Jhanvi Kapoor: ಒಬ್ಬೊಬ್ಬರಿಗೂ ಒಂದೊಂದು ರೇಟ್ ಫಿಕ್ಸ್; ಬಾಲಿವುಡ್ ಮಂದಿ ಬಗ್ಗೆ ಶ್ರೀದೇವಿ ಮಗಳ ಶಾಕಿಂಗ್ ಮಾತು

Written by Soma Shekar

Published on:

---Join Our Channel---

Jhanvi Kapoor: ಭಾರತೀಯ ಸಿನಿಮಾ ರಂಗದಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡಿರುವ, ದಕ್ಷಿಣ ಸಿನಿಮಾಗಳು ಮಾತ್ರವೇ ಅಲ್ಲದೆ ಬಾಲಿವುಡ್ ನಲ್ಲೂ ತನ್ನ ಛಾಪನ್ನ ಮೂಡಿಸಿ ಹೋಗಿರುವ ದಿವಂಗತ ನಟಿ ಶ್ರೀದೇವಿ (Sridevi) ಅವರ ಮಗಳು ಜಾನ್ವಿ ಕಪೂರ್ (Jhanvi Kapoor) ಪ್ರಸ್ತುತ ಬಾಲಿವುಡ್ ಮತ್ತು ತೆಲುಗು ಸಿನಿಮಾಗಳಲ್ಲಿಯೂ ನಟಿಸುವ ಮೂಲಕ ಎರಡು ಕಡೆಗಳಲ್ಲಿ ಬೇಡಿಕೆಯನ್ನ ಪಡೆದುಕೊಂಡಿರುವ ನಟಿಯಾಗಿ ಬೆಳೆಯುತ್ತಿದ್ದಾರೆ. ಪ್ರಸ್ತುತ ಜಾನ್ವಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ತಮ್ಮ ಹೊಸ ಸಿನಿಮಾ ಮಿಸ್ಟರ್ ಅಂಡ್ ಮಿಸಸ್ ಮಹಿ (Mr & Mrs Mahi) ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಸಿನಿಮಾದ ಪ್ರಚಾರದ ಭಾಗವಾಗಿ ಮಾತನಾಡುವ ವೇಳೆಯಲ್ಲಿ ಬಾಲಿವುಡ್ (Bollywood) ಕುರಿತಾಗಿ ಜಾನ್ವಿ ಕಪೂರ್ ಸ್ಪೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ಮಂದಿಯ ಕುರಿತಾಗಿ ಜಾನ್ವಿ ಹೇಳಿರುವ ಮಾತುಗಳು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೆಲವೇ ದಿನಗಳ ಹಿಂದೆಯಷ್ಟೇ ದಕ್ಷಿಣದ ಸ್ಟಾರ್ ನಟಿ ಎನಿಸಿಕೊಂಡಿರುವ ಪ್ರಿಯಾಮಣಿಯವರು ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ಬಾಲಿವುಡ್ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿದ್ದರು.

ಬಾಲಿವುಡ್ ನಲ್ಲಿ ಸೆಲೆಬ್ರಿಟಿಗಳು ಹಣವನ್ನ ನೀಡುವ ಮೂಲಕ ಪಾಪರಾಜಿಗಳನ್ನು (Paparazzi) ಕರೆಸಿಕೊಂಡು ಫೋಟೋಗಳನ್ನು ತೆಗೆಸಿಕೊಳ್ಳುತ್ತಾರೆ, ನನಗೆ ಆ ವಿಚಾರ ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದರು. ಅಲ್ಲದೇ ಸೆಲೆಬ್ರಿಟಿಗಳು ಅಥವಾ ಅವರ ಪಿಆರ್ ಟೀಂ ಸೆಲೆಬ್ರಿಟಿಗಳು ಎಲ್ಲಿಗೆ ಹೋಗುತ್ತಾರೆ ಎನ್ನುವ ಮಾಹಿತಿಯನ್ನು ಪಾಪರಾಜಿಗಳಿಗೆ ಮೊದಲೇ ನೀಡುತ್ತಾರೆ ಹಾಗೂ ಪಾಪರಾಜಿಗಳು ಫೋಟೋಗಳನ್ನು ಕ್ಲಿಕ್ಕಿಸೋದಕ್ಕೆ ಆ ಸ್ಥಳಗಳಿಗೆ ಬರ್ತಾರೆ ಅನ್ನೋ ವಿಚಾರಗಳನ್ನ ಹಂಚಿಕೊಂಡಿದ್ದರು.

