Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಗಾಗಿ (BBK 11) ಎರಡು ತಂಡಗಳ ರಚನೆಯಾಗಿದೆ. ಎರಡೂ ತಂಡಗಳಲ್ಲಿರುವ ಸದಸ್ಯರು ತಮಗೆ ಕೊಟ್ಟಿರುವ ಪಾಯಿಂಟ್ಸ್ ಗಳನ್ನ ಜೋಪಾನವಾಗಿ ಕಾಪಾಡಿಕೊಳ್ಳಬೇಕಾಗಿದ್ದು, ಎಲ್ಲರೂ ಸಾಕಷ್ಟು ಎಚ್ಚರಿಕೆಯಿಂದ ಇದ್ದಾರೆ. ಆದರೆ ಚೈತ್ರ ಕುಂದಾಪುರ (Chaithra Kundapura) ಅವರು ಸಾಕಷ್ಟು ಜಾಣ್ಮೆಯಿಂದ ಐಶ್ವರ್ಯ (Aishwarya) ಬಳಿ ಇದ್ದ ದುಡ್ಡನ್ನ ಉಢಾಯಿಸಿದ್ದಾರೆ. ಚೈತ್ರಾ ಅವರ ಈ ಮಾಸ್ಟರ್ ಗೇಮ್ ನೋಡಿ ಮನೆ ಮಂದಿಯಲ್ಲ ಶಾಕ್ ಆಗಿದ್ದಾರೆ. ಭವ್ಯ ಅವರ ತಂಡದವರು ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಆದರೆ ಈಗ ಐಶ್ವರ್ಯ ತಮ್ಮ ಕೈಯಿಂದ ಚೈತ್ರ ಕಿತ್ತುಕೊಂಡ ಹಣವನ್ನು ಹಿಂಪಡೆಯಲು ಪ್ಲಾನ್ ಮಾಡಿದ್ದಾರೆ. ಗೌತಮಿ (Gauthami) ಹಾಗೂ ಚೈತ್ರ ವಾಶ್ ರೂಂ ಗೆ ಹೋಗಿದ್ದು, ಈ ವೇಳೆ ಚೈತ್ರ ಗಟ್ಟಿಯಾಗಿ ಕಿರುಚುತ್ತಾ ಕಿತ್ತುಕೊಳ್ಳುವ ಹಾಗಿಲ್ಲ ಎಂದು ಹೊರಗೆ ಬಂದಿದ್ದಾರೆ. ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದ್ದಾರೆ, ಗುಂಪು ಕಟ್ಟಿಕೊಂಡು ಕುತಂತ್ರವನ್ನ ನಾನು ಮಾಡೋದಿಲ್ಲ. ಡ್ರಾಮಾ ಕ್ವೀನ್ ಯಾರು ಅಂತ ಗೊತ್ತಾಯ್ತು.
ಗುಂಪು ಕಟ್ಕೊಂಡು ಪ್ಲಾನ್ ಮಾಡ್ಕೊಂಡು ಬರಲ್ಲ, ನಙು ಸಿಂಗಲ್ ಸಿಂಹದ ತರ ಬರ್ತೀನಿ ಅಂತ ಚೈತ್ರ ಅವರು ತಮ್ಮ ಎದುರಾಳಿ ತಂಡದ ವಿರುದ್ಧ ಸಿಟ್ಟನ್ನ ಹೊರ ಹಾಕಿದ್ದಾರೆ. ಚೈತ್ರಾ ಅವರ ಮಾತುಗಳಿಂದ ಸಿಟ್ಟಾದ ಐಶ್ವರ್ಯ ಲೋ ಲೆವೆಲ್ ಅಂತ ಎಲ್ಲಾ ಹೇಳಬೇಡಿ. ಹೌದು ನಾನು ಡ್ರಾಮಾ ಕ್ವೀನ್ ಅಂತ ತಿರುಗೇಟನ್ನ ಕೊಟ್ಟಿದ್ದಾರೆ. ವಾಹಿನಿ ಶೇರ್ ಮಾಡಿರುವ ಪ್ರೊಮೋದಲ್ಲಿ ಚೈತ್ರ ಅವರಿಂದ ದುಡ್ಡು ಕಿತ್ತುಕೊಂಡಿರುವುದು ಕಂಡಿದೆ.
ಚೈತ್ರ ಅವರಿಂದ ಪ್ಲಾನ್ ಮಾಡಿ ದುಡ್ಡನ್ನ ಕಿತ್ತುಕೊಂಡು ಮತ್ತೊಂದು ತಂಡ ಬಹಳ ಸಂತೋಷದಿಂದ ಡ್ಯಾನ್ಸ್ ಮಾಡುತ್ತಿರುವುದನ್ನು ಪ್ರೊಮೊದಲ್ಲಿ ತೋರಿಸಲಾಗಿದೆ. ನಿನ್ನೆ ಟಾಸ್ಕ್ ನಲ್ಲಿ ಭವ್ಯ ಅವರ ತಂಡ ಗೆದ್ದಿದೆ. ಇವತ್ತು ಯಾವ ತಂಡ ಗೆಲ್ಲುತ್ತದೆ, ಹಣವನ್ನು ಗಳಿಸುತ್ತದೆ ಎನ್ನುವುದನ್ನ ಕಾದು ನೋಡಬೇಕಾಗಿದೆ. ಎಲ್ಲಾ ಟಾಸ್ಕ್ ಮುಗಿದ ಮೇಲೆ ಯಾರ ಬಳಿ ಹೆಚ್ಚು ಹಣ ಇರುತ್ತದೋ ಅವರು ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆಯಾಗಲಿದ್ದಾರೆ.