Ragini Dwivedi: ಚಂದನ್ ನಿವೇದಿತಾ ಡಿವೋರ್ಸ್, ಪ್ರತಿಕ್ರಿಯೆ ಕೊಟ್ಟ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

Written by Soma Shekar

Published on:

---Join Our Channel---

Ragini Dwivedi: ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಕಪಲ್ ಅಂತ ಕರೆಸಿಕೊಂಡಿದ್ದ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Nivedtia Gowda) ಶಾಕಿಂಗ್ ಎನ್ನುವಂತೆ ಜೂನ್ ಏಳರಂದು ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಪಡೆಯುವ ಮೂಲಕ ಅಚ್ಚರಿಯನ್ನ ಮೂಡಿಸಿದ್ದಾರೆ. ಅವರ ಅಭಿಮಾನಿಗಳು ಈ ವಿಷಯ ತಿಳಿಯುತ್ತಿದ್ದ ಹಾಗೆ ಶಾಕ್ ಆಗಿದ್ದಾರೆ. ಮಾಧ್ಯಮಗಳಲ್ಲಿಯೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನದ ವಿಚಾರ ದೊಡ್ಡ ಮಟ್ಟದಲ್ಲಿ ವೈರಲ್ ಸುದ್ದಿಯಾಗಿದೆ.

ಈಗ ಈ ವಿಚಾರದ ಕುರಿತಾಗಿ ತುಪ್ಪದ ಬೆಡಗಿ ಖ್ಯಾತಿಯ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಮಾತನಾಡುತ್ತಾ, ಅವರ ವೈಯಕ್ತಿಕ ವಿಚಾರಕ್ಕೆ ನಾನು ಕಾಮೆಂಟ್ ಮಾಡುವುದಿಲ್ಲ. ಲೈಫ್ ಈಸ್ ನಾಟ್ ಈಸಿ. ಜೀವನದಲ್ಲಿ ಏರಿಳಿತಗಳು ಇರುತ್ತವೆ. ನಾವೇನು ಕಾಂಟ್ರಿಬ್ಯುಟ್ ಮಾಡದೆ ಹೋದರೆ ನಾವೇನು ಕಾಮೆಂಟ್ ಮಾಡೋದಿಕ್ಕೆ ಹೋಗಬಾರದು ಅನ್ನೋ ಮಾತುಗಳನ್ನು ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ (Bigg Boss Kannada 5) ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಬ್ಬರಿಗೊಬ್ಬರು ಪರಿಚಯರಾದರು. ಇದಾದ ನಂತರ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾಗೆ ಪ್ರಪೋಸ್ ಮಾಡುವ ಮೂಲಕ ಚರ್ಚೆಗೆ ಕಾರಣವಾಗಿದ್ದರು. ನಂತರ 2020ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯ ರಾಗಿದ್ದ ಚಂದನ್ ಮತ್ತು ನಿವೇದಿತಾ ಅವರ ಜೋಡಿಯನ್ನು ನೆಟ್ಟಿಗರು ಆಗಾಗ ಟ್ರೋಲ್ ಕೂಡಾ ಮಾಡುತ್ತಿದ್ದರು. ಚಂದನ್ ಅವರು ಸಿನಿಮಾ ಮತ್ತು ತಮ್ಮ ಸಂಗೀತದ ವಿಚಾರದಲ್ಲಿ ತೊಡಗಿಕೊಂಡಿದ್ದರು. ಇನ್ನು ನಿವೇದಿತಾ ಅವರು ಕನ್ನಡ ಕಿರುತೆರೆಯ ಕೆಲವೊಂದು ರಿಯಾಲಿಟಿ ಶೋಗಳ ಮೂಲಕ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ವಿಡಿಯೋಗಳನ್ನು ಮಾಡುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

Leave a Comment