Bollywood Actors: ಬಾಲಿವುಡ್ ನ ಈ ಸೆಲೆಬ್ರಿಟಿಗಳು ಹೊಂದಿರೋದು ವಿದೇಶಿ ಪೌರತ್ವ; ದೊಡ್ಡ ಲಿಸ್ಟೇ ಇದೆ

Written by Soma Shekar

Published on:

---Join Our Channel---

Bollywood Actors: ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ ಮತ್ತು ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇಂತಹ ಸೆಲೆಬ್ರಿಟಿಗಳಲ್ಲಿ (Bollywood Actors) ಒಂದಷ್ಟು ಜನ ಸ್ಟಾರ್ ಗಳು ವಿದೇಶಿ ಪೌರತ್ವವನ್ನು ಹೊಂದಿದ್ದಾರೆ. ಹೀಗೆ ವಿದೇಶದ ಪೌರತ್ವ ಹೊಂದಿರುವ ಸೆಲೆಬ್ರಿಟಿಗಳ ಒಂದು ದೊಡ್ಡ ಪಟ್ಟಿಯೇ ಇದ್ದು, ಕೆಲವು ಪ್ರಮುಖ ಸೆಲೆಬ್ರಿಟಿಗಳು ಯಾರೆಂದು ತಿಳಿಯೋಣ ಬನ್ನಿ.

ಆಲಿಯಾ ಭಟ್ (Alia Bhat), ಬಾಲಿವುಡ್ ನ ಸ್ಟಾರ್ ನಟಿ, ರಣಬೀರ್ ಕಪೂರ್ ಅವರ ಪತ್ನಿಯೂ ಆಗಿರುವ ಆಲಿಯಾ ಭಟ್ ಬಾಲಿವುಡ್ ನ ಬಹುಬೇಡಿಕೆಯ ಹಾಗೂ ದುಬಾರಿ ನಟಿ ಸಹಾ ಹೌದು. ಆಲಿಯಾ ಬ್ರಿಟನ್ ನ ಪೌರತ್ವ ಹೊಂದಿದ್ದು, ತಮ್ಮ ತಾಯಿ ಸೋನಿ ರಜ್ದಾನ್ ನಿಂದ ಅವರಿಗೆ ಪೌರತ್ವ ದಕ್ಕಿದೆ.

ಸನ್ನಿ ಲಿಯೋನ್ (Sunny Leone), ಒಂದು ಕಾಲದ ನೀಲಿ ತಾರೆ, ಪ್ರಸ್ತುತ ಬಾಲಿವುಡ್ ನ ಸ್ಟಾರ್ ಸೆಲೆಬ್ರಿಟಿಗಳ ಸಾಲಿನಲ್ಲಿರುವ ಸನ್ನಿ ಲಿಯೋನ್ ತಮ್ಮ ಸಾಮಾಜಿಕ ಕೆಲಸಗಳಿಂದ ಸಹಾ ಜನಪ್ರಿಯರಾಗಿದ್ದಾರೆ. ‌ಸನ್ನಿ ಕೆನಡಾ ದೇಶದ ಪೌರತ್ವವನ್ನು ಪಡೆದುಕೊಂಡಿದ್ದಾರೆ.

ಕತ್ರಿನಾ ಕೈಫ್ (Katrina Kaif), ಬಾಲಿವುಡ್ ನ ಸ್ಟಾರ್ ನಟಿ, ವಿಕ್ಕಿ ಕೌಶಲ್ ಪತ್ನಿ ಆಗಿರುವ ಕತ್ರಿನಾ ಬಾಲಿವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದವರು. ಕತ್ರಿನಾ ಹುಟ್ಟಿದ್ದು ಹಾಂಕ್ ಕಾಂಗ್ ದೇಶದಲ್ಲಿ. ಈ ನಟಿಯು ಬ್ರಿಟಿಷ್ ಪೌರತ್ವವನ್ನು ಪಡೆದುಕೊಂಡಿದ್ದಾರೆ.

ಜಾಕ್ವೆಲಿನಾ ಫರ್ನಾಂಡೀಸ್ (Jacqueline Fernandez), ಬಾಲಿವುಡ್ ನ ಸಿನಿಮಾಗಳು ಹಾಗೂ ವೆಬ್ ಸಿರೀಸ್ ಗಳಲ್ಲೂ ನಟಿಸಿರುವ ಜಾಕ್ವೆಲಿನಾ ಹುಟ್ಟಿದ್ದು ಬಹ್ರೇನ್ ದೇಶದಲ್ಲಿ. ಈ ನಟಿಯು ಶ್ರೀಲಂಕಾದ ನಾಗರಿಕತೆಯನ್ನು ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಾಕ್ವೆಲಿನಾ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು.

ನೋರಾ ಫತೇಹಿ (Nora Fatehi), ಬಾಲಿವುಡ್ ನಲ್ಲಿ ಡ್ಯಾನ್ಸರ್ ಆಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿರುವ ನೋರಾ, ಡ್ಯಾನ್ಸ್ ರಿಯಾಲಿಟಿ ಶೋಗಳ ಜಡ್ಜ್ ಸಹಾ ಆಗಿದ್ದಾರೆ. ಈ ನಟಿ ಹುಟ್ಟಿದ್ದು ಕೆನಡಾದಲ್ಲಿ. ನಟಿ ಕೆನಡಾ ಪೌರತ್ವವನ್ನು ಹೊಂದಿದ್ದಾರೆ.

ಕಲ್ಕಿ ಕೊಚ್ಲಿನ್ (Kalki Koechlin), ಬಾಲಿವುಡ್ ನಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಸಹಾ ಸೆಲೆಬ್ರಿಟಿಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ‌. ಇವರು ಫ್ರಾನ್ಸ್ ನ ಪೌರತ್ವವನ್ನು ಹೊಂದಿದ್ದಾರೆ.

Sarath Babu: ವಾರಸುದಾರರೇ ಇಲ್ಲದ ಶರತ್ ಬಾಬು ಅವರ ಕೋಟಿಗಳ ಆಸ್ತಿ ಯಾರಿಗೆ? ಇವರ ಆಸ್ತಿ ಎಷ್ಟಿದೆ ಗೊತ್ತಾ

Leave a Comment