Aamir Khan: ಭಾವುಕರಾದ ಅಮೀರ್ ಖಾನ್, ಸಿನಿಮಾರಂಗಕ್ಕೆ ವಿದಾಯ ಹೇಳುವುದೊಂದೇ ದಾರಿ, ಫ್ಯಾನ್ಸ್ ಶಾಕ್

Written by Soma Shekar

Published on:

---Join Our Channel---

Aamir Khan: ಬಾಲಿವುಡ್ ನ (Bollywood) ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಹೆಸರನ್ನು ಪಡೆದಿರುವ ನಟ ಅಮೀರ್ ಖಾನ್ (Aamir Khan) ತಮ್ಮ ಲಾಲ್ ಸಿಂಗ್ ಚೆಡ್ಡಾ (Lal Singh Chadhdha) ಸಿನಿಮಾದ ಹೀನಾಯ ಸೋಲಿನ ನಂತರ ಸಿನಿಮಾಗಳ ಕಡೆಗೆ ಅಷ್ಟಾಗಿ ಗಮನವನ್ನು ನೀಡಿದೇ ಸಿನಿಮಾಗಳಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಅಲ್ಲದೇ ಸಿನಿಮಾಗಳಿಂದ ನಿವೃತ್ತಿ ಹೊಂದುವ ಕುರಿತಾಗಿ ಸಹಾ ಆಗಾಗ ಮಾತನಾಡಿರುವ ಈ ನಟ ಈಗ ಮತ್ತೊಮ್ಮೆ ಅಂತಹುದೇ ವಿಚಾರಗಳನ್ನು ಮಾತನಾಡಿದ್ದಾರೆ.

ನಟಿ ರಿಯಾ ಚಕ್ರವರ್ತಿ ಅವರ ಪಾಡ್ ಕಾಸ್ಟ್ ಅಧ್ಯಾಯ 2 ನ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಮೀರ್ ಖಾನ್ ಅವರು ರಿಯಾ ಜೊತೆಗೆ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿರುವುದನ್ನ ನೋಡಬಹುದಾಗಿದೆ. ಅಮೀರ್ ಖಾನ್ ಅವರು ಈ ವೇಳೆ ಸ್ಟಾರ್ ಡಂ ಮತ್ತು ಸಿನಿಮಾಗಳ ಬಗ್ಗೆ‌ ಮಾತನಾಡಿದ್ದಾರೆ.

ಅಮೀರ್ ಖಾನ್ ಅವರು ತಾನು ಸಿನಿಮಾಗಳಿಂದ ದೂರ ಉಳಿಯುವುದಾಗಿ ಹೇಳಿದ್ದು ಅದಕ್ಕೆ ರಿಯಾ ಇದು ಸುಳ್ಳು ಎಂದಿದ್ದಾರೆ. ಆಗ ಅಮೀರ್ ಖಾನ್ ಇಲ್ಲ ನಾನು ಸತ್ಯವನ್ನೇ ಹೇಳುತ್ತಿದ್ದೇನೆ ಎನ್ನುವ ಮಾತುಗಳನ್ನು ಸಹಾ ಹೇಳಿದ್ದಾರೆ. ಹೀಗೆ ಮಾತನಾಡುವ ಸಂದರ್ಭದಲ್ಲಿ ಒಂದು ಕಡೆ ಅಮೀರ್ ಖಾನ್ ಭಾವುಕರಾಗಿ ಕಣ್ಣೀರನ್ನು ಸಹಾ ಹಾಕಿದ್ದಾರೆ.‌

ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲಿನ ನಂತರ ನಟ ಚಾಂಪಿಯನ್ಸ್ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅದೇ ವೇಳೆ ಸಿನಿಮಾಗಳಿಗಿಂತ ಬಿಡುವು ಪಡೆದು ಕುಟುಂಬ ಮತ್ತು ಮಕ್ಕಳ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವ ಆಲೋಚನೆಯನ್ನು ಸಹಾ ನಟ ಮಾಡಿದ್ದಾರೆ. ಇವೆಲ್ಲವುಗಳ ನಡುವೆ ವಿಜಯ್ ಸೇತುಪತಿಯ ಸೂಪರ್ ಹಿಟ್ ಸಿನಿಮಾ ಮಹಾರಾಜದ ರಿಮೇಕ್ ಹಕ್ಕನ್ನು ನಟ ಪಡೆದಿದ್ದಾರೆ ಎನ್ನಲಾಗಿದೆ.

Bigg Boss Kannada: ಸೀಸನ್ 11 ಬರ್ತಿದೆ, ಸೀಸನ್ 10 ರಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಸ್ಪರ್ಧಿಗಳೆಲ್ಲಾ ಏನ್ಮಾಡ್ತಾ ಇದ್ದಾರೆ

Leave a Comment