎನ್ನಲಾಗಿದ್ದು, ಈ ವಿಚಾರವಾಗಿ ಧನುಷ್ ಅವರ ತಂದೆ ಇನ್ನೂ ಅಧಿಕೃತವಾಗಿ ಯಾವುದೇ ವಿಚಾರ ತಿಳಿಸಿಲ್ಲ.

Leave a Comment