Pooja Hegde: ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಐಶಾರಾಮೀ ಮನೆ ಖರೀದಿಸಿದ ಪೂಜಾ ಹೆಗ್ಡೆ; ಬೆಲೆ ಕೇಳಿ ಶಾಕ್ ಆದ ನೆಟ್ಟಿಗರು

Written by Soma Shekar

Published on:

---Join Our Channel---

Pooja Hegde: ಬಾಲಿವುಡ್ ಮತ್ತು ದಕ್ಷಿಣ ಸಿನಿಮಾ ರಂಗದಲ್ಲಿ ಹೆಸರನ್ನು ಮಾಡಿ, ಸಾಕಷ್ಟು ಜನಪ್ರಿಯತೆಯನ್ನು ಪಡೆದು, ಸ್ಟಾರ್ ಗಳ ಜೊತೆಯಲ್ಲಿ ತೆರೆಯನ್ನ ಹಂಚಿಕೊಂಡು ಸೌತ್ ಸಿನಿಮಾಗಳಲ್ಲಿ ಸ್ಟಾರ್ ನಟಿಯ ಪಟ್ಟವನ್ನು ಪಡೆದುಕೊಂಡಿರೋ ನಟಿ ಪೂಜಾ ಹೆಗ್ಡೆ (Pooja Hegde). ಆದ್ರೆ ಕಳೆದ ಸ್ವಲ್ಪ ಸಮಯದಿಂದಲೂ ಸಹಾ ನಟಿಗೆ ನಿರೀಕ್ಷಿತ ಗೆಲುವು ಸಿಕ್ಕಿಲ್ಲ. ಸಾಲು ಸಾಲು ಸಿನಿಮಾಗಳು ಸೋಲಿನ ದಾರಿ ಹಿಡಿದಿವೆ. ಅಲ್ಲದೇ ಬಾಲಿವುಡ್ ನಲ್ಲಿ ನಟಿಸಿದಂತಹ ಎರಡು ಸಿನಿಮಾಗಳು ಸಹಾ ಸೋಲಿನ ರುಚಿ ಕಂಡಿದ್ದು, ದಕ್ಷಿಣದ ಸಿನಿಮಾ ಹಾಗೂ ಬಾಲಿವುಡ್ ಎರಡೂ ಕಡೆ ನಟಿ ಸೋಲಿನ ಕಹಿಯನ್ನ ಅನುಭವಿಸಿದ್ದಾರೆ.

ಸದ್ಯಕ್ಕೆ ನಟಿಯ ಕೈಯಲ್ಲಿ ಒಂದೆರಡು ಸಿನಿಮಾಗಳು ಮಾತ್ರವೇ ಇದೆ. ಅಲ್ಲದೇ ಸ್ಟಾರ್ ಗಳ ಜೊತೆಗೆ ಯಾವ ಹೊಸ ಸಿನಿಮಾ ಕೂಡಾ ಘೋಷಣೆ ಆಗಿಲ್ಲ. ಟಾಲಿವುಡ್ ನಲ್ಲಿ ನಂದಿನಿ ರೆಡ್ಡಿ (Nandini Reddy) ನಿರ್ದೇಶನದ ಹೊಸ ಸಿನಿಮಾದಲ್ಲಿ ಸಮಂತಾ ಆರೋಗ್ಯ ಸಮಸ್ಯೆ ಎಂದು ನೋ ಹೇಳಿದ್ದ ಪಾತ್ರವನ್ನ ಪೂಜಾ ಹೆಗ್ಡೆ ಒಪ್ಪಿಕೊಂಡಿದ್ದಾರೆ ಅನ್ನೋ ಒಂದು ಸುದ್ದಿಯಾಗಿದೆ.

ಆದರೆ ಈಗ ನಟಿಯು ಅಭಿಮಾನಿಗಳಿಗೊಂದು ಖುಷಿಯ ಸುದ್ದಿಯನ್ನು ಮತ್ತು ಅನೇಕರಿಗೆ ಅಚ್ಚರಿಯ ಸುದ್ದಿಯನ್ನು ನೀಡೋ ಮೂಲಕ ಸದ್ದನ್ನು ಮಾಡಿದ್ದಾರೆ. ಮುಂಬೈನ ಬಹಳ ಶ್ರೀಮಂತ ಏರಿಯಾ ಎಂದೇ ಹೆಸರಾಗಿರುವ ಬಾಂದ್ರಾದಲ್ಲಿ (Bandre) ಪೂಜಾ ಹೆಗ್ಡೆ ಅವರು ಐಶಾರಾಮೀ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ನಟಿಯು ಬರೋಬ್ಬರಿ 45 ಕೋಟಿ ರೂ. ಮೌಲ್ಯದ ಮನೆ ಖರೀದಿ ಮಾಡಿದ್ದಾರೆ ಎನ್ನುವ ವಿಚಾರವೀಗ ವೈರಲ್ ಆಗಿದೆ.

ಪೂಜಾ ಖರೀದಿ ಮಾಡಿರುವ ಮನೆಯ ವಿಸ್ತೀರ್ಣ 4000 ಚದರ ಅಡಿ ಎಂದು ಹೇಳಲಾಗಿದ್ದು, ಬಾಲಿವುಡ್ ಸ್ಟಾರ್ ನಟಿ ನಟಿಯರು ವಾಸಿಸುವ ಏರಿಯಾದಲ್ಲಿ ಪೂಜಾ ಹೆಗ್ಡೆ ಈಗ ಮನೆ ಖರೀದಿ ಮಾಡಿರುವುದು ವಿಶೇಷವಾಗಿದೆ. ತೆಲುಗಿನಲ್ಲಿ ರಶ್ಮಿಕಾ ಮತ್ತು ಶ್ರೀಲೀಲಾ ಬೇಡಿಕೆ ಟಾಲಿವುಡ್ ನಲ್ಲಿ ಹೆಚ್ಚಿದ ಮೇಲೆ ಪೂಜಾ ಹೆಗ್ಡೆ ತಮ್ಮ ಹೆಚ್ಚಿನ ಗಮನವನ್ನು ಬಾಲಿವುಡ್ ಗೆ ಹರಿಸಿದ್ದಾರೆ. ಪ್ರಸ್ತುತ ನಟಿ ಒಂದು ಹಿಟ್ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ.

Leave a Comment