Amruthadhaare: ಎಸ್ಟೇಟ್ ಭೂಮಿಕಾ ಹೆಸರಿಗೆ, ಅಜ್ಜಿ ಮೊಮ್ಮಗನ ಆಲೋಚನೆ, ಮಲ್ಲಿಗೆ ಕಾದಿದ್ಯಾ ಕುತ್ತು?

Written by Soma Shekar

Published on:

---Join Our Channel---

Amruthadhaare Serial Today’s Episode: ಅಮೃತಧಾರೆ ಸೀರಿಯಲ್ ನಲ್ಲಿನ ಇತ್ತೀಚಿನ ಎಪಿಸೋಡ್ ಗಳು (Amruthadhaare Serial Today’s Episode) ಬಹಳ ಆಸಕ್ತಿಕರ ಮತ್ತು ಕುತೂಹಲ ಭರಿತವಾಗಿದೆ. ಇವತ್ತಿನ ಸಂಚಿಕೆ ಸಹಾ ಬಹಳ ವಿಶೇಷವಾಗಿದ್ದು, ಇದರಲ್ಲಿ ಗೌತಮ್ ಹಾಗೂ ಭೂಮಿಕಾ ಇಬ್ಬರೂ ಸಹಾ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಿ ತೆರೆದ ಜೀಪ್ ನಲ್ಲಿ ಪಯಣ ಬೆಳೆಸಿರುವ ಸುಂದರವಾದ ದೃಶ್ಯಗಳ ಒಂದು ಝಲಕ್ ಅನ್ನ ವಾಹಿನಿ ತನ್ನ ಹೊಸ ಪ್ರೊಮೋ ಮೂಲಕ ಪ್ರೇಕ್ಷಕರ ಮುಂದೆ ತಂದಿರಿಸಿದೆ.

ಚಿಕ್ಕಮಗಳೂರಿಗೆ (Chikkamagaluru) ಹೊರಡುವ ಮೊದಲು ಗೌತಮ್ ತನ್ನ ಅಜ್ಜಿಯ ಹತ್ತಿರ ಮಾತನಾಡಿದ್ದು, ಮದುವೆ ಆದ ಮೇಲೆ ಭೂಮಿಕಾಗೆ ಏನೂ ಉಡುಗೊರೆ ಕೊಟ್ಟಿಲ್ಲ. ಅದಕ್ಕೆ ಚಿಕ್ಕಮಗಳೂರಿನ ಅರವತ್ತು ಎಕರೆ ಎಸ್ಟೇಟ್ ನ ಭೂಮಿಕಾ ಹೆಸರಿಗೆ ಮಾಡೋ ನಿರ್ಧಾರ ಮಾಡಿರುವುದಾಗಿ ಹೇಳಿದ್ದು, ಇದನ್ನ ಕೇಳಿ ಅಜ್ಜಿ ಖುಷಿಯಾಗಿದ್ದು, ಆದಷ್ಟು ಬೇಗ ನನಗೆ ಒಬ್ಬ ಮೊಮ್ಮಗ ಅಥವಾ ಮೊಮ್ಮಗಳನ್ನ ಗಿಫ್ಟ್ ಕೊಡಬೇಕು ಅಂತ ಹೇಳಿದ್ದಾರೆ.

ಅಜ್ಜಿ ಮೊಮ್ಮಗ ಮಾತನಾಡುವುದನ್ನು ಕಳ್ಳ ಬೆಕ್ಕಿನ ಹಾಗೆ ಸದ್ದಿಲ್ಲದೇ ಕೇಳಿಸಿಕೊಂಡಿದ್ದಾನೆ ಮಾವ. ಎಸ್ಟೇಟ್ ಅನ್ನ ಭೂಮಿಕಾ ಹೆಸರಿಗೆ ಮಾಡ್ತಾನೆ ಗೌತಮ್ ಅನ್ನೋದನ್ನ ಕೇಳಿಸಿಕೊಂಡಿರುವ ಅವನು ಖಂಡಿತ ಇದನ್ನ ಶಕುಂತಲಾ ದೇವಿಯ ಕಿವಿಗೆ ಹಾಕ್ತಾನೆ ಅನ್ನೋದಂತೂ ಪಕ್ಕಾ ಆಗಿದೆ.

