Actor Jaggesh: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಬಂಧನವಾದ ಮೇಲೆ ರಾಜ್ಯದಲ್ಲಿ ಇದೇ ವಿಷಯ ಬಹಳ ದೊಡ್ಡ ಚರ್ಚೆಯ ವಿಷಯವಾಗಿ ಬದಲಾಗಿದೆ. ಸೋಶಿಯಲ್ ಮೀಡಿಯಗಳಲ್ಲಿ ಒಂದು ಕಡೆ ನಟನ ಅಭಿಮಾನಿಗಳಲ್ಲಿ ಕೆಲವರು ಇದನ್ನು ವಿರೋಧ ಮಾಡಿದರೆ ಮತ್ತೊಂದು ಕಡೆ ಇನ್ನೊಂದು ಅಭಿಮಾನಿಗಳ ಗುಂಪು ನಟನ ಪರವಾಗಿ ನಿಂತಿದ್ದಾರೆ. ಆದರೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಮಾತ್ರ ಇದರಲ್ಲಿ ಈ ವಿಚಾರವಾಗಿ ಮೌನ ವಹಿಸಿದ್ದಾರೆ.
ಆದರೆ ಕೆಲವೊಬ್ಬರು ಸೆಲೆಬ್ರಿಟಿಗಳು ನಿಧಾನವಾಗಿ ಮೌನ ಮುರಿಯುತ್ತಿದ್ದಾರೆ. ಸ್ಯಾಂಡಲ್ವುಡ್ ನ ಹಿರಿಯ ನಟ ಜಗ್ಗೇಶ್ (Actor Jaggesh) ಅವರು ಟ್ವೀಟ್ ಒಂದನ್ನು ಮಾಡಿದ್ದು ಅದು ಎಲ್ಲರ ಗಮನವನ್ನು ಸೆಳೆದಿದೆ. ಅಲ್ಲದೇ ಈ ಟ್ವೀಟ್ ಈಗ ಚರ್ಚೆಗೆ ಕಾರಣವಾಗಿದೆ. ನಟ ತಮ್ಮ ಟ್ವೀಟ್ ನಲ್ಲಿ, ಸರ್ವಆತ್ಮಾನೇನಬ್ರಹ್ಮ ಸರ್ವ ಜೀವಿಯಲ್ಲಿ ದೇವರಿದ್ದಾನೆ, ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ! ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ.
ಅವನ ಪಾಪಕರ್ಮ ಅವನ ಸುಡುತ್ತದೆ!
ಕಲಿಯುಗದಲ್ಲಿ ದೇವರು ಕಲ್ಲಲ್ಲಾ, ಎಲ್ಲಾ ಕರ್ಮಕ್ಕು ತತಕ್ಷಣ ಪಲಿತಾಂಶ ಉಂಟು! ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲಾ! ಎನ್ನುವ ಸಾಲುಗಳನ್ನು ಬರೆದುಕೊಂಡಿದ್ದಾರೆ. ಜಗ್ಗೇಶ್ ಅವರು ನೇರವಾಗಿ ದರ್ಶನ್ ಅವರ ಹೆಸರನ್ನು ಪ್ರಸ್ತಾಪ ಮಾಡಿಲ್ಲವಾದರೂ, ಘಟನೆಯನ್ನು ಖಂಡಿಸಿರುವುದು ಸ್ಪಷ್ಟವಾಗಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟ ಜಗ್ಗೇಶ್ ಅವರು ಹಲವು ವಿಚಾರಗಳ ಕುರಿತಾಗಿ ತಮ್ಮ ನಿಲುವನ್ನು ಇಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ರಾಮ ಮತ್ತು ರಾವಣನ ಉದಾಹರಣೆ ನೀಡುತ್ತಲೇ ಕಲಿಯುಗದಲ್ಲಿ ದೇವರು ಕಲ್ಲಲ್ಲ ಇಲ್ಲಿ ಎಲ್ಲಾ ಕರ್ಮಗಳಿಗೂ ತಕ್ಷಣವೇ ಫಲಿತಾಂಶ ಸಿಗುವುದು ಎನ್ನುವ ಮಾತುಗಳನ್ನು ಆಡಿದ್ದಾರೆ.