Prabhas: ಸ್ವಾತಂತ್ರ್ಯ ಹೋರಾಟಗಾರ ಆಗಲಿರೋ ಪ್ರಭಾಸ್, ಹೊಸ ಸುದ್ದಿ ಕೇಳಿ ಬೆಚ್ಚಿದ ಸಿನಿಮಾ‌ ರಂಗ, ಹೊಸ ಸಂಚಲನ

Written by Soma Shekar

Published on:

---Join Our Channel---

Prabhas: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದ ಕಲ್ಕಿ (Kalki 2898 AD) ಸಿನಿಮಾ ದೊಡ್ಡ ಯಶಸ್ಸನ್ನು ಪಡೆದುಕೊಂಡಿದೆ. ಕಲೆಕ್ಷನ್ ವಿಚಾರದಲ್ಲೂ ಸಿನಿಮಾ ಅಬ್ಬರಿಸಿದೆ. ಈಗ ಪ್ರಭಾಸ್ ಅಭಿಮಾನಿಗಳ ಗಮನ ಮಾತ್ರ ನಟನ ಮುಂದಿನ ಸಿನಿಮಾಗಳ ಕಡೆಗೆ ಹೊರಳಿದೆ. ಅಂತಹ ಸಿನಿಮಾಗಳಲ್ಲಿ ಪ್ರಭಾಸ್ ಮತ್ತು ಹನು ರಾಘವಪುಡಿ (Hanu Raghavapudi) ಸಿನಿಮಾ ಕೂಡಾ ಒಂದಾಗಿದೆ.

ಪ್ರಭಾಸ್ ಅವರ ಈ ಹೊಸ ಸಿನಿಮಾದ ಒಂದಷ್ಟು ಅಪ್ಡೇಟ್ ಗಳು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಸೋರಿಕೆಯಾಗ್ತಿದೆ ಮತ್ತು ಎಲ್ಲರ ಕುತೂಹಲವನ್ನು ಇದು ಕೆರಳಿಸುತ್ತಿದೆ. ಈ ವಿಷಯಗಳನ್ನು ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗ್ತಿದ್ದಾರೆ.

ಈಗ ಈ ಸಿನಿಮಾದ ಹೊಸದೊಂದು ಅಪ್ಡೇಟ್ ಹೊರ ಬಂದಿದ್ದು, ಇದಂತೂ ಅಭಿಮಾನಿಯಳು ಹಾಗೂ ಸಿನಿ ಪ್ರೇಮಿಗಳ ವಲಯದಲ್ಲೊಂದು ಹೊಸ ಸಂಚಲನ ಸೃಷ್ಟಿಸಿದ್ದು, ಈ ಸಿನಿಮಾದಲ್ಲಿ ಪ್ರಭಾಸ್ ಸುಭಾಷ್ ಚಂದ್ರ ಬೋಸ್ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಕೆಲವೊಂದು ಸುದ್ದಿಗಳ ಪ್ರಕಾರ ಈ ಸಿನಿಮಾ ಸುಭಾಷ್ ಚಂದ್ರ ಬೋಸ್ ಅವರ ಜೀವನವನ್ನು ಆಧರಿಸಿದ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಹರಡಿರುವ ಈ ಸುದ್ದಿಯ ಸತ್ಯ ಎಷ್ಟು ಎನ್ನುವುದು ಇನ್ನೂ ಹೊರ ಬಂದಿಲ್ಲವಾದರೂ ಸದ್ಯಕ್ಕೆ ಕುತೂಹಲ ಮೂಡಿಸಿದೆ.

ಈ ಸಿನಿಮಾದಲ್ಲಿ ಮೃಣಾಲ್ ಠಾಕೂರ್ (Mrunal Thakur) ಅವರು ನಾಯಕಿಯಾಗಲಿದ್ದಾರೆ ಎನ್ನಲಾಗಿದೆ. ಪ್ರಭಾಸ್ ಕೈಯಲ್ಲಿ ಸದ್ಯ ಮೂರ್ನಾಲ್ಕು ಸಿನಿಮಾಗಳಿದ್ದು, ಅವರ ರಾಜಾ‌ಸಾಬ್ ಸಿನಿಮಾ ಮುಂದಿನ ವರ್ಷದ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

Actor Chethan: ಮೋದಿ ಬಗ್ಗೆ ಪ್ರಕಾಶ್ ರೈ ವ್ಯಂಗ್ಯ ಪೋಸ್ಟ್, ಇದು ಸಣ್ಣತನ ಎಂದು ನಟ ಚೇತನ್ ದಿಟ್ಟ ಪ್ರತಿಕ್ರಿಯೆ

Leave a Comment