Keerthy Suresh: ತೆಲುಗು ತಮಿಳು ಸಿನಿಮಾಗಳ ಸ್ಟಾರ್ ನಟಿಯರಲ್ಲಿ ಕೀರ್ತಿ ಸುರೇಶ್ (Keerthy Suresh) ಸಹಾ ಒಬ್ಬರಾಗಿದ್ದಾರೆ. ಈ ಎರಡೂ ಸಿನಿಮಾ ರಂಗಗಳಲ್ಲಿ ನಟಿ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳು ಬಂದ ಮೇಲೆ ನಟಿಯ ಸಿನಿಮಾಗಳು ಕನ್ನಡಕ್ಕೂ ಡಬ್ ಆಗಿದ್ದು, ನಟಿ ತಮ್ಮ ಅಂದ ಹಾಗೂ ಅಭಿನಯದಿಂದ ಸಿನಿ ಪ್ರೇಮಿಗಳ ಮನಸ್ಸನ್ನ ಗೆದ್ದಿದ್ದಾರೆ.
ಕೀರ್ತಿ ಸುರೇಶ್ ತಮ್ಮ ಹೋಮ್ಲಿ ಪಾತ್ರಗಳಿಂದ ಹೆಸರಾದವರು, ಮಹಾನಟಿ (Mahanati) ಮೂಲಕ ಸಂಚಲನ ಸೃಷ್ಟಿಸಿದವರು. ಬೋಲ್ಡ್ ಡ್ರೆಸ್ ಹಾಕಲ್ಲ ಎನ್ನುವ ನಿಯಮ ಹಾಕಿಕೊಂಡಿದ್ದವರು. ಆದರೆ ಈಗ ನಟಿ ತಾನು ಹಾಕಿಕೊಂಡಿದ್ದ ನಿಯಮಕ್ಕೆ ದಿನ ಕಳೆದಂತೆ ಹಂತ ಹಂತವಾಗಿ ಗುಡ್ ಬೈ ಹೇಳುತ್ತಿದ್ದಾರೆ ಅನ್ನೋದು ಅವರ ಫೋಟೋಗಳಿಂದ ಗೊತ್ತಾಗ್ತಿದೆ.
ಬಾಲಿವುಡ್ ಗೆ (Bollywood) ಎಂಟ್ರಿ ಕೊಟ್ಟಿರುವ ಕೀರ್ತಿ ಸುರೇಶ್ ಈಗ ಹೊಸ ಫೋಟೋಗಳ ಮೂಲಕ ಧೂಳೆಬ್ಬಿಸಿದ್ದಾರೆ. ಎಲ್ಲಾ ಕಡೆ ಕೀರ್ತಿ ಅವರ ಹಿಂದೆಂದೂ ಕಾಣದಂತಹ ಬೋಲ್ಡ್ ಲುಕ್ ನ ಫೋಟೋಗಳು ವೈರಲ್ ಆಗಿವೆ. ಎಕ್ಸ್ ( ಹಿಂದಿನ ಟ್ವಿಟರ್) ನಲ್ಲಿ ಈಗ ಕೀರ್ತಿ ಅವರ ಫೋಟೋಗಳು ಹರಿದಾಡುತ್ತಾ ತರಹೇವಾರಿ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.
ಕೀರ್ತಿ ಸುರೇಶ್ ಅವರು 69 ನೇ ಫಿಲ್ಮ್ ಫೇರ್ ಸಮಾರಂಭದಲ್ಲಿ ದಂತದ ವರ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಎದೆ ಸೀಳು ಕಾಣುವಂತ ಡ್ರೆಸ್ ತೊಟ್ಟು ಪಡ್ಢೆಗಳ ನಿದ್ದೆಗೆಡಿಸಿದ್ದಾರೆ. ತಮ್ಮ ಅಭಿಮಾನ ನಟಿಯ ಇಂತಹುದೊಂದು ಲುಕ್ ಅನ್ನ ನೋಡಿ ಅಭಿಮಾನಿಗಳಂತೂ ಶಾಕ್ ಆಗಿದ್ದಾರೆ. ನಟಿಯ ಲುಕ್ ಗೆ ಮೆಚ್ಚುಗೆ ಹಾಗೂ ಟೀಕೆ ಎರಡೂ ಹರಿದು ಬರುತ್ತಿದೆ.
Mollywood: ಕೊನೆಗೂ ಇಳಯರಾಜ ಮುಂದೆ ಮಂಡಿಯೂರಿದ ಮಂಜುಮ್ಮೆಲ್ ಬಾಯ್ಸ್, ಸಂಗೀತ ನಿರ್ದೇಶಕನಿಗೆ ಸಿಕ್ತು ಗೆಲುವು