Astrology : ವೈದಿಕ ಜ್ಯೋತಿಷ್ಯದ (Astrology) ಪ್ರಕಾರ, ಶುಕ್ರ ಗ್ರಹವು ಮಾನವನ ಜೀವನದಲ್ಲಿ ಬಹಳ ವಿಶೇಷವಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದೇ ವೇಳೆ ಜಾತಕದಲ್ಲಿ ಶುಕ್ರನ ದುರ್ಬಲ ಸ್ಥಾನದ ಕಾರಣದಿಂದ ವೈವಾಹಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಇದೇ ಸೆಪ್ಟೆಂಬರ್ 18 ರಂದು, ರಾಕ್ಷಸರ ಅಧಿಪತಿಯಾದ ಶುಕ್ರನು ತನ್ನ ರಾಶಿಯನ್ನು ಬದಲಾಯಿಸಲಿದ್ದು, ತುಲಾ ರಾಶಿಯನ್ನು ಪ್ರವೇಶಿಸುವುದರಿಂದ ಈ ಸಂಚಾರವು ಎಲ್ಲಾ ರಾಶಿಚಕ್ರ ಚಿಹ್ನೆಗಳ (Zodiac Signs) ಮೇಲೆ ಪರಿಣಾಮ ಬೀರುತ್ತದೆ.
ಮೀನ (Aquarius) ರಾಶಿಯವರಿಗೆ ಶುಕ್ರ ಸಂಕ್ರಮಣದಿಂದ ವಿಶೇಷವೇನೂ ಘಟಿಸುವುದಿಲ್ಲ. ಆದರೆ ಆರ್ಥಿಕ ಪರಿಸ್ಥಿತಿಯಲ್ಲಿ ಏರಿಳಿತಗಳೊಂದಿಗೆ, ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು. ಅವರು ಶತ್ರುಗಳಿಂದ ಎಚ್ಚರಿಕೆಯಿಂದಿರಬೇಕು. ಕೆಲಸದ ಪ್ರದೇಶದಲ್ಲಿ ಜಗಳಗಳು ಮತ್ತು ವಿವಾದಗಳು ಕಂಡು ಯಶಸ್ಸಿನ ಹಾದಿಗೆ ಇವು ಅಡ್ಡಗಾಲಾಗಬಹುದು.
ವೃಶ್ಚಿಕ (Scorpio) ರಾಶಿಯವರಿಗೆ ಶುಕ್ರ ಸಂಕ್ರಮಣವು ಶುಭವಲ್ಲ. ಕೆಲಸದ ಕ್ಷೇತ್ರದಲ್ಲಿ ಸಮಸ್ಯೆಗಳು ಎದುರಾಗುವುದು. ಆರೋಗ್ಯದ ವಿಚಾರದಲ್ಲಿ ತಾಳ್ಮೆಯಿಂದಿರಬೇಕು. ಆರೋಗ್ಯದ ಬಗ್ಗೆ ಜಾಗರೂಕತೆ ವಹಿಸಿ. ನಿಮ್ಮ ಕೆಲಸದ ಕಡೆ ಗಮನ ಇರಲಿ. ವಿವಾದಗಳು ಮತ್ತು ಪಿತೂರಿಗಳಿಂದ ಆದಷ್ಟು ದೂರ ಇರಿ. ಸ್ನೇಹಿತರು ಮತ್ತು ಸಂಬಂಧಿಕರಿಂದ ನೀವು ಕೆಲವು ಕೆಟ್ಟ ಸುದ್ದಿಗಳನ್ನು ಕೇಳಬಹುದು.
ವೃಷಭ (Taurus) ರಾಶಿಯ ಜನರ ಜೀವನದಲ್ಲಿ ಶುಕ್ರ ಸಂಕ್ರಮಣವು ಮಿಶ್ರ ಪರಿಣಾಮಗಳನ್ನು ಬೀರಲಿದೆ. ಕೆಲವೆಡೆ ಲಾಭ, ಕೆಲವೆಡೆ ನಷ್ಟ ಇರುತ್ತದೆ. ಯಶಸ್ಸನ್ನು ಸಾಧಿಸಲು ಹೆಚ್ಚು ಶ್ರಮಿಸಬೇಕು. ಹೊಸ ಆದಾಯದ ಮೂಲಗಳು ತೆರೆಯಬಹುದು. ಇದೇ ವೇಳೆ ವೆಚ್ಚಗಳು ಹೆಚ್ಚಾಗುತ್ತವೆ. ಹಣವನ್ನು ಉಳಿಸುವ ಪ್ರಯತ್ನ ಮಾಡಿ.