Vicky Kaushal : ರಶ್ಮಿಕಾ ಅದ್ಭುತ ವ್ಯಕ್ತಿ ಎಂದು ಹಾಡಿ ಹೊಗಳಿ ಒಂದಷ್ಟು ಆಸಕ್ತಿಕರ ವಿಚಾರ ತಿಳಿಸಿದ ವಿಕ್ಕಿ ಕೌಶಲ್

Written by Soma Shekar

Published on:

---Join Our Channel---

Vicky Kaushal : ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯಕ್ಕಂತೂ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಭರ್ಜರಿ ಜನಪ್ರಿಯತೆ ಪಡೆದಿದ್ದಾರೆ.‌ ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದೀಗ ಒಂದು ಸಂದರ್ಶನದಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್ ನಟಿ ರಶ್ಮಿಕಾ ಅವರನ್ನು ಹಾಡಿ ಹೊಗಳಿ ನಟಿಯ ಅಭಿಮಾನಿಗಳ ಮನಸ್ಸನ್ನ ಗೆದ್ದಿದ್ದಾರೆ.

ಹೌದು, ವಿಕ್ಕಿ ಕೌಶಲ್ (Vicky Kaushal) ಅವರು ರಶ್ಮಿಕಾ ಅವರನ್ನು ಒಬ್ಬ ಅದ್ಭುತ ವ್ಯಕ್ತಿ ಅಂತ ಹಾಡಿ ಹೊಗಳಿದ್ದಾರೆ. ಬಾಲಿವುಡ್ ನ ಚಾವಾ’ ಹೆಸರಿನ ಬ ಸಿನಿಮಾದಲ್ಲಿ ರಶ್ಮಿಕಾ ವಿಕ್ಕಿ ಕೌಶಲ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಒಟ್ಟಿಗೆ ನಟಿಸಿದ ತಮ್ಮ ಅನುಭವ ಹೇಗಿತ್ತು ಎನ್ನುವುದನ್ನು ವಿಕ್ಕಿ ಕೌಶಲ್ ತಿಳಿಸುತ್ತಾ ನಟಿಗೆ ಮೆಚ್ಚುಗೆಗಳನ್ನು ನೀಡಿದ್ದಾರೆ.

ವಿಕ್ಕಿ ಮಾತನಾಡುತ್ತಾ, ರಶ್ಮಿಕಾ ಒಬ್ಬ ಅದ್ಭುತ ವ್ಯಕ್ತಿ ಅವರನ್ನು ನಾನು ಯಾವಾಗ ಭೇಟಿಯಾದರೂ ಅವರು ಸದಾ ಪಾಸಿಟಿವಿಯಿಂದ ಇರುತ್ತಾರೆ ಎಂದು ಹೇಳಿದ್ದಾರೆ. ಸೆಟ್ ನಲ್ಲೂ ಪಾಸಿಟಿವ್ ಆಗಿರುತ್ತಾರೆ, ಕೆಲಸದಲ್ಲಿ ಬೆಂಬಲ ನೀಡುತ್ತಾರೆ. ನಾನು ರಶ್ಮಿಕಾ ಜೊತೆ ಕೆಲಸ ಮಾಡುವಾಗ ಉತ್ತಮ ಸಮಯ ಕಳೆದಿದ್ದೇನೆ ಎಂದು ವಿಕ್ಕಿ ಹೇಳಿಕೊಂಡಿದ್ದಾರೆ.

ಛತ್ರಪತಿ ಸಾಂಬಾಜಿ ಕುರಿತಾದ ಸಿನಿಮಾ ಚಾವಾ ಆಗಿದ್ದು, ಇದರಲ್ಲಿ ರಶ್ಮಿಕಾ‌ ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಕೆಲವು ಸಂಭಾಷಣೆಗಳು ಮರಾಠಿಯಲ್ಲೇ ಇರುವುದರಿಂದ ನಟಿ ಅದಕ್ಕಾಗಿ ನಾಲ್ಕು ವಾರಗಳ ವಿಶೇಷ ತರಬೇತಿಯನ್ನು ಪಡೆದು ಮರಾಠಿ ಮಾತನಾಡುವುದನ್ನು ಅಭ್ಯಾಸ ಮಾಡಿದ್ದರು.

Bigg Boss Kannnada: ಬಿಗ್ ಬಾಸ್ ಫಸ್ಟ್ ಪ್ರೊಮೊ ಬಿಡುಗಡೆ ಮುಹೂರ್ತ ಫಿಕ್ಸ್, ಹೈದ್ರಾಬಾದ್ ನಲ್ಲಿ ನಡೆದ ಶೂಟಿಂಗ್

Leave a Comment