Viral Video: ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಗುಜರಾತಿನ ವಡೋದರಾದಲ್ಲಿ (Vadodara) ಜನ ಜೀವನ ಅಸ್ತವ್ಯಸ್ತವಾಗಿದೆ. ಇಡೀ ವರ್ಷ ಸುರಿಯುವಂತಹ ಮಳೆ ಕೆಲವೇ ದಿನಗಳಲ್ಲಿ ಸುರಿದ ಪರಿಣಾಮ ಕೆಲವು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಹಲವರ ಮನೆಗಳು ನೀರಿನಿಂದಾಗಿ ಹಾಳಾಗಿದೆ. ಜನರು ಮಳೆಯಿಂದಾಗಿ ಪರದಾಡುವಂತಾಗಿದೆ.
ಇವೆಲ್ಲವುಗಳ ನಡುವೆ ಮೊಸಳೆಗಳು ಸಹಾ ಮಳೆಯಿಂದ ಬೇಸತ್ತು ಮುಳುಗಿರವ ಮನೆಗಳ ಛಾವಣಿಗಳ ಮೇಲೆ ಕುಳಿತು ವಿರಮಿಸುತ್ತಿರುವ ದೃಶ್ಯಗಳು ಕಂಡು ಬಂದಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಅಂತಹುದೇ ಒಂದು ವೀಡಿಯೋ ವೈರಲ್ ಆಗಿದೆ. ವೈರಲ್ ವೀಡಿಯೋ (Viral Video) ನೋಡಿ ಜನರು ಅಚ್ಚರಿ ಪಟ್ಟಿದ್ದಾರೆ.
ವಡೋದರಾದ ಅಕೋಟಾ ಸ್ಟೇಡಿಯಂ ಬಳಿಯ ಮನೆಯೊಂದರ ಮೇಲೆ ಒಂದು ಮೊಸಳೆ (Crocodile) ಹಾಯಾಗಿ ವಿಶ್ರಮಿಸುತ್ತಿರುವ ದೃಶ್ಯವೊಂದು ಕಂಡು ಬಂದಿದೆ. ಅದನ್ನು ವೀಡಿಯೋ ಮಾಡಿಕೊಂಡವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ವೀಡಿಯೋ ಈಗ ವೈರಲ್ ಆಗುತ್ತಿದೆ.
ವಡೋದರಾದಲ್ಲಿ ಭಾರೀ ಮಳೆಯಿಂದಾಗಿ ವಿಶ್ವಮಿತ್ರೆ ನದಿ ತುಂಬಿ, ಉಕ್ಕಿ ಹರಿದು ಜನವಸತಿ ಪ್ರದೇಶಗಳಿಗೆ ನುಗ್ಗಿದ್ದರಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಇಲ್ಲಿ ಪ್ರವಾಹದಿಂದಾಗಿ ಮನೆ ಮಹಡಿಯ ಮೇಲೆ ನಿಂತು ರಕ್ಷಣೆಗಾಗಿ ಕೈ ತೋರಿದವರನ್ನು ಏರ್ ಲಿಫ್ಟ್ ಮಾಡಿದೆ.
Amruthadhaare: ಅಪ್ಪಿ ಪಾರ್ಥನ ಕಂಡ್ರೆ ಚಾನೆಲ್ ಚೇಂಜ್ ಮಾಡ್ತೀವಿ, ಈ ಕ್ಯೂಟ್ ಜೋಡಿ ಬಗ್ಗೆ ಇಂತ ಅಸಮಾಧಾನ ಏಕೆ?