Lakshmi Nivasa: ಲಕ್ಷ್ಮೀ ನಿವಾಸದಲ್ಲಿ ಪ್ರೇಕ್ಷಕರ ಮೇಲೆ ಮೋಡಿ ಮಾಡ್ತಿದ್ದಾರೆ ರಿಯಲ್ ಲೈಫ್ ಅಮ್ಮ ಮಗ

Written by Soma Shekar

Published on:

---Join Our Channel---

Lakshmi Nivasa: ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿರುವ ಲಕ್ಷ್ಮೀ ನಿವಾಸ (Lakshmi Nivasa) ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಪ್ರೇಕ್ಷಕರ ಅಚ್ಚು ಮೆಚ್ಚಿನ ಧಾರಾವಾಹಿಯಾಗಿದೆ.‌ ಈ ಸೀರಿಯಲ್ ನಲ್ಲಿ ಗ್ರಾಮೀಣ ಶೈಲಿಯಲ್ಲಿ ಅರಳು ಹುರಿದಂತೆ ಪಟಪಟನೆ ಮಾತನಾಡುವ ಸಿದ್ಧೇಗೌಡ್ರ ಪಾತ್ರ ಅನೇಕರಿಗೆ ಈಗ ಫೇವರಿಟ್ ಪಾತ್ರವಾಗಿದೆ. ಸಿದ್ಧೇಗೌಡ್ರ ಪಾತ್ರಕ್ಕೆ ಜೀವ ತುಂಬಿರುವ ನಟನ ನಟನೆಯನ್ನು ನೋಡಿ ಅನೇಕರು ಮೋಡಿಗೊಳಗಾಗಿದ್ದಾರೆ. ಭಾವನಾ ಮತ್ತು ಸಿದ್ಧೇಗೌಡ್ರ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ ಅಂದ್ರೆ ತಪ್ಪಲ್ಲ.‌

ಸಿದ್ಧೇಗೌಡ್ರ ಪಾತ್ರವನ್ನು ನೋಡಿದ ಮೇಲೆ ಬಹಳಷ್ಟು ಜನ ಪ್ರೇಕ್ಷಕರು, ಯಾರು ಈ ನಟ? ನಟನೆಗೆ ಇವರು ಹೊಸಬರಾ? ಇವರ ತಂದೆ ತಾಯಿ ಯಾರು? ಎಂದೆಲ್ಲಾ ತಿಳಿಯುವ ಆಸಕ್ತಿಯನ್ನು ಖಂಡಿತ ಹೊಂದಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸಿದ್ಧೇಗೌಡ್ರ ಪಾತ್ರವನ್ನು ಮಾಡ್ತಿರೋ ನಟನ ಹೆಸರು ಧನಂಜಯ್ (Dhananjay), ಶಾರ್ಟ್ ಆಗಿ ಡಿಜೆ ಅಂತ ಕೂಡಾ ಇವ್ರು ಫೇಮಸ್. ಸೋಶಿಯಲ್ ಮೀಡಿಯಾದಲ್ಲಿ ಕೂಡಾ ಸಕ್ರಿಯರಾಗಿದ್ದಾರೆ ಧನಂಜಯ್ ಅವರು.

ಧನಂಜಯ್ ಅವರು ಈ ಸೀರಿಯಲ್ ಗಿಂತ ಮೊದಲೇ ಕೆಲವು ಸಿನಿಮಾಗಳು ಮತ್ತು ಶಾರ್ಟ್ ಫಿಲ್ಮ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ ಧನಂಜಯ್ ಅವರ ತಾಯಿ ಸಹಾ ಜನಪ್ರಿಯ ಕಲಾವಿದೆಯಾಗಿದ್ದಾರೆ. ಅವರು ಸಹಾ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಚ್ಚರಿಯ ವಿಷಯ ಏನೆಂದರೆ ಧನಂಜಯ್ ಅವರ ತಾಯಿ ಕೂಡಾ ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.

ಹೌದು, ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಹೂವು ಮಾರುವ ಹುಡುಗಿಯಾದ ಚೆಲುವಿಯ ತಾಯಿಯ ಪಾತ್ರದಲ್ಲಿ ಧನಂಜಯ್ ಅವರ ತಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರೇ ಹಿರಿಯ ನಟಿ ಅನ್ನಪೂರ್ಣ (Annapoorna) ಅವರು. ಎಷ್ಟೋ ಜನರಿಗೆ ಅವರು ಧನಂಜಯ್ ಅವರ ರಿಯಲ್ ಲೈಫ್ ತಾಯಿ ಅನ್ನೋ ವಿಚಾರವೇ ಗೊತ್ತಿಲ್ಲ.‌ ಒಟ್ನಲ್ಲಿ ಅಮ್ಮ ಮಗ ಇಬ್ಬರೂ ಒಂದೇ ಸೀರಿಯಲ್ ನಲ್ಲಿ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ.

Leave a Comment