Viral Video : ಭಾರತದ ಅತ್ಯಂತ ಶ್ರೀಮಂತ ದೇಗುಲ ಎಂದ ಕೂಡಲೇ ನೆನಪಾಗುವುದು ತಿರುಮಲ ತಿರುಪತಿ (Tirumala Tirupati) ಶ್ರೀವೆಂಕಟೇಶ್ವರನ ದೇಗುಲ. ದೇವರ ದರ್ಶನಕ್ಕೆ ಗಂಟೆಗಳು, ಕೆಲವೊಮ್ಮೆ ಒಂದು ಇಡೀ ದಿನ, ಅದಕ್ಕಿಂತ ಹೆಚ್ಚಿನ ಸಮಯ ಕಾಯಲೇಬೇಕಾದಷ್ಟು ಜನದಟ್ಟಣೆ ತಿರುಮಲ ಗಿರಿಯಲ್ಲಿ ಇರುತ್ತದೆ.
ಸದಾ ಭಕ್ತರಿಂದ ತುಂಬಿ ತುಳುಕುವ ತಿರುಮಲ ಗಿರಿಯಲ್ಲಿ ಸ್ವಾಮಿಯ ದರ್ಶನಕ್ಕೆ ಮೈಮೇಲೆ ಬರೋಬ್ಬರಿ 25 ಕಿಲೋ ಚಿನ್ನಾಭರಣ ಧರಿಸಿ ಬಂದ ಭಕ್ತರ ವೀಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ. ಈ ವಿಶೇಷ ಭಕ್ತರನ್ನು ನೋಡಿದ ಜನರು ಸಹಾ ಅಚ್ಚರಿ ಪಟ್ಟಿದ್ದಾರೆ.
ತಿರುಮಲ ಗಿರಿಯಲ್ಲಿ ನೆರೆದಿದ್ದ ಬಹಳಷ್ಟು ಜನರು ಇವರನ್ನೇ ನೋಡುತ್ತಾ ಇದ್ದ ದೃಶ್ಯ ಸಾಮಾನ್ಯವಾಗಿತ್ತು. ಅವರ ಅಂತಹ ಶ್ರೀಮಂತಿಕೆಯನ್ನು ನೋಡಿ ನೆರೆದಿದ್ದ ಜನರು ಒಂದು ಕ್ಷಣ ದಂಗಾಗಿ ಹೋಗಿದ್ದರು ಎನ್ನುವುದರಲ್ಲಿ ಅನುಮಾನವೇ ಇಲ್ಲ.
Viral Video: ಪತಿಯಿಂದ ಮಾಸಿಕ 6 ಲಕ್ಷ ರೂ. ಜೀವನಾಂಶ ಕೇಳಿದ ಮಹಿಳೆ: ಬೇಕಾದ್ರೆ ನೀನೇ ಸಂಪಾದನೆ ಮಾಡೆಂದ ನ್ಯಾಯಾಧೀಶರು
ಪುಣೆಯಿಂದ (Pune) ಬಂದಿದ್ದ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ತಿರುಮಲ ಗಿರಿಗೆ ಬಂದಿದ್ದರು. ನಾಲ್ಕು ಜನರಲ್ಲಿ ಯುವತಿಯ ಮೈ ಮೇಲೆ ಬಂಗಾರದ ಒಡವೆಗಳು, ಚಿನ್ನದ ಸೀರೆ ಕಂಡರೆ, ಅವರ ಜೊತೆಯಲ್ಲಿದ್ದ ಪುಟ್ಟ ಬಾಲಕ ಚಿನ್ನದ ಅಂಗಿಯನ್ನು ಧರಿಸಿದ್ದ. ಅಲ್ಲಿದ್ದ ಇಬ್ಬರು ಯುವಕರು ಸಾಂಪ್ರದಾಯಿಕ ವಸ್ತ್ರದೊಂದಿಗೆ ಕತ್ತು ಮತ್ತು ಕೈಗಳಿಗೆ ಚಿನ್ನದ ಸರಗಳನ್ನು ಧರಿಸಿದ್ದರು.