Vijay Rashmika : ಗಾಸಿಪ್ ಎಷ್ಟೇ ಆದ್ರೂ ಚಿಂತೆ ಇಲ್ಲ, ಯಾಕಂದ್ರೆ ನಿಜ ಬೇರೇನೇ ಇದೆ; ವಿಜಯ್ ರಶ್ಮಿಕಾ ಔಟಿಂಗ್

Written by Soma Shekar

Published on:

---Join Our Channel---

Vijay Rashmika : ಟಾಲಿವುಡ್​​ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Vijay Rashmika) ನಡುವೆ ಸ್ನೇಹಕ್ಕಿಂತ ಹೆಚ್ಚಾಗಿ ಬೇರೆ ಏನೋ ಇದೆ ಎನ್ನುವುದಾಗಿ ಆಗಾಗ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ. ಅಲ್ಲದೇ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಅಂತ ಕೂಡಾ ಹೇಳಲಾಗುತ್ತದೆ. ಈಗ ಇದೆಲ್ಲವುಗಳ ನಡುವೆ ಇತ್ತೀಚೆಗೆ ವಿಜಯ್ ಮತ್ತು ರಶ್ಮಿಕಾ ಔಟಿಂಗ್ ಗೆ ಹೋಗಿದ್ದ ವಿಚಾರ ಸಹಾ ಎಲ್ಲರ ಮುಂದೆ ಬಂದಿದೆ.

ಇಬ್ಬರೂ ಜೊತೆಯಾಗಿ ರೆಸ್ಟೋರೆಂಟ್‌ನಲ್ಲಿ ಕೂತು ಊಟ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಬಹು ದಿನಗಳ ನಂತರ ವಿಜಯ್ ದೇವರಕೊಂಡ ಮತ್ತು ನ್ಯಾಶನಲ್ ಕ್ರಶ್ ರಶ್ಮಿಕಾ ಮತ್ತೊಮ್ಮೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಒಟ್ಟಿಗೆ ಕುಳಿತಿರುವ ಫೋಟೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

ಕಳೆದ ಒಂದಷ್ಟು ವರ್ಷಗಳಿಂದಲೂ ಕೂಡಾ ರಶ್ಮಿಕಾ ಮತ್ತು ವಿಜಯ ದೇವರಕೊಂಡ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳಾಗುತ್ತಲೇ ಬರುತ್ತವೆ. ಮಧ್ಯದಲ್ಲಿ ಒಮ್ಮೆ ಇಬ್ಬರೂ ಮೊದಲಿನ ಹಾಗೆ ಇಲ್ಲ. ಅವರ ನಡುವೆ ಇದ್ದ ಸ್ನೇಹ ಕೂಡಾ ಹಿಂದಿನಂತೆ ಉಳಿದಿಲ್ಲ ಎಂಬುದಾಗಿ ಸುದ್ದಿಯಾಗಿತ್ತು. ಅಲ್ಲದೇ ವಿಜಯ್ ಹೆಸರು ಬೇರೆ ನಟಿಯೊಬ್ಬರ ಜೊತೆಗೆ ತಳಕು ಹಾಕಿಕೊಂಡಿತ್ತು.

ಆದರೆ ಈಗ ವೈರಲ್ ಫೋಟೋ ನೋಡಿದ ನಂತರ ಹರಡಿದ್ದ ಗಾಳಿ ಸುದ್ದಿಗಳಿಗೆ ಬ್ರೇಕ್ ಬಿದ್ದಿದೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವಿನ ಸ್ನೇಹದಲ್ಲಿ ಯಾವುದೇ ವ್ಯತ್ಯಾಸ ಆಗಿಕ್ಲ ಎನ್ನುವುದಕ್ಕೆ ಸ್ಪಷ್ಟನೆ ಸಿಕ್ಕಿದೆ. ಅದೇ ವೇಳೆ ಇವರ ನಡುವೆ ಇರುವುದು ಸ್ನೇಹ ಮಾತ್ರವೇನಾ? ಅದಕ್ಕೂ ಮೀರಿ ಬೇರೆ ಏನಾದರೂ ಇದೆಯಾ? ಅನ್ನೋದಕ್ಕೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ.

Leave a Comment