Astrology : ಜ್ಯೋತಿಷ್ಯದಲ್ಲಿ (Astrology) ಗುರು ಅಥವಾ ಬೃಹಸ್ಪತಿಗೆ ವಿಶೇಷ ಸ್ಥಾನವಿದೆ. ದೇವಗುರು ಎಂದು ಕರೆಯಲ್ಪಡುವ ಬೃಹಸ್ಪತಿ ಈ ವರ್ಷ ಪೂರ್ತಿ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಗುರು ಗ್ರಹವು ನಕ್ಷತ್ರವನ್ನು ಬದಲಾಯಿಸುವ ಮೂಲಕ ಪ್ರಯಾಣಿಸುತ್ತಿದೆ. ಆಗಸ್ಟ್ 20 ರಂದು, ಗುರು ರೋಹಿಣಿ ನಕ್ಷತ್ರದಿಂದ ಮೃಗಶಿರ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ.
ಮೃಗಶಿರ ನಕ್ಷತ್ರದಲ್ಲಿ ಗುರು : ನವೆಂಬರ್ 28 2024 ರವರೆಗೆ ಗುರು ಮೃಗಶಿರಾ ನಕ್ಷತ್ರದಲ್ಲಿ ಇರುತ್ತಾನೆ. ಇದು ದ್ವಾದಶಗಳಿಗೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡಲಿದೆ. ಗುರುವಿನ ಈ ಸಂಚಾರವು ಯಾವ ರಾಶಿಗೆ ಅದೃಷ್ಟವನ್ನು ತರಲಿದೆ ಹಾಗೂ ಯಾರಿಗೆ ಗುರುವಿನ ಕಟಾಕ್ಷವು ಸಿರಿಯನ್ನು ತರಲಿದೆ ಎಂಬುದನ್ನು ತಿಳಿಯೋಣ.
ಮೇಷ ರಾಶಿ : ಈ ರಾಶಿಯವರಿಗೆ ಗುರುವಿನ ಸಂಚಾರ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಮೇಷ ರಾಶಿಯವರಿಗೆ ಆರ್ಥಿಕ ಲಾಭವನ್ನು ಉಂಟಾಗಲಿದೆ. ಹೊಸ ಆದಾಯದ ಮಾರ್ಗಗಳು ತೆರೆದುಕೊಳ್ಳುತ್ತವೆ. ಸಮಾಜದಲ್ಲಿ ಗೌರವಾದರ ಸಿಗುತ್ತದೆ. ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆ ಇದೆ. ಮೇಷ ರಾಶಿಯ ಜಾತಕದವರಿಗೆ ಈ ಸಮಯ ಅದೃಷ್ಟದ ಸಮಯ ಎನ್ನಬಹುದು.
ವೃಷಭ ರಾಶಿ : ಈ ರಾಶಿಯವರಿಗೆ ಗುರುವಿನ ಸಂಚಾರ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ಅವರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ದೊರೆಯಲಿದೆ. ಬಹಳ ದಿನಗಳಿಂದ ಬಾರದೇ ಇದ್ದ ಹಣ ಮರಳಿ ಬರುತ್ತದೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ, ವ್ಯಾಪಾರಿಗಳಿಗೆ ಲಾಭ ಇದ್ದು, ಆರ್ಥಿಕವಾಗಿ ಈ ಸಮಯ ಪ್ರಬಲವಾಗಿದೆ.
ಕನ್ಯಾರಾಶಿ : ಗುರುವಿನ ಸಂಚಾರವು ಕನ್ಯಾ ರಾಶಿಯವರಿಗೆ ವಿಶೇಷ ಲಾಭವನ್ನು ತರಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿಯನ್ನು ಕಾಣುವರು. ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಯು ಸಿಗಲಿದೆ. ಅನಿರೀಕ್ಷಿತ ಆರ್ಥಿಕ ಲಾಭ, ಸಮಾಜದಲ್ಲಿ ಸ್ಥಾನ ಮಾನ ವೃದ್ಧಿ ಹಾಗೂ ಪೂರ್ವಜರಿಂದ ಆಸ್ತಿಗಳ ಮೂಲಕ ಆರ್ಥಿಕ ಲಾಭದ ಸಾಧ್ಯತೆಗಳೂ ಇದೆ.
ಧನು ರಾಶಿ : ಈ ರಾಶಿಯವರಿಗೆ ಗುರುವಿನ ಸಂಚಾರವು ಅದೃಷ್ಟವನ್ನು ತರುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಗಮನಾರ್ಹ ಪ್ರಗತಿ ಇದೆ. ಹೊಸ ಆದಾಯದ ಮೂಲಗಳು ಕಾಣಿಸಿಕೊಳ್ಳುತ್ತವೆ. ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗುವ ಸಾಧ್ಯತೆಯಿದ್ದು, ಕಠಿಣ ಪರಿಶ್ರಮವು ಫಲ ನೀಡಲಿದೆ.
ವಿಶೇಷ ಸೂಚನೆ : ಈ ಲೇಖನವು ವಾಸ್ತು ಮತ್ತು ಜ್ಯೋತಿಷ್ಯ ತಜ್ಞರ ಸಲಹೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ.
Vinesh Phogat : ವಿನೇಶ್ ಫೋಗಟ್ ಗೆ ಬೆಳ್ಳಿ ಪದಕ, CAS ನಿಂದ ಹೊರ ಬಂದ ಮಹತ್ವದ ಅಪ್ಡೇಟ್