Amruthadhaare: ಇಬ್ರೂ ಓಕೆ ಅಂದ್ಮೇಲೆ ತಡ ಯಾಕೆ? ಸೋಬನಕ್ಕೆ ಮುಹೂರ್ತ ಇಡಿಸಿದ ಅಜ್ಜಿ, ನಾಚಿ ನೀರಾದ ಭೂಮಿಕಾ

Written by Soma Shekar

Published on:

---Join Our Channel---

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ಮತ್ತು ಭೂಮಿಕಾ ಒಂದಾಗೋ ಘಳಿಗೆ ಬಂದಾಗಿದೆ. ಅಭಿಮಾನಿಗಳು ನಿರೀಕ್ಷಿಸಿದ್ದ ಸಮಯ ಹತ್ತಿರ ಬಂದ ಹಾಗೆ ಕಂಡಿದೆ. ಈ ಬಾರಿ ಸಹಾ ಶಕುಂತಲಾ ದೇವಿ ಮತ್ತೇನಾದ್ರು ಕುತಂತ್ರ ಮಾಡದೇ ಹೋದಲ್ಲಿ ಗೌತಮ್ ಭೂಮಿಕಾ ಒಳ್ಳೆಯ ಸ್ನೇಹಿತರಿಂದ ದಂಪತಿಯಾಗಿ ಜೀವನ ನಡೆಸೋ ಸಮಯ ದೂರವಿಲ್ಲ. ಈ ಸುಸಮಯಕ್ಕಾಗಿ ಗೌತಮ್ ಅವರ ಅಜ್ಜಿ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಇದೇನು ಮುಹೂರ್ತ ಎಂದು ಗೌತಮ್ (Gowtham) ಕೇಳಿದ್ದು ಅಜ್ಜಿ ನಿಮ್ಮಿಬ್ಬರ ಸೋಬನಕ್ಕೆ ಎಂದು ಹೇಳಿದ್ದಾರೆ. ಅಜ್ಜಿಯ ಮಾತನ್ನು ಕೇಳಿದ ಗೌತಮ್ ಶಾಕ್ ಆಗಿದ್ದಾನೆ, ಇದೆಲ್ಲಾ ಯಾಕೆ ಅಂತ ಅಜ್ಜಿಯನ್ನು ಕೇಳಿದ್ದಾನೆ. ಆಗ ಅಜ್ಜಿ ಇದೆಲ್ಲಾ ನಿಮಗಾಗಿ ಅಲ್ಲ, ನಿಮ್ಮಮ್ಮ ಶಕುಂತಲಾಗಾಗಿ, ಅವಳಿಗೋಸ್ಕರ ನೀವಿಬ್ರು ಒಂದಾಗಲೇಬೇಕು, ಇಲ್ಲದೇ ಇದ್ರೆ ಅವಳು ಸತ್ತೇ ಹೋಗ್ತಾಳೆ ಅಂತ ಎಮೋಷನಲ್ ಮಾತು ಹೇಳಿ ಗೌತಮ್ ಒಪ್ಪೋ ಹಾಗೆ ಮಾಡಿದ್ದಾರೆ.

ಅಜ್ಜಿ ಭೂಮಿಕಾಗೂ (Bhumika) ಸಹಾ ಈ ವಿಚಾರವನ್ನ ಹೇಳಿದ್ದಾರೆ. ಭೂಮಿಕಾ ನಾಚಿ ನೀರಾಗಿದ್ದು ಗೌತಮ್ ಅವರು ಇದಕ್ಕೆಲ್ಲಾ ಒಪ್ಪಲ್ಲ ಅಂದಿದ್ದು, ಅಜ್ಜಿ ಗೌತಮ್ ಓಕೆ ಅಂದಿದ್ದಾನೆ ಅಂತ ಹೇಳಿದಾಗ ಭೂಮಿಕಾ ಕೂಡಾ ತನ್ನ ಕಡೆಯಿಂದ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ. ಗೌತಮ್ ಭೂಮಿಕಾ ಇಬ್ರೂ ಓಕೆ ಹೇಳಾಗಿದೆ. ಈಗ ಶಕುಂತಲಾ ದೇವಿ ಮತ್ತೇನು ಕುತಂತ್ರ ಮಾಡ್ತಾಳೋ ಕಾದು ನೋಡಬೇಕಾಗಿದೆ.

ಅಜ್ಜಿಗೆ ಗೌತಮ್ ಮತ್ತು ಭೂಮಿಕಾ ಮೇಲೆ ಅನುಮಾನ ಮೂಡಿತ್ತು‌,‌ ಅವರು ಕೋಣೆಯಲ್ಲಿ ಜೊತೆಯಾಗಿ ಮಲಗ್ತಾರೋ ಬೇರೆ ಬೇರೆ ಮಲಗ್ತಾರೋ ಅನ್ನೋದನ್ನ ಪರೀಕ್ಷೆ ಮಾಡಿದ್ದು ಉಂಟು. ಅಜ್ಜಿಗೆ ಭಯಪಟ್ಟು ಇಬ್ಬರೂ ಹಾಸಿಗೆ ಮೇಲೆ ಮಲಗಲು ಆರಂಭಿಸಿದ್ದಾರೆ. ಅಜ್ಜಿ ಹೇಗಾದರೂ ಮಾಡಿ ಇಬ್ಬರನ್ನೂ ಒಂದು ಮಾಡಬೇಕೆಂದು ಸಾಕಷ್ಟು ಪ್ರಯತ್ನ ಮಾಡ್ತಿದ್ದಾರೆ. ಈ ಸಲ ಸಕ್ಸಸ್ ಆಗ್ತಾರಾ ಅಜ್ಜಿ ಅನ್ನೋದನ್ನ ನೋಡಬೇಕಾಗಿದೆ.

Leave a Comment