Keerthi Suresh: ಮಹಾನಟಿ (Mahanati) ಸಿನಿಮಾದಲ್ಲಿ ಲೆಜೆಂಡರಿ ನಟಿ ಸಾವಿತ್ರಿ ಪಾತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದವರು ನಟಿ ಕೀರ್ತಿ ಸುರೇಶ್ (Keerthi Suresh). ನೇನು ಶೈಲಜಾ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಈ ನಟಿ ತಮಿಳು ಮತ್ತು ಮಲೆಯಾಳಂ ಸಿನಿಮಾಗಳಲ್ಲಿ ಸಹಾ ನಟಿಸಿದ್ದಾರೆ. ಟಾಲಿವುಡ್ ಗೆ ಎಂಟ್ರಿ ಕೊಟ್ಟ ದಿನಗಳಲ್ಲಿ ನಟಿ ಅನುಪಮಾ ಪರಮೇಶ್ವರನ್ ಮತ್ತು ಕೀರ್ತಿ ಸುರೇಶ್ ಇಬ್ಬರೂ ಕೂಡಾ ಬೋಲ್ಡ್ ಡ್ರೆಸ್ ಹಾಕಲ್ಲ, ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಲ್ಲ ಎನ್ನುವ ಷರತ್ತುಗಳನ್ನು ಹಾಕಿಕೊಂಡಿದ್ದರು.
ಆದರೆ ಅನುಪಮಾ ಆ ರೂಲ್ ನ ಬ್ರೇಕ್ ಮಾಡಿಕೊಂಡು ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇನ್ನು ಕೀರ್ತಿ ಸುರೇಶ್ ಅವರು ದೊಡ್ಡ ಸ್ಟಾರ್ ಗಳ ಸಿನಿಮಾಗಳಲ್ಲಿ ನಟಿಸಿದರೂ ನಟಿಗೆ ಅಷ್ಟಾಗಿ ಆಫರ್ ಗಳು ಸಿಗುತ್ತಿರಲಿಲ್ಲ ಅನ್ನೋದು ಕೂಡಾ ವಾಸ್ತವದ ವಿಚಾರವಾಗಿತ್ತು.
ಈಗ ಕೀರ್ತಿ ಸುರೇಶ್ ಕೂಡಾ ತಾವೇ ಹಾಕಿಕೊಂಡಿದ್ದ ಷರತ್ತುಗಳ ಬೇಲಿಯಿಂದ ಹೊರಗೆ ಬಂದಂತೆ ಕಾಣುತ್ತಿದೆ. ನಟಿ ಬಾಲಿವುಡ್ ನಲ್ಲಿ (Bollywood) ವರುಣ್ ಧವನ್ (Varun Dhawan) ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಹಾ ಹೊಸ ಬೋಲ್ಡ್ ಲುಕ್ ಮೂಲಕ ಅಭಿಮಾನಿಗಳಿಗೆ ಅಚ್ಚರಿಯನ್ನು ಮೂಡಿಸಿದ್ದಾರೆ.
ಈಗ ಇವೆಲ್ಲವುಗಳ ಬೆನ್ನಲ್ಲೇ ಮತ್ತೊಂದು ಶಾಕ್ ನೀಡಿದ್ದಾರೆ ಕೀರ್ತಿ ಸುರೇಶ್. ಬಾಲಿವುಡ್ ನಲ್ಲಿ ಬೇಬಿ ಜಾನ್ ಸಿನಿಮಾದಲ್ಲಿ ನಟಿಸುತ್ತಿರುವ ಈ ನಟಿ ಈಗ ನಾಯಕ ವರುಣ್ ಧವನ್ ಜೊತೆಗೆ ಲಿಪ್ ಲಾಕ್ (Lip Lock)ಮಾಡ್ತಾರೆ ಅನ್ನೋ ವಿಷಯ ಸುದ್ದಿಯಾಗಿದೆ. ಬಾಲಿವುಡ್ ಸಿನಿಮಾಗಳಲ್ಲಿ ಚುಂಬನ ಅನ್ನೋದು ತೀರಾ ಸಾಮಾನ್ಯ ಆಗಿದೆ.
ಬೇಬಿ ಜಾನ್ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕ ಮೊದಲೇ ಕೀರ್ತಿ ಅವರಿಗೆ ಇಂತಹ ಸೀನ್ ಮಾಡಬೇಕಾಗುತ್ತೆ ಅನ್ನೋ ಷರತ್ತನ್ನ ವಿಧಿಸಿದ್ದರು ಎನ್ನಲಾಗಿದ್ದು, ಬಾಲಿವುಡ್ ನಲ್ಲಿ ಮಿಂಚೋದಕ್ಕೆ ನಿರ್ಣಯ ಮಾಡಿರೋ ಕೀರ್ತಿ ಅದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಬೇಬಿ ಜಾನ್ ಸಿನಿಮಾವನ್ನ ಆ್ಯಟ್ಲಿ ನಿರ್ದೇಶನ ಮಾಡ್ತಾ ಇದ್ದಾರೆ.