ಇನ್ನೊಂದು ಕಡೆ ಗೌತಮ್ (Gowtham) ಚಿಕ್ಕಮಗಳೂರಿಗೆ ತೆರೆದ ಜೀಪ್ ನಲ್ಲೇ ಎಕ್ಸ್ ಪ್ಲೋರ್ ಮಾಡಬೇಕು ಮಜಾ ಇರುತ್ತೆ ಅಂತ ಹೇಳಿದ ಗೌತಮ್ ಹೆಂಡತಿಯನ್ನ ಜೀಪ್ ನಲ್ಲಿ ಕರ್ಕೊಂಡು ಹೋಗೋ ಒಂದು ಸರ್ಪ್ರೈಸ್ ಅನ್ನ ಕೊಟ್ಟಿದ್ದು, ಭೂಮಿಕಾ ಇದರಿಂದ ಭರ್ಜರಿ ಥ್ರಿಲ್ ಫೀಲ್ ಆಗಿರೋದು ಕಂಡಿದೆ.

ದಾರಿಯಲ್ಲಿ ಸಾಗೋವಾಗ ಆ ಸುಂದರ ಪ್ರಕೃತಿಯ ಸೌಂದರ್ಯ ನೋಡಿ ಭೂಮಿಕಾ (Bhumika) ಖುಷಿಯಾಗಿದ್ದಾಳೆ. ಬಹಳ ದಿನಗಳ ನಂತರ ಗೌತಮ್ ಮತ್ತು ಭೂಮಿಕಾಗೆ ಏಕಾಂತ ದಲ್ಲಿ ಸಮಯವನ್ನ ಕಳೆಯೋಕೆ ಕಾಲ ಕೂಡಿ ಬಂದ ಹಾಗೆ ಕಂಡಿದ್ದು, ಅದಕ್ಕೆ ಒಳ್ಳೆ ರಮ್ಯ ವಾತಾವರಣ ಇರೋ ಜಾಗ ಕೂಡಾ ಸಿಕ್ಕಾಗಿದೆ.

ಚಿಕ್ಕಮಗಳೂರಿಗೆ ಗೌತಮ್ ಬಂದಿರೋದು ಎಸ್ಟೇಟ್ ನ ವಿಚಾರವಾಗಿ ಎದ್ದಿರುವ ಸಮಸ್ಯೆ ಬಗೆಹರಿಸೋಕೆ. ಅದಕ್ಕೆ ಇಲ್ಲಿ ಗೌತಮ್ ಮತ್ತು ಭೂಮಿಕಾಗೆ ಏನಾದ್ರು ಸಮಸ್ಯೆ ಎದುರಾಗುತ್ತಾ? ಅದನ್ನು ಗೌತಮ್ ಹೇಗೆ ನಿಭಾಯಿಸ್ತಾನೇ? ಅನ್ನೋದನ್ನ ಕಾದು ನೋಡಬೇಕಾಗಿದೆ. ಇನ್ನು ಅಜ್ಜಿ ಗೌತಮ್ ಭೂಮಿಕಾ ಬದುಕಲ್ಲಿ ಮಗುವೊಂದರ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ.

ಇನ್ನು ಗೌತಮ್ ಎಸ್ಟೇಟ್ ನ ಭೂಮಿಕಾ ಹೆಸರಿಗೆ ಮಾಡ್ತಾನೇ ಅಂತ ಶಕುಂತಲಾ ದೇವಿ ಏನಾದ್ರು ಕುತಂತ್ರವನ್ನು ಮಾಡ್ತಾಳಾ? ಅಲ್ಲದೇ ಭೂಮಿಕಾ ಹೇಗೂ ಮನೇಲಿ ಇಲ್ಲ ಅನ್ನೋದರ ಅವಕಾಶವನ್ನು ಪಡೆದುಕೊಂಡು ಜೈದೇವ್ ಮಲ್ಲಿ ಹಾಗೂ ಅವಳ ಹೊಟ್ಟೇಲಿರೋ ಮಗುವಿಗೆ ತೊಂದರೆಯನ್ನ ಕೊಡೋ ಪ್ಲಾನ್ ಮಾಡ್ತಾನಾ ಅನ್ನೋ ಅನುಮಾನ ಸಹಾ ಮೂಡಿದೆ.

Leave a Comment