Actress Anjali: ವೇದಿಕೆ ಮೇಲೆಯೇ ತನ್ನನ್ನ ತಳ್ಳಿದ ನಟ ಬಾಲಕೃಷ್ಣ ಬಗ್ಗೆ ಅಂಜಲಿ ಶಾಕಿಂಗ್ ಟ್ವೀಟ್, ಬೆಚ್ಚಿ ಬಿದ್ದ ಫ್ಯಾನ್ಸ್

Written by Soma Shekar

Published on:

---Join Our Channel---

Actress Anjali: ಕಳೆದ ಎರಡು ದಿನಗಳಿಂದಲೂ ತೆಲುಗಿನ ಹಿರಿಯ ಜನಪ್ರಿಯ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಹೆಸರು ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಬಾಲಕೃಷ್ಣ ಅವರನ್ನು ಭರ್ಜರಿಯಾಗಿ ಟ್ರೋಲ್ ಮಾಡಲಾಗುತ್ತಿದ್ದು, ಇದೇ ವೇಳೆ ಕೆಲವರು ಬಾಲಕೃಷ್ಣ ಅವರ ವರ್ತನೆ ಕುರಿತಾಗಿ ತೀವ್ರವಾದ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಇತ್ತೀಚಿಗಷ್ಟೇ ಗ್ಯಾಂಗ್ಸ್ ಆಫ್ ಗೋದಾವರಿ (Gangs of Godavari) ಪ್ರೀ ರಿಲೀಸ್ ಇವೆಂಟ್ ನಲ್ಲಿ ಬಾಲಕೃಷ್ಣ ಅವರು ನಡೆದುಕೊಂಡ ವಿಧಾನವಾಗಿದೆ.

ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಈ ಸಿನಿಮಾದ ನಾಯಕಿ ಅಂಜಲಿ ಅವರ ಜೊತೆಗೆ ಬಾಲಕೃಷ್ಣ ನಡೆದುಕೊಂಡ ರೀತಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ನಟ ಬಾಲಕೃಷ್ಣ ಅವರು ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆ ಮೇಲೆ ಎಲ್ಲರೂ ಇರುವಾಗಲೇ ಬಾಲಕೃಷ್ಣ ಅವರು ನಟಿ ಅಂಜಲಿಯನ್ನ (Actress Anjali) ಪಕ್ಕಕ್ಕೆ ತಳ್ಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿ ಸುದ್ದಿಯಾಗಿದೆ.

ನಟ ಬಾಲಕೃಷ್ಣ ಅವರು ಟ್ರೋಲಾಗುತ್ತಿರುವ ಬೆನ್ನಲ್ಲೇ ನಟಿ ಅಂಜಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ, ಸಿನಿಮಾ ಸಮಾರಂಭದಲ್ಲಿ ಬಾಲಕೃಷ್ಣ ಮತ್ತು ತಾವು ತೆಗೆಸಿಕೊಂಡ ಫೋಟೋಗಳನ್ನು ವೀಡಿಯೋ ರೀತಿಯಲ್ಲಿ ಶೇರ್ ಮಾಡಿಕೊಂಡು ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ. ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಡೆದಂತಹ ಘಟನೆಯ ಬಗ್ಗೆ ಭೇಟಿ ಯಾವುದೇ ರೀತಿಯಲ್ಲಿ ಮಾತನಾಡಿಲ್ಲವಾದರೂ ಬೇರೆ ವಿಚಾರಗಳನ್ನು ಹೇಳಿದ್ದಾರೆ.

ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಪ್ರೀ ರಿಲೀಸ್ ಈವೆಂಟಿಗೆ ಬಾಲಕೃಷ್ಣ ಅವರು ಅತಿಥಿಯಾಗಿ ಆಗಮಿಸಿದ್ದಕ್ಕೆ ಧನ್ಯವಾದಗಳು. ನನಗೆ ಮತ್ತು ಬಾಲಕೃಷ್ಣ ಅವರಿಗೆ ಒಬ್ಬರ ಮೇಲೆ ಮತ್ತೊಬ್ಬರಿಗೆ ಪರಸ್ಪರ ಗೌರವ ಇದೆ. ನಾವು ಬಹಳ ಸಮಯದಿಂದಲೂ ಒಳ್ಳೆಯ ಸ್ನೇಹಿತರು. ಅವರ ಜೊತೆ ಮತ್ತೊಮ್ಮೆ ವೇದಿಕೆಯನ್ನ ಹಂಚಿಕೊಂಡಿದ್ದು ಅದ್ಭುತ ಅನಿಸಿತು ಎಂದು ನಟಿ ಬರೆದುಕೊಂಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರಿಗೆ ಪರೋಕ್ಷವಾಗಿ ನಟಿ ತಿರುಗೇಟು ನೀಡಿದ್ದಾರೆ.

Leave a Comment