Raveena Tondon: ರಸ್ತೆ ಅಪಘಾತ, ಕೆಜಿಎಫ್ ನಟಿಯ ಮೇಲೆ ರೊಚ್ಚಿಗೆದ್ದ ಜನ, ಕುಡಿದ ಮತ್ತಿನಲ್ಲಿ ಇದ್ರಾ ನಟಿ?

Written by Soma Shekar

Published on:

---Join Our Channel---

Raveena Tondon: ಬಾಲಿವುಡ್ (Bollywood) ನಟಿ ಇತ್ತೀಚಿನ ದಿನಗಳಲ್ಲಿ ಕೆಜಿಎಫ್ 2 ಸಿನಿಮಾದ ತಮ್ಮ ಪಾತ್ರದ ಮೂಲಕ ಮತ್ತೊಮ್ಮೆ ಭರ್ಜರಿ ಸುದ್ದಿಯಾಗಿದ್ದ ರವೀನಾ ಟಂಡನ್ (Raveena Tondon) ಅವರು ಕುಡಿದ ಮತ್ತಿನಲ್ಲಿ, ಮೂವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಸ್ಥಳೀಯರು ಬಾಲಿವುಡ್ ನಟಿಯ ಮೇಲೆ ರೊಚ್ಚಿಗೆದ್ದ ಘಟನೆಯೊಂದು ವರದಿಯಾಗಿದ್ದು, ಎಲ್ಲರಿಗೂ ಇದು ಶಾಕಿಂಗ್ ಎನಿಸಿದೆ. ಈಗ ಮಾದ್ಯಮಗಳಲ್ಲಿ ಈ ವಿಚಾರ ಪ್ರಮುಖ ಸುದ್ದಿಯಾಗಿದೆ.

ವಿಷಯದ ವಿವರಗಳಿಗೆ ಹೋದರೆ, ಮುಂಬೈನ ರಿಜ್ವಿ ಕಾಲೇಜು ಹತ್ತಿರದ ಕಾರ್ಟರ್ ರಸ್ತೆಯಲ್ಲಿ ನಟಿ ರವೀನಾ ಇದ್ದ ಕಾರನ್ನು ಚಾಲನೆ ಮಾಡುತ್ತಿದ್ದ ಡ್ರೈವರ್ ನಿರ್ಲಕ್ಷ್ಯ ದಿಂದ ಕಾರನ್ನು ಚಾಲನೆ ಮಾಡುತ್ತಾ, ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಜನರು ಕಾರನ್ನು ತಡೆದು ಪ್ರಶ್ನೆ ಮಾಡಿದಾಗ ಕಾರಿನಲ್ಲಿದ್ದ ನಟಿ ರವೀನಾ ಟಂಡನ್ ಕುಡಿದ ಮತ್ತಿನಲ್ಲಿ ಅಪಘಾತ ಸಂತ್ರಸ್ತರನ್ನೇ ನಿಂದನೆ ಮಾಡಿದ್ದು,ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನುವುದು ಸಂತ್ರಸ್ತರ ಆರೋಪವಾಗಿದೆ.

ಈ ಘಟನೆಯ ವೀಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಜನರು ನಟಿಯನ್ನು ಸುತ್ತವರೆದು ಪೋಲಿಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ನಟಿ ದಯವಿಟ್ಟು ನಿಲ್ಲಿಸಿ ಎಂದು ಮನವಿಯನ್ನು ಮಾಡಿಕೊಳ್ಳುತ್ತಿರುವುದು ಸಹಾ ಕಾಣುತ್ತಿದೆ. ಸಂತ್ರಸ್ತರು ನಟಿ ಹಾಗೂ ಅವರ ಚಾಲಕನು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುತ್ತಾ ಆರೋಪವನ್ನು ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆದ ಮೇಲೆ ಪರ ವಿರೋಧ ಮಾತುಗಳು ಕೇಳಿ ಬರುತ್ತಿವೆ. ನಟಿ ಕುಡಿದಿಲ್ಲ ಎನ್ನುವುದು ಅವರು ಮಾತನಾಡುವ ವಿಧಾನದಿಂದಲೇ ಗೊತ್ತಾಗುತ್ತಿದೆ. ಅವರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ ಆದರೆ ಉಳಿದವರು ತಾಳ್ಮೆಯಿಂದ ಕೇಳಲು ಸಹಾ ಸಿದ್ಧರಿಲ್ಲ ಎನ್ನುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದಿದ್ದಾರೆ.

Leave a Comment