Bhagya Lakshmi : ಯಾವುದೇ ಸೀರಿಯಲ್ ಆದರೂ ಕಥೆಯಲ್ಲಿ ಅವಶ್ಯಕತೆ ಇದೆ ಎಂದಾಗ ಎಮೋಷನಲ್ ಸೀನ್ ಗಳನ್ನ ಮಾಡಲಾಗುತ್ತದೆ. ಇಂತಹ ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರ ಮೇಲೆ ಅಪಾರವಾದ ಪರಿಣಾಮವನ್ನು ಬೀರುತ್ತದೆ. ಆದರೆ ಈಗ ಒಂದು ಭಾವನಾತ್ಮಕ ಸನ್ನಿವೇಶವನ್ನು ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾಗಳಲ್ಲಿ ಹಿಗ್ಗಾ ಮುಗ್ಗಾ ಕಾಮೆಂಟ್ ಗಳನ್ನು ಮಾಡಿ ಸೀರಿಯಲ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ. ಇದು ಬೇರಾವುದೋ ಸೀರಿಯಲ್ ಅಲ್ಲ ಕಳೆದ ಮೂರ್ನಾಲ್ಕು ದಿನಗಳಿಂದ ಕಣ್ಣೀರಿನ ಹೊಳೆ ಹರಿಯುತ್ತಿರುವ ಭಾಗ್ಯಲಕ್ಷ್ಮೀ (Bhagya Lakshmi) ಸೀರಿಯಲ್ ಆಗಿದೆ.
ತನ್ನ ಗಂಡನಿಗೆ ಇರುವ ಮತ್ತೊಂದು ಅಫೇರ್ ಬಗ್ಗೆ ತಿಳಿದಾದ ಮೇಲೆ ಭಾಗ್ಯ ಮಳೆಯಲ್ಲಿ ನೆಂದು, ಕಣ್ಣೀರು ಹಾಕುತ್ತಾ ದೇವರ ಮುಂದೆ ಬಂದು ಗೋಳಾಡುತ್ತಾ ದೇವರನ್ನ ನೂರು ಪ್ರಶ್ನೆ ಮಾಡುತ್ತಿದ್ದಾಳೆ. ಆದರೆ ಪದೇ ಪದೇ ಅದೇ ಗೋಳನ್ನ ನೋಡಿದ ಪ್ರೇಕ್ಷಕರ ತಾಳ್ಮೆಯನ್ನೇ ಈ ದೃಶ್ಯಗಳು ಹಾಳು ಮಾಡುತ್ತಿದೆ ಎನ್ನುವುದು ಕಾಮೆಂಟ್ ಗಳಲ್ಲಿ ಬಹಳ ಸ್ಪಷ್ಟವಾಗಿ ಅರ್ಥವಾಗುತ್ತಿದೆ.
ನಟನೆ ಮಾಡಿಸಬೇಕು ಆದರೆ ಈ ರೇಂಜ್ ಗೆ ಒಂದು ದೃಶ್ಯವನ್ನು ಮಾಡೋದು ಸರಿ ಅಲ್ಲ. ಅದೊಂದು ಮುಗಿಯದ ಕಥೆ ಹಾಗೆ ಆಗಿ ಹೋಗಿದೆ. ಇದು ಭಾಗ್ಯ ಗೋಳಲ್ಲ ಇದನ್ನ ನೋಡೋದು ನಮಗೆ ಗೋಳು. ಕಣ್ಣಲ್ಲಿ ನೋಡೋಕಾಗ್ತಿಲ್ಲ, ಕಿವಿಲಿ ಕೇಳೋಕಾಗ್ತಿಲ್ಲ, ದಯವಿಟ್ಟು ಇದನ್ನ ಇಲ್ಲಿಗೆ ಮುಗಿಸಿ ಮುಂದೆ ಏನು ಅಂತ ತೋರ್ಸಿ ಎಂದು ಕೆಲವರು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಮತ್ತೆ ಕೆಲವರು ರೋಸಿ ಹೋಗಿ, ಈಕೆಯ ಓವರ್ ಆಕ್ಟಿಂಗ್ ನೋಡಿ ಸಾಕಾಗಿದೆ, ತಾಂಡವ & ಶ್ರೇಷ್ಠಾಳಿಗೆ ಮದುವೆ ಮಾಡಿಸಿ ನೀನು ಮಕ್ಕಳು,ಅತ್ತೆ ಮಾವ ಎಲ್ಲರೂ ಆರಾಮಾಗಿ ಇರಿ ಎಂದು ಕೂಡಾ ಕಾಮೆಂಟ್ ನಲ್ಲಿ ಸಲಹೆ ನೀಡಿದ್ದಾರೆ. ಒಟ್ನಲ್ಲಿ ಕಥೆ, ನಟನೆ ಅನ್ನೋ ಹೆಸರಲ್ಲಿ ಕಣ್ಣೀರನ್ನ ತೋರಿಸಿ ತೋರಿಸಿ ಪ್ರೇಕ್ಷಕರಿಗೆ ಬೋರ್ ಹೊಡೆಸುತ್ತಿದ್ದಾಳಾ ಭಾಗ್ಯಲಕ್ಷ್ಮೀ ಅನ್ನೋ ಅನುಮಾನ ಬರ್ತಿದೆ.
BBK 11 : ನಾನು ಸಿಂಗಲ್ ಸಿಂಹ, ಗ್ರೂಪ್ ಕಟ್ಕೊಂಡು ಆಡೋರಿಗೆ ಚೈತ್ರಾ ಕೊಟ್ರು ಖಡಕ್ ಎಚ್ಚರಿಕೆ