Amruthadhaare: ಸೀರಿಯಲ್ ನಲ್ಲಿ ಈ ಜೋಡಿಯ ಕೆಮಿಸ್ಟ್ರಿ ಸೂಪರ್: ಆದ್ರೆ ಛಾಯಾಸಿಂಗ್ ರಾಜೇಶ್ ಅವ್ರನ್ನ ಹೀಗೆ ಕರೀತಾರ?

Written by Soma Shekar

Published on:

---Join Our Channel---

Amruthadhaare : ಕನ್ನಡ ಕಿರುತೆರೆಯ ಬಹುಜನಪ್ರಿಯ ಧಾರಾವಾಹಿಯಾಗಿರುವ ಅಮೃತಧಾರೆಯಲ್ಲಿ ರಾಜೇಶ್ ನಟರಂಗ (Rajesh Nataranga) ಅವರು ಗೌತಮ್ ದೀವಾನ್ ಪಾತ್ರದಲ್ಲಿ ಮತ್ತು ನಟಿ ಛಾಯಾ ಸಿಂಗ್ (Chaya Singh) ಅವರು ಭೂಮಿಕಾ ಸದಾಶಿವ ಪಾತ್ರದಲ್ಲಿ ನಾಯಕ ಮತ್ತು ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಪಾತ್ರ ಹಾಗೂ ಜೋಡಿಯ ಕುರಿತಾಗಿ ಈಗಾಗಲೇ ಕಿರುತೆರೆಯ ಪ್ರೇಕ್ಷಕರಿಂದ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಲೇ ಇದ್ದು ಸೋಶಿಯಲ್ ಮೀಡಿಯಾ ಗಳಲ್ಲಿಯೂ ಬಹಳಷ್ಟು ಸಲ ನೆಟ್ಟಿಗರು ಮೆಚ್ಚುಗೆಗಳನ್ನು ನೀಡುವುದು ತೀರಾ ಸಾಮಾನ್ಯವಾದಂತಹ ವಿಚಾರವಾಗಿದೆ.

ಕೆಲವು ವರ್ಷಗಳ ಹಿಂದೆ ಛಾಯಾ ಸಿಂಗ್ ಮತ್ತು ರಾಜೇಶ್ ನಟರಂಗ ಅವರು ಪ್ರಾಜೆಕ್ಟ್ ಒಂದರಲ್ಲಿ ಜೊತೆಯಾಗಿ ಕೆಲಸವನ್ನ ಮಾಡಿದ್ದರು. ಹೌದು, ತುಂತುರು ಹೆಸರಿನ ಧಾರಾವಾಹಿಯಲ್ಲಿ ಇವರಿಬ್ಬರೂ ಕಾಣಿಸಿಕೊಂಡಿದ್ದರು. ಆ ಧಾರಾವಾಹಿಯಲ್ಲಿ ಛಾಯಾ ಸಿಂಗ್ ಅವರು ರಾಜೇಶ್ ಅವರಿಗೆ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಛಾಯಾ ಸಿಂಗ್ ಅವರ ವೃತ್ತಿ ಜೀವನದಲ್ಲಿ ಅವರು ನಟಿಸಿದಂತಹ ಎರಡನೇ ಧಾರಾವಾಹಿಯಾಗಿತ್ತು.

ಅದಾದ ಬಳಿಕ ವರ್ಷಗಳ ಕಾಲ ಇವರಿಬ್ಬರೂ ಕೂಡಾ ಯಾವುದೇ ಸೀರಿಯಲ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ, ಇದರ ಮಧ್ಯ ಯಾವುದೇ ರೀತಿಯಲ್ಲಿ ಕಾಂಟ್ಯಾಕ್ಟ್ ಇರಲಿಲ್ಲ ಮಾತುಕತೆ ಸಹಾ ನಡೆದಿರಲಿಲ್ಲ ಎನ್ನಲಾಗಿದೆ. ಆದರೆ ಬಹಳ ವರ್ಷಗಳ ನಂತರ ಇದೀಗ ಇವರಿಬ್ಬರೂ ಜೋಡಿಯಾಗಿ ಅಮೃತದಾರೆ ಸೀರಿಯಲ್ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವುದು ಮಾತ್ರವಲ್ಲದೇ ಅಲ್ಪ ಸಮಯದಲ್ಲೇ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ರಾಜೇಶ್ ನಟರಂಗ ಅವರು ನಾನು ಛಾಯಾ ಸಿಂಗ್ ಅವರ ಕೆಲಸವನ್ನು ಬಹಳ ಹಿಂದೆಯೇ ನೋಡಿದ್ದೇನೆ ಅವರೊಬ್ಬ ಒಳ್ಳೆಯ ನಟಿ, ಅವರ ಜೊತೆ ಕೆಲಸ ಮಾಡೋದು ಬಹಳ ಖುಷಿಯ ವಿಚಾರ ಎಂದು ಹೇಳಿಕೊಂಡಿದ್ದರು. ಛಾಯಾ ಸಿಂಗ್ ಅವರು ಸಹಾ ರಾಜೇಶ್ ನಟರಂಗ ಒಬ್ಬ ಅದ್ಭುತ ನಟ, ಅವರ ಪರಿಚಯ ಮೊದಲೇ ಇರೋದ್ರಿಂದ ಅಮೃತಧಾರೆ ಸೀರಿಯಲ್ ನಲ್ಲಿ ನಟಿಸುವಾಗ ಸೀನ್ ಗಳು ಹೇಗೆ ಬರಬಹುದು ಎಂದು ಮಾತನಾಡಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ.

ಅಚ್ಚರಿಯ ವಿಚಾರ ಏನೆಂದರೆ ಅಮೃತದಾರೆ ಧಾರಾವಾಹಿ ಸೆಟ್ಟಿಗೆ ಬಂದಾಗ ರಾಜೇಶ್ ಅವರನ್ನು ನೋಡಿದಾಗ ಛಾಯಾಸಿಂಗ್ ಅವರು ರಾಜೇಶ್ ಅಣ್ಣ ಅಂತ ಕರೆದಿದ್ದರಂತೆ, ಈ ವಿಚಾರವನ್ನು ರಾಜೇಶ್ ಅವರೇ ಒಂದು ಸಂದರ್ಭದಲ್ಲಿ ಹೇಳಿದ್ದರು. ಆಗ ಛಾಯಾ ಸಿಂಗ್ ಅವರು ಇದನ್ನು ನೀವು ಪಬ್ಲಿಕ್ ನಲ್ಲಿ ಹೇಳಬೇಡಿ ಅಂತ ತಮಾಷೆ ಮಾಡಿದ್ದುಂಟು. ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಂಡರೂ ತೆರೆಯ ಹಿಂದೆ ಛಾಯಾ ಸಿಂಗ್ ಅವರು ರಾಜೇಶ್ ನಟರಂಗ ಅವರನ್ನು ಅಣ್ಣ ಅಂತಾನೇ ಕರೀತಾರಂತೆ.

Leave a Comment