Viral Video : ತೀರ್ಥ ಅಂತ ಭ್ರಮಿಸಿ ಗುಡಿಯಲ್ಲಿ AC ನೀರನ್ನ ಕುಡಿದ ಭಕ್ತರು : ವೀಡಿಯೋ ವೈರಲ್

Written by Soma Shekar

Published on:

---Join Our Channel---

Viral Video : ದೇವಾಲಯಕ್ಕೆ (Temple) ಭೇಟಿ ನೀಡಿದಾಗ ಭಕ್ತರು ಅಲ್ಲಿ ತೀರ್ಥವನ್ನು ಸ್ವೀಕರಿಸಿದ ನಂತರ ಅದನ್ನ ತಲೆಗೆ ಚಿಮುಕಿಸಿಕೊಳ್ಳೋದು ಒಂದು ವಾಡಿಕೆಯಾಗಿದೆ.  ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದೇ ನಂಬಿಕೆ. ಆದರೆ ಉತ್ತರಪ್ರದೇಶದಲ್ಲಿ ನಡೆದ ಘಟನೆಯೊಂದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಹೌದು, ದೇಗುಲವೊಂದರಲ್ಲಿ ಭಕ್ತರು ಎಸಿ (AC) ನೀರನ್ನು ಜನರು ತೀರ್ಥ ಎಂದು ಭಾವಿಸಿ ಸರತಿ ಸಾಲಿನಲ್ಲಿ ನಿಂತುಕೊಂಡು ಸೇವಿಸಿದ ಘಟನೆ ನಡೆದಿದ್ದು, ವೀಡಿಯೋ ವೈರಲ್ (Viral Video) ಆಗುತ್ತಿದೆ.

ಮಥುರಾದಲ್ಲಿ ಇಂತದೊಂದು ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವಿವರಗಳಿಗೆ ಹೋದರೆ, ಮಥುರಾ (Mathura) ವೃಂದಾವನದ ಬಾಂಕೆ ಬಿಹಾರಿ ದೇಗುಲದಲ್ಲಿ ಇಂತದೊಂದು ಘಟನೆ ನಡೆದಿದೆ. ಜನರು ಇದನ್ನು ಚರಣಾಮೃತ ಎಂದು ಭ್ರಮಿಸಿ ಸಾಲಿನಲ್ಲಿ ನಿಂತು ಸ್ವೀಕರಿಸಿದ್ದಾರೆ. ವೀಡಿಯೋ ವೈರಲ್ ಆದ ಮೇಲೆ‌ ನೆಟ್ಟಿಗರು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜನರು ಹಿಂದೆ ಮುಂದೆ ಆಲೋಚನೆ ಮಾಡದೇ ಹೀಗೆ ಮಾಡಬಾರದು, ಮೊದಲು ಎಲ್ಲದನ್ನೂ ಗಮನಿಸಿ ನೋಡಬೇಕೆಂದು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದರೆ, ಕೆಲವರು ಇದನ್ನು ಟೀಕಿಸುತ್ತಾ, ಜನರಿಗೆ ಹೆಚ್ಚು ಶಿಕ್ಷಣದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಮಂದಿರದ ಗೋಡೆಯಲ್ಲಿರುವ ಆನೆಯ ಮೂರ್ತಿಯಿಂದ ನೀರು ಬರುತ್ತಿರುವುದನ್ನ ನೋಡಿದ ಜನ ಇದು ಚರಣಾಮೃತ ಎಂದೇ ಭಾವಿಸಿದ್ದು ಇಂತಹ ಘಟನೆಗೆ ಸಾಕ್ಷಿಯಾಗಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಮಂದಿರದ ಆಡಳಿತ ಮಂಡಳಿಯವರು ಕಡೆ ಪಕ್ಷ ಒಂದು ಸೂಚನೆಯನ್ನು ನೀಡುವ ಫಲಕವನ್ನಾದರೂ ಹಾಕಬೇಕಲ್ಲವೇ? ಎಂದು ಸಹಾ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಚರ್ಚೆಯನ್ನು ಹುಟ್ಟು ಹಾಕಿದೆ, ಇದನ್ನು ನೋಡಿ ಕೆಲವರು ವ್ಯಂಗ್ಯ ಸಹಾ ಮಾಡುತ್ತಿದ್ದಾರೆ.

Samantha : ನಾಗಚೈತನ್ಯ ಶೋಭಿತಾ ಮದುವೆ ಸುದ್ದಿ ಬೆನ್ನಲ್ಲೇ ಸಮಂತಾ ಶಾಕಿಂಗ್ ಮಾತು, 2ನೇ ಮದುವೆಗೆ ನಟಿ ಸಿದ್ಧವಾದ್ರಾ?

Leave a Comment