Varamahalakshmi Festival: ಶ್ರಾವಣ ಮಾಸ ಆರಂಭದೊಂದಿಗೆ ಸಾಲು ಸಾಲು ಹಬ್ಬಗಳು ಬರುತ್ತವೆ. ಅವುಗಳಲ್ಲಿ ಬಹಳ ವಿಶೇಷವಾದ ಹಬ್ಬ ವರ ಮಹಾಲಕ್ಷ್ಮಿ ಹಬ್ಬ (Varamahalakshmi Festival). ಮಹಿಳೆಯರು ಈ ಹಬ್ಬವನ್ನು ಬಹಳ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸುತ್ತಾರೆ. ಈ ದಿನ ಅವರು ಹಬ್ಬದ ವ್ರತಾಚರಣೆ ಹಾಗೂ ಉಪವಾಸ ಮಾಡುತ್ತಾರೆ. ವರಮಹಾಲಕ್ಷ್ಮೀ ಹಬ್ಬವು ಐಶ್ವರ್ಯದ ಒಡತಿಯಾದ ಶ್ರೀಮಹಾಲಕ್ಷ್ಮಿಯ ಪೂಜಾ ದಿನವಾಗಿದೆ.
ಶ್ರಾವಣದ ಎರಡನೇ ಶುಕ್ರವಾರದಂದು ದೇಶದ ವಿವಿಧೆಡೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಲಾಗುವುದು. ಈ ಬಾರಿ ನಾಳೆ ಅಂದರೆ ಆಗಸ್ಟ್ 16ರಂದು ವರ ಮಹಾಲಕ್ಷ್ಮಿ ಹಬ್ಬ ಆರಿಸಲಾಗುತ್ತಿದ್ದು, ಮನೆಗಳಲ್ಲಿ ಮಹಿಳೆಯರು ಭಕ್ತಿಯಿಂದ ಕಲಶ ಸ್ಥಾಪನೆ ಮಾಡಿ, ಶ್ರೀ ಮಹಾಲಕ್ಷ್ಮಿಯನ್ನು ಆರಾಧನೆ ಮಾಡುತ್ತಾರೆ. ನಾವೀಗ ವರಮಹಾಲಕ್ಷ್ಮಿ ವ್ರತವನ್ನ ಯಾವ ಮುಹೂರ್ತದಲ್ಲಿ ಆಚರಿಸಬೇಕೆಂಬುದನ್ನು ತಿಳಿಯೋಣ.
ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆ ಮಾಡಲು ಸುಮಾರು 2 ಗಂಟೆಗಳ ಸಮಯ ಬಹಳ ಶುಭ ಎನ್ನಲಾಗಿದ್ದು, ಈ ದಿನ ವಿವಿಧ ಲಗ್ನ ಗಳು ಸಹಾ ಶುಭದಾಯಕವಾಗಿದ್ದು ಈ ಸಮಯದಲ್ಲಿ ಪೂಜೆ ಮಾಡಿದರೆ ಶುಭ ಫಲಗಳು ದೊರೆಯುತ್ತದೆ ಎನ್ನಲಾಗಿದೆ. ಹೌದು, ಬೆಳಗ್ಗೆ 05:57 ರಿಂದ ಬೆಳಗ್ಗೆ 08:14 ರವರೆಗೆ ಸಿಂಹ ಲಗ್ನವಿದ್ದು, ಈ ಸಮಯದಲ್ಲಿ ಸಹಾ ಪೂಜೆಯನ್ನು ಮಾಡಬಹುದಾಗಿದೆ.
ಆಗಸ್ಟ್ 16 ರಂದು ಮಧ್ಯಾಹ್ನ 12:50 ರಿಂದ 03:08 ರವರೆಗೆ ವೃಶ್ಚಿಕ ಲಗ್ನವಿದೆ. ನಂತರ ಸಂಜೆ 6:55 ರಿಂದ ರಾತ್ರಿ 8:22 ರವರೆಗೆ ಕುಂಭ ಲಗ್ನ ವಿದ್ದು, ಆಗಸ್ಟ್ 16 ರ ರಾತ್ರಿ 11:22 ರಿಂದ ಆಗಸ್ಟ್ 17 ರಂದು ಮಧ್ಯರಾತ್ರಿ 01:18 ರವರೆಗೆ ವೃಷಭ ಲಗ್ನ ಇರಲಿದ್ದು, ಈ ಶುಭ ಸಮಯದಲ್ಲಿ ಲಕ್ಷ್ಮಿ ಪೂಜೆ ಮಾಡಿದರೆ ಸಂಪತ್ತು ಹಾಗೂ ಸಮೃದ್ಧಿ ಲಭಿಸುತ್ತದೆ ಎಂದು ನಂಬಲಾಗಿದೆ.