ಈಗ ಜಾನ್ವಿ ಇದೇ ವಿಚಾರವಾಗಿ ಮಾತನಾಡುತ್ತಾ, ನಾನು ಚಿತ್ರೀಕರಣಕ್ಕೆ ಹೋಗದೇ ಇದ್ದಾಗ, ನನ್ನ ವೈಯಕ್ತಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾಗ ಇವರೆಲ್ಲರ ಕಣ್ಣಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರಿಗೆ ನನ್ನ ಫೋಟೋ ಬೇಕು ಎಂದರೆ ನನ್ನ ಕಾರನ್ನ ಹಿಂಬಾಲಿಸಿಕೊಂಡು ಬರ್ತಾರೆ, ಕಷ್ಟಪಟ್ಟು ಫೋಟೋಗಳನ್ನು ತೆಗೆಯುತ್ತಾರೆ. ಏಕೆಂದರೆ ಫೋಟೋಗ್ರಾಫರ್ ಪ್ರತಿ ಫೋಟೋಗೆ ಇಷ್ಟು ಎಂದು ನಿಗದಿತವಾಗಿರುವ ಹಣವನ್ನು ಪಡೆದುಕೊಳ್ಳುತ್ತಾರೆ.

ಬಿ ಟೌನ್ ನಲ್ಲಿ ಪ್ರತಿಯೊಬ್ಬ ಸೆಲೆಬ್ರಿಟಿಗೂ ಒಂದೊಂದು ರೇಟ್ ಇದೆ. ಅವರು ಸ್ಟಾರ್ ಕಲಾವಿದರಾದರೆ ಅವರ ಫೋಟೋಗಳು ದೊಡ್ಡ ಮೊತ್ತಕ್ಕೆ ಮಾರಾಟ ಆಗುತ್ತದೆ. ನಿಮ್ಮ ಬೆಲೆ ಹೆಚ್ಚಿದ್ದರೆ ಪಾಪುರಾಜಿಗಳು ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ, ನಿಮ್ಮ ಕಾರನ್ನು ಹಿಂಬಾಲಿಸುತ್ತಾರೆ, ಫೋಟೋಗಳನ್ನು ತೆಗೆಯುತ್ತಾರೆ. ನೀವು ದೊಡ್ಡ ಸ್ಟಾರ್ ಅಲ್ಲದಿದ್ದರೆ ನೀವೇ ಅವರಿಗೆ ಕರೆ ಮಾಡಿ ಕರೆಸಿಕೊಳ್ಳಬೇಕಾಗುತ್ತದೆ, ಈ ರೀತಿ ಮಾಡುವವರು ಬಾಲಿವುಡ್ ನಲ್ಲಿದ್ದಾರೆಂದು ಜಾನ್ವಿ ಹೇಳಿದ್ದಾರೆ.

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯಕ್ಕೆ ಜಾನ್ವಿ ತೆಲುಗಿನ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಜೊತೆಗೆ ದೇವರ ಸಿನಿಮಾವನ್ನು ಮಾಡುತ್ತಿದ್ದಾರೆ. ಇದಲ್ಲದೇ ತೆಲುಗಿನ ಮತ್ತೊಬ್ಬ ಸ್ಟಾರ್ ನಟ ಎನಿಸಿಕೊಂಡಿರುವ ರಾಮಚರಣ್ ಅವರ ಮುಂದಿನ ಸಿನಿಮಾದಲ್ಲಿ ಜಾನ್ವಿ ನಾಯಕಿ ಎಂಬುದಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ತೆಲುಗು ಸಿನಿಮಾಗಳು ಮಾತ್ರವಲ್ಲದೇ ಬಾಲಿವುಡ್ ನಲ್ಲಿ ಒಂದಷ್ಟು ಹೊಸ ಪ್ರಾಜೆಕ್ಟ್ ಗಳಲ್ಲಿ ನಟಿ ತಮ್ಮನ ತಾವು ತೊಡಗಿಸಿಕೊಂಡಿದ್ದಾರೆ.

Leave a Comment