Amulya : ಸ್ಯಾಂಡಲ್ವುಡ್ ನಟಿ, ಚೆಲುವಿನ ಚಿತ್ತಾರ ಬೆಡಗಿ ಅಮೂಲ್ಯ (Amulya) ಅವರಿಗೆ ಪ್ರತ್ಯೇಕ ಪರಿಚಯದ ಅಗತ್ಯವಂತೂ ಖಂಡಿತ ಇಲ್ಲವೇ ಇಲ್ಲ. ಸಿನಿಮಾಗಳ ಮೂಲಕ ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ನಟಿಯು ಬಹಳಷ್ಟು ಜನರ ಅಚ್ಚು ಮೆಚ್ಚಿನ ನಟಿಯಾಗಿ ಇಂದಿಗೂ ಅವರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ.
ಅಮೂಲ್ಯ ಅವರು ಕನ್ನಡದ ಯುವ ಸ್ಟಾರ್ ನಟರ ಜೊತೆಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ನಟಿಯಾಗಿದ್ದಾರೆ. ಅಮೂಲ್ಯ ಅವರು ತಮ್ಮ ಅಂದ ಮತ್ತು ಅಭಿನಯದ ಮೂಲಕ ಮೋಡಿ ಮಾಡಿದ್ದರು.
ಸಿನಿಮಾ ರಂಗದಲ್ಲಿ ಬೇಡಿಕೆ ಇರುವಾಗಲೇ ನಟಿ ಜಗದೀಶ್ ಅವರ ಜೊತೆಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಅನಂತರ ನಟಿ ಸಿನಿಮಾಗಳಲ್ಲಿ ನಟಿಸಲಿಲ್ಲ. ಇಬ್ಬರು ಅವಳಿ ಮಕ್ಕಳ ತಾಯಾಗಿ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟಿಯು ಆಗಾಗ ವಿಶೇಷ ದಿನಗಳ, ವಿಶೇಷ ಆಚರಣೆಗಳ ಫೋಟೋಗಳನ್ನು ಶೇರ್ ಮಾಡುತ್ತಾ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ, ಅವರಿಗೆ ಖುಷಿಯನ್ನು ನೀಡುತ್ತಾರೆ.
ಅಮೂಲ್ಯ ಅವರು ಈಗ ತಮ್ಮ ಅವಳಿ ಮಕ್ಕಳ ಜನ್ಮದಿನವನ್ನು ಬಹಳ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಿದ್ದು ಈ ಸುಂದರ ಕ್ಷಣಗಳ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಮೂಲ್ಯ ಮತ್ತು ಜಗದೀಶ್ ದಂಪತಿಯು ತಮ್ಮ ಮುದ್ದು ಮಕ್ಕಳಾದ ಅಥರ್ವ್ ಮತ್ತು ಆದವ್ ಜನ್ಮದಿನವನ್ನು ಬಹಳ ಖುಷಿಯಿಂದ ಸಂಭ್ರಮಿಸಿದ್ದಾರೆ. ಇಬ್ಬರು ಮಕ್ಕಳೊಟ್ಟಿಗೆ ಕೇಕ್ ಕತ್ತರಿಸಿ ಜನ್ಮದಿನವನ್ನು ಆಚರಿಸಿದ್ದಾರೆ.
ಅಮೂಲ್ಯ ಅವರು ತಮ್ಮ ಪೋಸ್ಟ್ ನಲ್ಲಿ
ನೀವಿಬ್ಬರೂ ನಾನು ಪ್ರಾರ್ಥಿಸಿ ಪಡೆದಿರುವ ಮಕ್ಕಳು .. ನೀವಿಬ್ಬರೂ ನನ್ನೊಂದಿಗೆ ಕಾಳಜಿ ವಹಿಸಿದ್ದೀರಿ, ಮುಗುಳ್ನಕ್ಕಿರುವಿರಿ ಮತ್ತು ಅತ್ತಿರುವಿರಿ. ನೀವು ವಿಷಯಗಳನ್ನು ಸರಿಯಾದ ರೀತಿಯಲ್ಲಿ ಕಲಿಯುವಂತೆ ಮಾಡುವ ಪ್ರಕ್ರಿಯೆಯಲ್ಲಿ ನಾನು ಕೆಲವೊಮ್ಮೆ ಕಟ್ಟುನಿಟ್ಟಾಗಿರುತ್ತೇನೆ ..
ನಾನು ಮುದ್ದಿಸುವುದಿಲ್ಲ, ನೀವು ಭೌತಿಕ ವಿಷಯಗಳೊಂದಿಗೆ, ನಿಮ್ಮ ಮೇಲಿನ ನನ್ನ ಪ್ರೀತಿಯನ್ನು ನಾನು ತೋರಿಸುವ ಏಕೈಕ ಮಾರ್ಗವೆಂದರೆ ನಿಮಗಾಗಿ 24/7 ಸಮಯವನ್ನು ನೀಡುವುದು .. ನೀವು ಒಳ್ಳೆಯ ಮನುಷ್ಯರಾಗಿ, ಒಂದು ದಿನ ನನ್ನನ್ನು ಹೆಮ್ಮೆಪಡುವಂತೆ ಮಾಡುವಿರಿ ಎಂದು ಭಾವಿಸುತ್ತೇವೆ .. ನಿಮ್ಮಿಬ್ಬರನ್ನೂ ಸದಾ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.